ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಕ್ಷಮೆ

ಕ್ಷಮಯಾಧರಿತ್ರಿ ಎಂದು ಭೂ ತಾಯಿಯನ್ನು ಕರೆಯುತ್ತೇವೆ ಕಾರಣ ಅವಳ ಸಹನಶೀಲತೆ.ಕ್ಷಮೆ ನಮ್ಮ ಬದುಕಿನ ಅಗತ್ಯವಾಗಿದೆ.ನಾವು ಮಕ್ಕಳಿಗೆ ಪ್ರತಿದಿನ ಮನೆಕೆಲಸ (Home work)ನೀಡುತ್ತೇವೆ.ಮಾಡಿಕೊಂಡು ಬರದ ಮಗುವಿಗೆಕಾರಣ ಕೇಳಿ ಕ್ಷಮಿಸುತ್ತೇವೆ ಆದರೆ ” ನಾಳೆ ತಪ್ಪದೇ ಮಾಡಿಕೊಂಡು ಬರಲೇ…ಬೇಕು”ಎಂದು ಎಚ್ಚರಿಸುವದನ್ನು ಮರೆಯುವದಿಲ್ಲ.ಗೊತ್ತಾಗದೆ ತಪ್ಪುನಡೆದರೆ ಕ್ಷಮೆಯ ಹಸ್ತದಿ ಅಸ್ತು ಎನ್ನಬಹುದು.ಕೆಲವೊಮ್ಮೆ ನಮ್ಮ ಜೀವನದಲ್ಲಿ ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಲೆಂದೇ ಕಷ್ಟಗಳು ಬರುತ್ತವೆ. ಹಾಗಾದರೆ ಕ್ಷಮೆಯ ಅರ್ಥ ನಡೆದ ಅನ್ಯಾಯವನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದಲ್ಲ.ಹಗೆ,ಸೇಡಿನ ಋಣಾತ್ಮಕ ಭಾವನೆಗಳಿಂದ ಮುಕ್ತಿ ಪಡೆಯುವದೇ ಆಗಿದೆ.ಬದುಕಿನ ಒಂದೊಂದೂ ಘಟನೆಗಳನ್ನು ಮನದಲ್ಲಿ-ಮಿದುಳಲ್ಲಿ ಮರೆಯದೇ ಕಾದಿರಿಸಿಮತ್ತೆ ಮತ್ತೆ ನೆನೆದು ಉದ್ವೇಗಗೊಳ್ಳುತ್ತೇವೆ.ಎಂದೋ ಘಟಿಸಿದ ಘಟನೆಗಳು ಇಂದು ನಮ್ಮ ಎದೆ ಬಡಿತವನ್ನು ಏರಿಸುವಾಗ ನಾಳೆಗಳಿಗೆ ಕಾಲಿಡಲು ಸಾಧ್ಯವೇ?

