ಗೊರುರೂ ಅನಂತರಾಜರವರ ಬಣ್ಣದ ಬದುಕು ಯಾಕೂಬ

ಪುಸ್ತಕ ಸಂಗಾತಿ

ಗೊರುರೂ ಅನಂತರಾಜರವರ ಬಣ್ಣದ ಬದುಕು ಯಾಕೂಬ

ಬಣ್ಣದ ಬದುಕು ಯಾಕೂಬ

ಸಿನಿಮಾ, ಕಿರುಚಿತ್ರ, ಧಾರಾವಾಹಿಗಳಂತೆ ರಂಗಭೂಮಿಯೂ ಮನೋರಂಜನೆ ನೀಡುವಲ್ಲಿ ಅತೀ ಪ್ರಮುಖ ಪಾತ್ರ ವಹಿಸಿ ಜನತೆಯ ಮನದಲ್ಲಿ ಸ್ಥಿರಕಾಲ ಉಳಿfಯುವಲ್ಲಿ ಯಶಸ್ವಿಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಈ ನಿಟ್ಟಿನಲ್ಲಿ ಹಾಸನ ಜಿಲ್ಲೆಯೂ ಕೂಡ ಅತ್ಯಂತ ಪ್ರತಿಭಾವಂತ ಕಲಾವಿದರನ್ನೂ, ನಿರ್ದೇಶಕರನ್ನೂ, ಬರಹಗಾರರನ್ನೂ ಹೊಂದಿ ಕಲಾಕ್ಷೇತ್ರದಲ್ಲಿ ಶ್ರೀಮಂತಿಕೆಯಿಂದ ಬೀಗುತ್ತಿರುವುದು ಸಂತಸದ ವಿಚಾರ . ಜಿಲ್ಲೆಯ ಹಿರಿಯ ಹಾಗೂ ಜನಪ್ರಿಯ ಸಾಹಿತಿಗಳ ಪಟ್ಟಿಯಲ್ಲಿ ರಾರಾಜಿಸಬಹುದಾದವರಲ್ಲಿ ಶ್ರೀಯುತ ಗೊರೂರು ಅನಂತ ರಾಜು ಅವರೂ ಒಬ್ಬರು. ಅವರ ಬಿಡುವಿಲ್ಲದ ಲೇಖನಿಯಿಂದ ಧಾರಾಕಾರವಾಗಿ ಹರಿದುಬರುವ ಕಥೆ, ಕವನ, ಲೇಖನಗಳು ಜನರ ಮನಸ್ಸಿನಲ್ಲಿ ಓದುವ ಆಸಕ್ತಿಯನ್ನು ಮೂಡಿಸುವುದರೊಂದಿಗೆ ಮೌಲ್ಯಯುತವಾಗಿಯೂ ವಿಶಿಷ್ಟ, ವಿಶೇಷತೆಯೊಂದಿಗೆ ಹಲವಾರು ಉತ್ತಮ ಮಾಹಿತಿಗಳನ್ನೊಳಗೊoಡಿರುತ್ತವೆ.

   ಈ ನಿಟ್ಟಿನಲ್ಲಿ ಶ್ರೀಯುತರ ರಂಗಭೂಮಿಯ ನಾಟಕಗಳ ಬಗೆಗಿನ ಲೇಖನಗಳು ಅತ್ಯಂತ ಮಹತ್ವಪೂರ್ಣವಾಗಿ ಮೂಡಿಬಂದಿದ್ದು  ಓದುಗರ ಕಣ್ಮುಂದೆ ದೃಶ್ಯಾವಳಿಗಳು ಪ್ರತ್ಯಕ್ಷವಾದಂತೆ ಅನ್ನಿಸದೇ ಇರದು.

