ಸೋದರ ‍ಭಾಷೆಗಳಲ್ಲಿ ಅನುವಾದಿತ ಕವಿತೆಗಳು

ಅನುವಾದ ಸಂಗಾತಿ

ಅಲ್ಲಮ

ಕನ್ನಡ ಮೂಲ: ಪ್ರೊ. ಜಿ. ಎಚ್. ನಾಯಕ
ತಮಿಳಿಗೆ: ಪಿ. ಶಶಿಕಲಾ.

ಕಾಮಲತೆ ವ್ಯಥೆಯಿನ್ನು ಹಸೀ ಹಸೀ ಇರುವಾಗ
ಮಣ್ಣಿನಡಿಯಲಿ ಚಿನ್ನ ಮುಳುಗು ಕಳಶ
ಗರ್ಭಗುಡಿವರೆಗಗೆದು ಹೆದರಿ ಹೊರಗೇ ನಿಂತೆ
ಒಳಗೆ ಅನಿಮಿಷ ಯೋಗಿ ದಿವ್ಯಪುರುಷ

**

ಕನ್ನಡ ಮೂಲ:ಪ್ರೊ. ಜಿ. ಎಚ್. ನಾಯಕ

**

அல்லமன்!

காமலதையின் வருத்தம் இன்னும்
ஈரமீரமா இருக்கும்போது
மண்ணுக்கடியில் தங்கம் முளுங்கும் களசம்
கர்பாகுடிவருக்கும் தோண்டி பயந்து வெளியே நிருந்தென்
உள்ள அனிமிஷ யோகி புருஷன்

ಅಲ್ಲಮನ್ !

ಕಾಮಲತೈಯಿನ್ ವರುತ್ತಮ್ ಇನ್ನುಂ ಈರಮೀರಮಾ ಇರುಕ್ಕುಂಬೋದು
ಮಣ್ಣುಕ್ಕಡಿಯಿಲ್ ತಂಗಮ್ ಮುಳುಂಗುಂ ಕಳಸಂ
ಗರ್ಭಗುಡಿವರುಕ್ಕುಂ ತೋoಡಿ ಬಯಂದು ವೆಳಿಯೇ ನಿರುಂದೆನ್
ಉಳ್ಳ ಅನಿಮಿಷ ಯೋಗಿ ದಿವ್ಯಪುರುಷನ್

ಕನ್ನಡ ಮೂಲ : ಪ್ರೊ. ಜಿ. ಎಚ್. ನಾಯಕ್
ತಮಿಳು ಅನುವಾದ : ಪಿ. ಶಶಿಕಲಾ

ಕವಿಪರಿಚಯ

ಜಿ. ಎಚ್. ನಾಯಕ

ಕನ್ನಡನಾಡಿನ ಶ್ರೇಷ್ಠ ಸಾಹಿತ್ಯ ವಿಮರ್ಶಕ, ವಿನಯ ವಿಮರ್ಶೆಯ ಹರಿಕಾರ ಕೃತಿಸಾಕ್ಷಿಯ ವಿಮರ್ಶಕ ಗೋವಿಂದರಾಯ ಹಮ್ಮಣ್ಣ ನಾಯಕ ಹುಟ್ಟಿದ್ದು ಸೂರ್ವೆ, ಅಂಕೋಲಾ (ಉ.ಕ) ೧೮.೦೯.೧೯೩೫. ಬಾಸಗೋಡ, ಅಂಕೋಲಾ, ಮೈಸೂರುಗಳಲ್ಲಿ ವಿದ್ಯಾಭ್ಯಾಸ. ಯುವರಾಜ, ಮಹಾರಾಜ, ಮಾನಸಗಂಗೋತ್ರಿಗಳಲ್ಲಿ ಅಧ್ಯಾಪನ. ಹಂಪಿ ಕನ್ನಡ ವಿ.ವಿ ಮತ್ತು ಕುವೆಂಪು ಕಾವ್ಯಾಧ್ಯಯನ ಪೀಠಗಳಲ್ಲಿ ಸಂದರ್ಶಕ ಪ್ರಾಧ್ಯಾಪಕ.
ಸಮಕಾಲೀನ (೧೯೭೩), ಅನಿವಾರ್ಯ (೧೯೮೦), ನಿರಪೇಕ್ಷ (೧೯೮೪), ನಿಜದನಿ (೧೯೮೮), ವಿನಯ ವಿಮರ್ಶೆ (೧೯೯೧), ಸಕಾಲಿಕ (೧೯೯೫), ಗುಣಗೌರವ (೨೦೦೨), ಹರಿಶ್ಚಂದ್ರ ಕಾವ್ಯ : ಓದು – ವಿಮರ್ಶೆ (೨೦೦೨), ದಲಿತ ಹೋರಾಟ : ಗಂಭೀರ ಸವಾಲುಗಳು (೨೦೦೪), ಕೃತಿಸಾಕ್ಷಿ (೨೦೦೬), ಸ್ಥಿತಪ್ರಜ್ಞೆ (೨೦೦೭), ಮತ್ತೆ ಮತ್ತೆ ಪಂಪ (೨೦೦೮), ರನ್ನನ ಕೃತಿರತ್ನ ಪರೀಕ್ಷೆ (೨೦೧೮) ಮುಖ್ಯ ವಿಮರ್ಶಾ ಸಂಕಲನಗಳು.