ಒಮ್ಮೆ ಪಾಲಕರೊಬ್ಬರು ” ಮೇಡಂ ನೀವು ಹೇಳಿದಂತೆಪ್ರತಿಭಾವಂತರಾದ ನನ್ನ ಮೂವರು ಹೆಣ್ಣು ಮಕ್ಕಳನ್ನು ಚನ್ನಾಗಿ ಓದಿಸಿದೆ,ಆದರೆ ಮೊದಲೇ ಮಗಳು ತನ್ನ ಸಹಪಾಠಿಯನ್ನೇ ವರಿಸಲನುವಾಗಿದ್ದಾಳೆ.ಅದಕ್ಕೇನಾ ಮೇಡಂ ನಾವು ಶಿಕ್ಷಣ ಕೊಡೋದು! ” ಎಂದಾಗ ನಾನು “ಅವಳ ಆಯ್ಕೆ ಸರಿಯಾಗಿದೆ ಕಾರಣ ಇಬ್ಬರೂ ಇಂಜನಿಯರಿಂಗ್ ಮುಗಿಸಿ ಕೆಲಸದಲ್ಲಿದ್ದಾರೆ.ಹುಡುಗ ಕೂಡ ಸ್ಫುರದ್ರೂಪಿ.ಪರಸ್ಪರ ಅರ್ಥ ಮಾಡಿಕೊಂಡಿದ್ದಾರೆ, ಮೇಲಾಗಿ ಅವರೇನೂ ನಿಮಗೆ ತಿಳಿಸದೇ ಮದುವೆ ಆಗಿಲ್ಲ,ನಿಮ್ಮ ಮುಂದೆ ಇದ್ದದನ್ನು ಯಥಾವತ್ತಾಗಿ ಹೇಳಿದ್ದಾರೆ”ಎಂದಾಗ ನಕಾರ ವ್ಯಕ್ತ ಪಡಿಸಿದ ಅವರಿಗೆ ಸಮಜಾಯಿಷಿ ಕ್ಷಮಿಸಲು ಸಲಹೆ ನೀಡಿದಾಗ ತಲೆಯಾಡಿಸಿ “ಮದುವೆಗೆ ಕರೀತೇನೆ ನೀವು ಬರಲೇಬೇಕು “ಎಂದು ನಿರಾಳಮನದಿ ತೆರಳಿದರು.ಕ್ಷಮಿಸುವದು ನಮ್ಮ ಮನಸ್ಸು ಮತ್ತು ದೇಹದ ಆರೋಗ್ಯದ ಮೇಲೆ ಅಗಾಧ ಪರಿಣಾಮವನ್ನು ಬೀರಬಲ್ಲದು.ಗುದ್ದಾಡುತ್ತಿರುವ ಮನಸ್ಸಿನೊಡನೆ ನಾವುರಾಜಿಯಾಗುವುದೇ ಕ್ಷಮೆಯಾಗಿದೆ.ವ್ಯವಹಾರಸ್ಥ ತಂದೆ ಗಿರಾಕಿಗಳೊಡನೆ ನಗುತ್ತಾ ಮಾತನಾಡಿದಂತೆ ತನ್ನ ಹೆತ್ತ ಮಕ್ಕಳ ಚಿಕ್ಕ ತಪ್ಪನ್ನೆ ದೊಡ್ಡದು ಮಾಡಿಪ್ರೀತಿಯಿಂದ ಮಾತನಾಡಿಸದೇ ಬಾಯಿಗೆ ಬಂದಂತೆ ಬಯ್ಯುವಾಗ ತಂದೆ ಮಕ್ಕಳ ಮಧ್ಯೆ ಬಿರುಕಿನ ಕಂದಕ ಆಳವಾಗುತ್ತಲೆ ಹೋಗುತ್ತದೆ.ಇಂತಹ ಸನ್ನಿವೇಶದಲ್ಲಿ ಕ್ಷಮೆಯ ಮಂತ್ರ ಹೃದಯದಿ ಶಾಂತತೆಯೊಂದಿಗೆ ತಪ್ಪನ್ನು ತಿದ್ದಿಕೊಂಡು ಹೋಗುವ ಛಾತಿಯನ್ನು ಬೆಳೆಸುತ್ತದೆ.ಜೀವನ ಸಂಧ್ಯೆಯಲಿ ತಮ್ಮ ಬದುಕಿನ ಸಿಂಹಾವಲೋಕನ ಮಾಡಿದರೆ ಹೆಚ್ಚಿನವರಿಗೆ ‘ನಾನು ಅವರನ್ನು ಅಷ್ಟೊಂದು ದ್ವೇಷಿಸಬಾರದಿತ್ತು,ಕ್ಷಮಿಸಿ ಬಿಡಬೇಕಾಗಿತ್ತು’ಎಂದು ಮನದ ಶಾಖಕೆ ತುಸು ತಣ್ಣಿರೆರಚುವ ಮನ ಆಗ ನನ್ನದಾಗಬಾರದಿತ್ತೆ,ಅಯ್ಯೋ ವಿಧಿಯ ಅಟ್ಟಹಾಸದ ಎದುರು ಯಾರೂ ಇಲ್ಲ, ಕಾಗೆ ಕೂರುವುದಕ್ಕೂ ಟೊಂಗೆ ಮುರಿಯುವದಕ್ಕೂ ಸಮ ಎಂಬ ಘಟನೆ ನಡೆದಾಗ ಕಾಲಘಟ್ಟದ ಕರ್ಮ ಮಾರ್ಗದಲಿ  ಅವರು