   ಉತ್ತಮ ರಂಗಪ್ರಯೋಗ ಟಿಪ್ಪುವಿನ ನಿಜ ಕನಸುಗಳು ನಾಟಕದ ಲೇಖನವು ಟಿಪ್ಪುವಿನ ಸೋಲು ಗೆಲುವು ರಾಜತಂತ್ರಗಳ ಬಗೆಗೆ, ಹಾಗೂ ಅವನ ಮತ ವಿಸ್ತರಣೆಯೇ ಮುಖ್ಯ ಉದ್ದೇಶವಾಗಿದ್ದುದರ ಬಗ್ಗೆ, ವಿಸ್ತ್ರತವಾಗಿ ಬೆಳಕು ಚೆಲ್ಲಿ ಸ್ವತಃ ಪಾತ್ರಗಳು ಸನ್ನಿವೇಶಗಳು ಸಂಪೂರ್ಣ ಕಥಾನಕವೇ ಕಣ್ಮುಂದೆ ಬಂದಂತೆ ಭಾಸವಾಗುತ್ತದೆ.

    ಡಾ. ರಾಜಪ್ಪ ದಳವಾಯಿಯವರ ವಿ ದ ಪೀಪಲ್ ಆಫ್ ಇಂಡಿಯಾದಲ್ಲಿ ಡಾ.ಅಂಬೇಡ್ಕರ್ ರವರ ಜೊತೆಗೆ ಸಂವಿಧಾನ ರಚನೆಯ ಪೂರ್ಣ ಮಾಹಿತಿಯೊಂದಿಗೆ ನಡೆದ ಕಾರ್ಯಾಗಾರ ಅದರಲ್ಲಿ  ಮಹಿಳೆಯರು ವಹಿಸಿದ ಮುಖ್ಯ ಪಾತ್ರವನ್ನು ವೈಭವೀಕರಿಸಿದ್ದಾರೆ

   ವಿಭಿನ್ನ ಏಕ ವ್ಯಕ್ತಿ ರಂಗಪ್ರಯೋಗ ತಾಯಿಯಾಗುವುದೆಂದರೆ ಎಂಬ ಲೇಖನವಂತೂ ಸ್ಮಿತಾ ಅವರೇ ಬರೆದು ನಿರ್ದೇಶಿಸಿ ನಟಿಸಿರುವ ತಮ್ಮ ಜೀವನ ಕಥಾನಕದಲ್ಲಿ ಒಬ್ಬ ತಾಯಿಯಾಗಲಾರದ ಹೆಣ್ಣು ಮಗಳ ಯಾತನೆ, ವೇದನೆಗಳೊಂದಿಗಿನ ಆಕೆಯ ಮನೋಜ್ಞ ಅಭಿನಯ, ದಿಂಡಗೂರು ತಂಡದ ಕೇರಿ ಹಾಡುವಿನಲ್ಲಿ ಸಂತೋಷ ಅವರ ಪರಿಶ್ರಮ, ಒಂದು ಹಳ್ಳಿಯ, ಕೇರಿಯಲ್ಲಿ ನಡೆಯುವ ಜನಾಂಗಗಳ ಘಟನಾವಳಿಗಳು ನಂತರ  ಸೋದರನೇ ಶಿವನು ಶಾಸ್ತ್ರಿಗಳ ಶಿವನಲ್ಲ ಎಂಬ ಲೇಖನದಲ್ಲಿ ಕುವೆಂಪು ಅವರ ಜಲಗಾರ ನಾಟಕದ ಕಥೆ,,ಆಷಾಡದ ಮಳೆಯ ಅಬ್ಬರ ಕಲಾಕ್ಷೇತ್ರದಲ್ಲಿ ಮಳೆಯ ನರ್ತನದಲ್ಲಿ ಹಳ್ಳಿಯ ಹೊಲ ಗದ್ದೆಗಳಲ್ಲಿ ಮಳೆಗಾಲದಲ್ಲಿ ಬೇಸಾಯ ಹೂಡುತ್ತಿದ್ದ ಪುರುಷರು ತಾವು ಹೆಂಗಸರಾಗಿ ಹುಟ್ಟಬಾರದಿತ್ತೆ ಹಾಗಿದ್ದರೆ ಮನೆಯಲ್ಲಿ ಬೆಚ್ಚಗೆ ಇರಬಹುದಿತ್ತು ಎಂದು ಹಪಹಪಿಸುವುದು,ಬೇತಾಳ ಹೇಳಿದ ಸುಳ್ಳು ಕಥೆಯಾಗಲಿ, ಗಂಡ ಹೆಂಡತಿಯರ ನಡುವಿನ ಜಗಳ ತಾರಕಕ್ಕೇರಿ ಪಾತ್ರಗಳ ಅಭಿನಯ ನೈಜತೆಯಿಂದ ಕೂಡಿ ಎಲ್ಲರನ್ನು ಕಟ್ಟಿಹಾಕಿದಂತೆ ಭಾಸವಾಗುವುದು, ಚಿತ್ರದುರ್ಗ ತಿಪ್ಪೇಸ್ವಾಮಿಯವರ ರಂಗಭೂಮಿ ಪ್ರಯಾಣ,ನಟಿ ವೇದ ಎಮ್ ವೈ ಅವರು ರಂಗಭೂಮಿಯಲ್ಲಿ ತಮ್ಮ ಉತ್ತಮ ನಟನೆಯೊಂದಿಗೆ ಹೇಗೆ ಭರವಸೆ ಮೂಡಿಸಿದ್ದಾರೆ ಎಂಬುದು ಲೇಖಕರಿಗೂ ಭರವಸೆಯಾಗಿ ಮೂಡಿಬಂದಿದೆ.