ಕನ್ನಡ ಸಣ್ಣ ಕತೆಗಳು (೧೯೭೮), ಹೊಸಗನ್ನಡ ಕವಿತೆ (೧೯೮೫), ಶತಮಾನದ ಸಾಹಿತ್ಯ – ಸಂಪುಟ ೦೧ (೨೦೦೦) ಸಂಪಾದಿತ ಕೃತಿಗಳು.

ನಾಯಕರ ಆತ್ಮ ಕಥನ “ಬಾಳು” (೨೦೧೫) ರಲ್ಲಿ ಪ್ರಕಡಗೊಂಡಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೧೯೯೦) ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೨೦೦೦) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೨೦೧೪) ಹಾಗು ಪಂಪ ಪ್ರಶಸ್ತಿ (೨೦೧೦) ನ್ನು ಒಳಗೊಂಡಂತೆ ಪ್ರತಿಷ್ಟಿತ ಪ್ರಶಸ್ತಿಗಳು ಇವರ ವಿಮರ್ಶನಾ ಕೃತಿಗಳಿಗೆ ಸಂದಿವೆ. ನಾಡಿನ ವಿಮರ್ಶನ ವಲಯ ಕನ್ನಡದ ಎಫ್. ಆರ್. ಲೆವಿಸ್ ಎಂದೇ ನಾಯಕರನ್ನು ಗುರುತಿಸುತ್ತದೆ.ಮೌಲ್ಯಮಾರ್ಗ ಎಂಬ ಶೀರ್ಷಿಕೆಯಲ್ಲಿ ಐದು ಸಂಪುಟಗಳಾಗಿ ಜಿ. ಎಚ್. ನಾಯಕರ ಸಮಗ್ರ ವಿಮರ್ಶೆಗಳು ಪ್ರಕಟವಾಗಿವೆ.

ಶಶಿಕಲಾ ಪಿ

ಮೂಲತಃ ಚಾಮರಾಜನಗರದವರಾಗಿದ್ದು, ಸದ್ಯ ಮೈಸೂರಿನಲ್ಲಿ ವಾಸವಾಗಿದ್ದಾರೆ. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್ ವೃತ್ತಿ ಶಿಕ್ಷಣ ಪದವಿಯನ್ನು ಪಡೆದಿದ್ದಾರೆ. ಇಂಗ್ಲಿಷ್ ಭಾಷಾ ಶಿಕ್ಷಕರಾಗಿ ಸರ್ಕಾರಿ ಪ್ರೌಢಶಾಲೆ, ಮಡುವಿನ ಹಳ್ಳಿ ನಂಜನಗೂಡು ತಾಲೂಕು, ಮೈಸೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಮೂಲದ ಕವಿತೆಗಳನ್ನು ಇಂಗ್ಲೀಷ್ ಮತ್ತು ತಮಿಳಿಗೆ ಅನುವಾದ ಮಾಡುವುದರಲ್ಲಿ ನಿರತರಾಗಿದ್ದಾರೆ.


One thought on “ಸೋದರ ‍ಭಾಷೆಗಳಲ್ಲಿ ಅನುವಾದಿತ ಕವಿತೆಗಳು

Leave a Reply

Back To Top