 ಬಿತ್ತಿದಂತೆ ಅವರೇ ಬೆಳೆವ ಮನ ನಿಯಂತ್ರಣ ನಮ್ಮದಾಗಿರಬೇಕಾಗುತ್ತದೆ.ನಮಗೆ ಆಗದವರನ್ನು ದ್ವೇಷಿಸುತ್ತಿದ್ದರೆ ಕ್ರಮೇಣ ನಮ್ಮ ಶಕ್ತಿ,ಸಾಮರ್ಥ್ಯ,ಉತ್ಸಾಹ,ಚೈತನ್ಯಗಳನ್ನು ಅವರ ಕೈಯಲ್ಲಿ ಇಡುತ್ತಾ ಹೋಗುತ್ತೇವೆ.ಅವರು ನಮ್ಮ ನಿದ್ರೆ,ಹಸಿವು,ಆರೋಗ್ಯ ಸುಖ ನೆಮ್ಮದಿಗಳನ್ನು ಕಸಿದುಕೊಳ್ಳುತ್ತಾರೆ.ನಾವು ದ್ವೇಷಿಸುವ ವ್ಯಕ್ತಿಗೆ ನಮ್ಮಿಂದ ಯಾವ ತರಹದ ಹಾನಿಯೂ ಆಗುವದಿಲ್ಲ,ಬದಲಾಗಿ ಹಗಲುರಾತ್ರಿಆ ದ್ವೇಷ ಭಾವದಲಿ ನಾವೇ ಬೆಂದು ನಮ್ಮ ನೋವಿಗೆ ನಾವೇ ಕಾರಣವಾಗುತ್ತೇವೆ.ಅದೇ ದ್ವೇಷವನ್ನು ಪ್ರೀತಿಯಿಂದ ಕ್ಷಮೆ ತಾಳ್ಮೆಯಿಂದ ಗೆದ್ದರೆ ಆಗುವ ಸಂತೋಷ ಅನುಭವಿಸಿಧವರ ಧನ್ಯತಾಭಾವದಿ ಆಂತರ್ಯದ ಆನಂದದ ಬುಗ್ಗೆ ಉಕ್ಕಿ ಸಂತಸದಕ್ಷಣಗಳ ಮಾತ್ರ ಹೆಕ್ಕಿ ಜೀವನಯಾತ್ರೆಯ ಯಶಸ್ಸಿಗೆ ಕಾರಣವಾಗುತ್ತದೆ.ಯಾವದೇ ವ್ಯಕ್ತಿಯ ಕುರಿತು ನಮ್ಮ ಮನದಲ್ಲಿ ಕೋಪ ವ್ಯಾಪಿಸಿದಾಗ ಆ ವ್ಯಕ್ತಿ ಮಾಡಿದ ಒಳ್ಳೆಯ ಕೆಲಸಗಳನ್ನು ನೆನೆಯಬೇಕು ಎಂಬುದು ಅನುಭವಿಗಳ ಮಾತಾಗಿದೆ.ಈ ನಿಟ್ಟಿನಲ್ಲಿ ಕ್ಷಮೆ ನೊಂದ ಘಾಸಿಯಾದ ಹೃದಯಕ್ಕೆ ಮುಲಾಮಿನಂತೆ ಕೆಲಸ ಮಾಡುತ್ತದೆ.ಘಟನೆಗಳು ನಡೆದು ವರ್ಷ ವರ್ಷಗಳಾಗಿದ್ದರೂ ನೆನಪು ಹಸಿಯಾಗಿ,ಅಂದಿನ ನೋವನ್ನು ಇಝದು ನಡೆದಂತೆ ಮತ್ತೆ ಮತ್ತೆ ಅನುಭವಿಸುತ್ತೇವೆ.ಈ ಕಹಿಯ ನೆನಪುಗಳೇ ನಮ್ಮ ಆರೋಗ್ಯಕ್ಕೆ ಬಾಧಕವಾಗುತ್ತವೆ.