    ಲೀಕ್ ಔಟ್ ಎಂಬ ಲೇಖನದಲ್ಲಿ ಸ್ತ್ರೀಯರ ಸೀರೆಯ ಸೆರಗು ಯಾವ ಯಾವ ಪದಗಳಲ್ಲಿ ಹಾಗೂ ಯಾವ ರೀತಿಯಲ್ಲಿ ಬಳಕೆಯಾಗಿದೆ, ಸ್ತ್ರೀಯರ ಸೂಕ್ಷ್ಮ ಸಂವೇದನೆಯಲ್ಲಿ ಹೇಗೆ ಬಹುಮುಖ್ಯ ಪಾತ್ರ ವಹಿಸಿದೆ ಎಂಬುದನ್ನು ಭಾವನಾತ್ಮಕವಾಗಿ ಅಕ್ಷತಾ ಅವರು ತಮ್ಮ ನಟನೆಯ ಮೂಲಕ ತಿಳಿಯಪಡಿಸಿರುವುದು,ಗ್ಯಾರಂಟಿ ರಾಮಣ್ಣನವರ ಅಭಿನಯದ ಹೆತ್ತವರನ್ನು ಸಂರಕ್ಷಿಸಬೇಕು ಎಂಬ ಸಹಬಾಳ್ವೆಯ ಸಂದೇಶವನ್ನು ಸಾರುವ ಕೌಟುಂಬಿಕ ಕಥಾನಕ,ಹೊಳೆ ನರಸೀಪುರದ ಮಂಜುನಾಥ್ ಅವರ ಸಾಧನೆ, ರಂಗಗೀತೆಗಳು ಹೇಗೆ ಹೇಗೆ ಪ್ರೇಕ್ಷಕರನ್ನು ರಂಜಿಸುತ್ತವೆ, ನಾಟಕದ ಮದ್ಯೆ ಆಗುವ ಅಡೆತಡೆಗಳನ್ನು ಹೇಗೆ ಮರೆಮಾಚುವಲ್ಲಿ ಯಶಸ್ವಿಯಾಗುತ್ತವೆ ಎಂಬುದು ಮನಸ್ಸಿಗೆ ಮುದ ನೀಡುತ್ತದೆ.

