ಕಾವ್ಯ ಸಂಗಾತಿ
ಅಭಿಸಾರ
ವಸಂತ ವಿ.ಬೆಕ್ಕೇರಿ
ಕಾರಣವೇ ತಿಳಿಯದು
ಮನಸಲ್ಲೇನು ಚಡಪಡಿಕೆ
ಸಮಯವೇ ಸಾಗದು
ಸಂಗಾತಿ ಇಲ್ಲದೆ.!
ಕಾಯದೇ ಕೋಗಿಲೆ
ಮಾಮರ ಚಿಗುರಲು
ನೃತ್ಯಿಸುವುದೇ ನವಿಲು ?
ಮೂಗಾರು ಮೊಳಗಲು!
ಶೃಂಗಾರ ಬೇಕಿದೆ
ಭಾವನೆಯ ಬೆಸಯಲು
ಬೆಸುಗೆಗಾಗಿ ಕಾದಿದೆ
ಏದೆಯ ಭಾವ ಬೆರೆಯಲು!
ಸಂಬಂಧವಿರದೆ
ಸುಯೋಗ ಬರದು
ಸಂಚಾರ ಸಾಕಾಗಿ
ಏಕಾಂತ ಬೇಕಾಗಿದೆ!
ಅರಳುವ ಹೂ
ಮೂಡಿವ ಭಾಗ್ಯ
ಬಯಸುವುದೇ?!
ಹರಿವ ನದಿ
ಸಾಗರವ ಸೇರದೆ?!
One thought on “ವಸಂತ ವಿ.ಬೆಕ್ಕೇರಿ ಕವಿತೆ-ಅಭಿಸಾರ”