ಕುದಿದ ಹೃದಯವನು ಶಾಂತವಾಗಿರಿಸುವದಾಗಿದೆ.ನಮ್ಮಮಾನಸಿಕ ದೈಹಿಕ  ಅನೇಕ ಕಾಯಿಲೆಗಳಿಗೆ ಮೈಕೈನೋವುಗಳಿಗೆ ಎದೆಯಲ್ಲಿ ಹೊತ್ತ ಹಗೆ ,ಒತ್ತಡಗಳೇ ನೇರ ಕಾರಣ.ಕೋಪ ಕರಗಿದಂತೆ ಕಹಿ ಮರೆಯಾಗಿನಮ್ಮ ಉಸಿರಾಟ ನಿರಾಳವಾಗುತ್ತದೆ.ಎದೆಯಲ್ಲಿ ಹೊತ್ತ ಹಗೆ ಮತ್ತು ಕಹಿ ನಮ್ಮನಿದ್ರೆಯನ್ನು ಕಸಿಯುತ್ತದೆ.ರಕ್ತದೊತ್ತಡವನ್ನೇರಿಸಿ ಖಿನ್ನತೆಗೆ ತಳ್ಳುತ್ತದೆ.ಕ್ಷಮೆ ಎದೆಯಲ್ಲಿ ಹೆಪ್ಪುಗಟ್ಟಿದ ಗಂಟುಗಂಟಾದ ಅದೆಷ್ಟೋ ಭಾವನೆಗಳ ಸಿಕ್ಕನ್ನು ಬಿಡಿಸಲು ಅಗತ್ಯವಾಗುತ್ತದೆ.ಮನಸ್ಸು  ರೋಗವನ್ನು ಸೃಷ್ಟಿಸಬಲ್ಲದು,ಗುಣಪಡಿಸ ಬಲ್ಲದು! ತಾಳ್ಮೆ,ಪ್ರೀತಿ ಕರುಣೆ ನಿಸ್ವಾರ್ಥ ಮನೋಭಾವನೆಗಳು ಬಾಲ್ಯದಲಿ ಇಂತಹ ರಚನ್ತ್ಮಕ ಭಾವನೆಗಳಿಗೆ ಸೂಕ್ತವಾದ ವಾತಾವರಣವನ್ನು ಒದಗಿಸಿ ಕೊಡೀವ ಗುರುತರ ಹೊಣೆ ಪಾಲಕರದ್ದಾಗಿದೆ.ನಮ್ಮ ಜೀವನದ ನೋವಿನ ನೆನಪುಗಳಿಂದ ಬಿಡುಗಡೆ ಪಡೆಯುವ ಪ್ರಕ್ರಿಯೆ ಆಗಿದ್ದು,ಕೆಟ್ಟ ಅನುಭವಗಳ ಹಿಂದೆ ಬಿಟ್ಟು ಅದರ ಪರಿಣಾಮದಿಂದ ಕಲಿತ ಅನುಭವದ ಪಾಠಗಳನ್ನೇ ಗೆಲುವಿನ ಸೋಪಾನವನ್ನಾಗಿಸಿದಾಗ ಜೀವನ ಆರೋಗ್ಯದ ನೆಲೆಯಾಗಲು ಸಾಧ್ಯ,ಅಲ್ಲವೇ?


ಭಾರತಿ ನಲವಡೆ

ಶ್ರೀಮತಿ ಭಾರತಿ ಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಂಗಳವಾಡದಲ್ಲಿ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು
2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.
ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ
ರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾ ಸಾಹಿತ್ಯ ಪುರಸ್ಕಾರ 2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ
6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆ ಸಲ್ಲಿಸುತ್ತಿದ್ದಾರೆ

Leave a Reply

Back To Top