    ಮುಂದೆ ಸಾಗುತ್ತಾ  ಮಹಾಭಾರತ ಪೌರಾಣಿಕ ನಾಟಕದಲ್ಲಿ ತರಗೆಲೆಯ ಉಪಯೋಗ, ಬಂಗಾರವಾದ ಅಪ್ಪು ಜನ್ಮ ಲೇಖನವಂತೂ  18  19 ನೇ ಶತಮಾನದ ಚಿತ್ರಗಳು, ನಟರು, ಸಂಗೀತ ಹಾಗೂ ಚಿತ್ರಕತೆಗಳು ಹೇಗೆ ಮನಮುಟ್ಟಿ, ಬದುಕಿಗೆ ಪ್ರೇರಣೆ ನೀಡುತ್ತಿದ್ದವು ಎಂಬುದರ ಜೊತೆಗೆ  ಹಿರಿಯ ನಟರು ತಮ್ಮ ಅಭಿನಯದಿಂದ ಮನಸೂರೆಗೊಂಡು ಜನಮಾನಸದಲ್ಲಿ ನೆಲೆಯಾಗಿ ನಿಲ್ಲುತ್ತಿದ್ದರು ಎಂಬುದು ನನ್ನ ಸ್ವಂತ ಅನುಭವವನ್ನೆ ಲೇಖಕರು ಪ್ರತಿಬಿಂಬಿಸಿದಂತೆ ಭಾಸವಾಯಿತು.ರಾಜಣ್ಣ ರಾಶಿ ಅವರ ನಿರಂತರ ಮತ್ತು ಬಿಂಬ ಪ್ರತಿಬಿಂಬ ಲೇಖನವಂತೂ ಒಬ್ಬ ಅಭಿಯಂತರಾದ ಟಿ. ಶಂಕರಪ್ಪ ಶೆಟ್ಟಿಯವರು ಉದ್ಯೋಗ ನಿಮಿತ್ತ ಔರಂಗಬಾದ್ ಗೆ ಹೋದಾಗ ಅಲ್ಲಿಯ ಅವರ ಅನುಭವಗಳು, ಔರಂಗಬಾದ್ ಹಾಗೂ ದೌಲತಾಬಾದ್ ನ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುವಲ್ಲಿ ಮುಖ್ಯ ಪಾತ್ರ ವಹಿಸಿದರೆ ಶಂಕರಶೆಟ್ಟಿಯವರ ಸಾಹಿತ್ಯ ಪ್ರೇಮ ರಚಿಸಿದ ಹಲವಾರು ಕೃತಿಗಳ ಬಗ್ಗೆ ಬೆಳಕು ಚೆಲ್ಲುತ್ತದೆ.

