ಕಾವ್ಯ ಸಂಗಾತಿ
ಗಜಲ್
ಬಾಗೇಪಲ್ಲಿ
ಮಸೀದಿಯಲಿ ಆತ್ಮಜ್ಯೋತಿಯನು ಬೆಳಗಲು ಬಿಡು
ಮಂದಿರದಲಿ ಸಮೂಹ ಪ್ರಾರ್ಥನೆ ಮೊಳಗಲು ಬಿಡು.
ಧರ್ಮ ಎಂಬುವುದು ಹೃದಯದಿ ಕುಳಿತ ಗಟ್ಟಿ ನಂಬಿಕೆ
ಪ್ರೀತಿಯು ಅದರ ಎಡೆಗಿನ ಹೆದ್ದಾರಿ ಅಂತಾಗಲು ಬಿಡು
ಅವನು ಹಿಂದೂ ಇವನೋರ್ವ ಮುಸಲ್ಮಾನ ಎನಲೇಕೆ
ಎಷ್ಟು ಬಿಡಿಸಿ ಹೇಳಿದರೂ ಮನುಜರಂತೆ ಬದುಕಲು ಬಿಡು
ಜಾತಿ ಮತಗಳ ಮಾತನಾಡುತ ಹೊಡೆದಾಡುವುದು ಏಕೆ
ಈ ಪುಣ್ಯಭೂಮಿ ನಮದೆಲ್ಲರದೆನುತ ಕುಣಿಯಲು ಬಿಡು
ಮುಟ್ಟಿನೋಡಿ ಅಸದ್ (ಕೃಷ್ಣ) ನನ್ನು ತೂಗಿ ಅಳೆಯಬೇಡ
ಭರತಮಾತೆ ನಕ್ಷೆಯಲ್ಲಿ ತಾರೆಗಳಂತೆ ಮಿನುಗುಟ್ಟಲು ಬಿಡು.
Very nice friend