        ಗ್ರಾಮ್ಯ ಬದುಕಿನ ನೋವು ನಲಿವಿನ ಹಂದರ ಲೇಖನವು ನಾಲ್ಕು ವಿಭಿನ್ನ ವಿಚಾರಗಳೊಂದಿಗೆ ಗ್ರಾಮೀಣ ಜನರು ಋತುಮಾನದ ವೈಫರೀತ್ಯದಿಂದ ಪಡುವ ಬವಣೆಗಳನ್ನು ಮನಸ್ಸಿಗೆ ನಾಟುವಂತೆ ಹೇಳುವಲ್ಲಿ ಯಶಸ್ವಿಯಾಗಿದ್ದರೆ, ತಮ್ಮ ಸ್ನೇಹಿತರೂ ತಬಲಾ ವಾದಕರೂ ಆದ ಬೇಲೂರ್ ನಾಗೇಶ್ ಅವರ ಬದುಕು, ಪರಿಶ್ರಮ, ಕುಟುಂಬ ಹಾಗೂ  ಸಾಧನೆಗಳ ಬಗ್ಗೆ ತಿಳಿಸುತ್ತ ತಬಲಾ ವಾದನ ನಾಟಕ, ಸಂಗೀತಗಳಲ್ಲಿ ಎಷ್ಟು ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ ಎಂಬುದನ್ನು ಮನಗಾಣಿಸುವುದರೊಂದಿಗೆ ಪ್ರತಿಯೊಂದು ಲೇಖನವೂ ಸಮಾಜದ ನಾನಾ ಸ್ಥರಗಳ ಬಗ್ಗೆ, ಸಾಧಕರ ಬಗೆಗಿನ ಮಹತ್ತರ ವಿಚಾರಗಳನ್ನು ಅನಾವರಣಗೊಳಿಸುವಲ್ಲಿ ಮೇಲು ಗೈ ಸಾಧಿಸಿದ್ದು, ತಾವೂ ಒಬ್ಬ ಸಾಧಕರಾಗಿ ಇನ್ನಿತರ ಸಾಧಕನ್ನೂ ಆತ್ಮೀಯವಾಗಿ ಪರಿಚಯಿಸಿರುವುದು ಲೇಖಕರ ವಿಶಾಲ ಮನೋಭಾವನೆಯನ್ನು ಎತ್ತಿ ತೋರಿಸುತ್ತದೆ. ಇನ್ನು ಯಾಕೂಬ ಲೇಖನವಂತೂ ತಮ್ಮ ಬಾಲ್ಯ ಸ್ನೇಹಿತ ಗೋಡೆ ಬರಹದ ಯಾಕೂಬನ  ಕನ್ನಡಾಭಿಮಾನವನ್ನು ಸ್ಮರಿಸುತ್ತಾ ಅವನು ಕನ್ನಡ ಪ್ರೇಮದ ಬಗ್ಗೆ ಬರೆಯುತ್ತಿದ್ದ ನುಡಿಸಾಲುಗಳು ತನ್ನಲ್ಲೂ ಅಭಿಮಾನ ಮೂಡಿಸಿಡಿದಲ್ಲದೆ ಕಾವೇರಿ ನದಿ ನೀರಿನ ಹೋರಾಟದಲ್ಲಿ ಅವನ ಕಾವೇರಿ ನೀ ನಮ್ಮ ಅನ್ನದಾತೆ *ಎಂಬ ಬರಹ ತನ್ನನ್ನೂ  ಹೋರಾಟದಲ್ಲಿ ಧುಮುಕುವಂತೆ ಮಾಡಿ ಬರಹದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡಿದ್ದು ಅಲ್ಲದೇ ಅವನ ಸುಳ್ಳುತನ, ಪುಸ್ತಕ ಓದುವ ಹವ್ಯಾಸ, ಬಡತನಕ್ಕೆ ದುಡಿಮೆಯೇ ಮದ್ದು ಎಂಬ ಅವನ ಧ್ಯೇಯ, ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ಕವಿಗಳ ನುಡಿಗಳನ್ನು ಕಂಪೌಂಡ್ ಗೋಡೆಗಳ ಮೇಲೆ ಬರೆದು ಜನರನ್ನು ಹುರಿದುಂಬಿಸುತ್ತಿದ್ದುದ್ದು,ಒಬ್ಬ ಮುಸ್ಲಿಂ ಆದರೂ ಹಿಂದೂ ದೇವತೆಗಳ ಮೇಲೆ ಅವನಿಗಿದ್ದ ಭಕ್ತಿ, ಕೆಲಸದ ಮೇಲಿನ ಶ್ರದ್ಧೆ, ನಂತರ ಲೇಖಕರ ದಯೆಯಿಂದ ದೊಡ್ಡ ಮಟ್ಟದ ಕೆಲಸ ಸಿಕ್ಕಾಗ ಧನ್ಯತಾ ಭಾವದಿಂದ ಸ್ಮರಿಸುವುದು, ಈಗಲೂ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ, ಜವಾಬ್ದಾರಿಯುತ ಸ್ಥಾನವನ್ನು ನಿರ್ವಹಿಸುತ್ತಿರುವುದು ಇವೆಲ್ಲಾ ಓದುತ್ತಾ ನಮಗೂ ಯಾಕೂಬ್ ರನ್ನು ಒಮ್ಮೆ ನೋಡಬೇಕೆನ್ನುವ ಅಭಿಲಾಷೆ ಮೂಡದೆ ಇರದು ಒಟ್ಟಾರೆಯಾಗಿ ಯಾಕೂಬ್ ನನ್ನು ಒಬ್ಬ ಅದ್ಭುತವ್ಯಕ್ತಿಯನ್ನಾಗಿ ಅವರ ಸಂಪೂರ್ಣ ಜೀವನ ಕಥಾನಕದೊಂದಿಗೆ ಚಿತ್ರಿಸಿರುವುದು ಯಾಕೂಬನ ಮೇಲಿನ ಅವರ, ಪ್ರೀತಿ, ಅಭಿಮಾನಗಳನ್ನು ಬಿಂಬಿಸಿದರೆ, ಪತ್ರಿಕಾ ವಲಯಕ್ಕೆ ಪಾದಾರ್ಪಣೆ ಮಾಡಿ ಕಾವೇರಿ ಹೋರಾಟದ ಲೇಖನಗಳನ್ನು ಬರೆಯುತ್ತಾ ಜೊತೆಗೆ, ಗೊರೂರು ರಾಮಸ್ವಾಮಿಯವರು ನಿಧಾನರಾದಾಗ ಭಾಷಣ ಮಾಡಲು ಬಿಡದ ತಮ್ಮೂರಿನ ಫoಡ್ ಕಲೆಕ್ಟ್ ಮಾಡುವ ಹುಡುಗರು, ಕೊನೆಗೆ ಶಾಲೆಯ ವಾರ್ಷಿಕೋತ್ಸವದಲ್ಲಿ ಯಾಕೂಬನ ಸಹಾಯದಿಂದಲೇ ತಮಗೆ ಭಾಷಣ ಮಾಡುವ ಅವಕಾಶ ಸಿಕ್ಕಿದ್ದನ್ನು ಹೇಳುತ್ತಾ ಯಾಕೂಬನ ಕಥೆ ಅತ್ಯಂತ ಸುಂದರವಾಗಿ ಮೂಡಿಬಂದಿದೆ ಅಲ್ಲದೇ ತಮ್ಮದೇ ನಿರ್ದೇಶನ ರಚನೆಯ ನಾಟಕಗಳಲ್ಲಿ ಬರುವ ಹಾಸ್ಯ ಪ್ರಸಂಗಗಳನ್ನು ಕಣ್ಣಿಗೆ ಕಟ್ಟುವಂತೆ ತಮ್ಮ ಬರವಣಿಗೆಯ ಶೈಲಿಯನ್ನು ರೂಢಿಸಿಕೊಂಡು ಲೀಲಾಜಾಲವಾಗಿ ಓದಿಸಿಕೊಂಡು ಹೋಗುವ ನೈಪುಣ್ಯತೆಯನ್ನು ಸಾಧಿಸಿ ಉದಯೋನ್ಮುಖ ಬರಹಗಾರರಿಗೆ ಪ್ರೇರಣೆಯಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಈ ಸಾಧನೆಯ ಹಾದಿ ಯಶಸ್ವಿಯಾಗಿ ಸಾಗಲಿ ಇನ್ನೂ ಹೆಚ್ಚಿನ ಮಾಹತ್ವಪೂರ್ಣ ಲೇಖನಗಳು ಅವರ ಲೇಖನಿಯಿಂದ ಮೂಡಿಬರಲಿ ಎಂದು ಮನದುಂಬಿ ಹಾರೈಸುತ್ತಾ ಅವರ ಬಗ್ಗೆ ಬರೆಯಲು ಅವಕಾಶ ಕಲ್ಪಿಸಿಕೊಟ್ಟ ಅಭಿಮಾನಕ್ಕಾಗಿ ಹೃತ್ಪೂರ್ವಕವಾದ ವಂದನೆಗಳು.


ಶ್ರೀಮತಿ ಮಾಲಾ ಚೆಲುವನಹಳ್ಳಿ

One thought on “ಗೊರುರೂ ಅನಂತರಾಜರವರ ಬಣ್ಣದ ಬದುಕು ಯಾಕೂಬ

  1. ಗೊರುರೂ ಅಲ್ಲ, ತಪ್ಪಾಗಿದೆ – ಇದು ಗೊರೂರು ಎಂದಾಗಬೇಕು.—ಜಿ.ಎಸ್.ಪ್ರಕಾಶ್,ಬೆಂಗಳೂರು

Leave a Reply

Back To Top