ಸೋದರಭಾಷೆಗಳ ಅನುವಾದಿತ ಕವಿತೆ

ಅನುವಾದ ಸಂಗಾತಿ

ಅಲ್ಲಮ !

ಮೂಲ : ಪ್ರೊ. ಜಿ. ಎಚ್. ನಾಯಕ
ತೆಲುಗಿಗೆ : ಸ. ರಘುನಾಥ

ಕಾಮಲತೆ ವ್ಯಥೆಯಿನ್ನು ಹಸೀ ಹಸೀ ಇರುವಾಗ
ಮಣ್ಣಿನಡಿಯಲಿ ಚಿನ್ನ ಮುಳುಗು ಕಳಶ
ಗರ್ಭಗುಡಿವರೆಗಗೆದು ಹೆದರಿ ಹೊರಗೇ ನಿಂತೆ
ಒಳಗೆ ಅನಿಮಿಷ ಯೋಗಿ ದಿವ್ಯಪುರುಷ

**

ಕನ್ನಡ ಮೂಲ:ಪ್ರೊ. ಜಿ. ಎಚ್. ನಾಯಕ

ಕಾಮಲತೆ ವ್ಯಧ ಇಕನೂ ಪಚ್ಚಿ ಪಚ್ಚಿಗಾ ನುಂಡಗಾ
ಮಟ್ಟಿ ಯಡುಗುನ ಪಸಿಡಿ ಮುನುಕು ಕಲಸಂ
ಗರ್ಭಗುಡಿ ದಾಕಾ ತವ್ವಿ ಹಡಲಿ ವೆಲುಪನೇ ನಿಲಿಚಾ
ಲೋನ ಅನಿಮಿಷ ಯೋಗಿ ದಿವ್ಯಪುರುಷುಡು

***

ತೆಲುಗಿಗೆ: ಸ. ರಘುನಾಥ

ಕವಿ ಪರಿಚಯ:

ಜಿ. ಎಚ್. ನಾಯಕ

ಕನ್ನಡನಾಡಿನ ಶ್ರೇಷ್ಠ ಸಾಹಿತ್ಯ ವಿಮರ್ಶಕ, ವಿನಯ ವಿಮರ್ಶೆಯ ಹರಿಕಾರ ಕೃತಿಸಾಕ್ಷಿಯ ವಿಮರ್ಶಕ ಗೋವಿಂದರಾಯ ಹಮ್ಮಣ್ಣ ನಾಯಕ ಹುಟ್ಟಿದ್ದು ಸೂರ್ವೆ, ಅಂಕೋಲಾ (ಉ.ಕ) ೧೮.೦೯.೧೯೩೫. ಬಾಸಗೋಡ, ಅಂಕೋಲಾ, ಮೈಸೂರುಗಳಲ್ಲಿ ವಿದ್ಯಾಭ್ಯಾಸ. ಯುವರಾಜ, ಮಹಾರಾಜ, ಮಾನಸಗಂಗೋತ್ರಿಗಳಲ್ಲಿ ಅಧ್ಯಾಪನ. ಹಂಪಿ ಕನ್ನಡ ವಿ.ವಿ ಮತ್ತು ಕುವೆಂಪು ಕಾವ್ಯಾಧ್ಯಯನ ಪೀಠಗಳಲ್ಲಿ ಸಂದರ್ಶಕ ಪ್ರಾಧ್ಯಾಪಕ.
ಸಮಕಾಲೀನ (೧೯೭೩), ಅನಿವಾರ್ಯ (೧೯೮೦), ನಿರಪೇಕ್ಷ (೧೯೮೪), ನಿಜದನಿ (೧೯೮೮), ವಿನಯ ವಿಮರ್ಶೆ (೧೯೯೧), ಸಕಾಲಿಕ (೧೯೯೫), ಗುಣಗೌರವ (೨೦೦೨), ಹರಿಶ್ಚಂದ್ರ ಕಾವ್ಯ : ಓದು – ವಿಮರ್ಶೆ (೨೦೦೨), ದಲಿತ ಹೋರಾಟ : ಗಂಭೀರ ಸವಾಲುಗಳು (೨೦೦೪), ಕೃತಿಸಾಕ್ಷಿ (೨೦೦೬), ಸ್ಥಿತಪ್ರಜ್ಞೆ (೨೦೦೭), ಮತ್ತೆ ಮತ್ತೆ ಪಂಪ (೨೦೦೮), ರನ್ನನ ಕೃತಿರತ್ನ ಪರೀಕ್ಷೆ (೨೦೧೮) ಮುಖ್ಯ ವಿಮರ್ಶಾ ಸಂಕಲನಗಳು.

ಕನ್ನಡ ಸಣ್ಣ ಕತೆಗಳು (೧೯೭೮), ಹೊಸಗನ್ನಡ ಕವಿತೆ (೧೯೮೫), ಶತಮಾನದ ಸಾಹಿತ್ಯ – ಸಂಪುಟ ೦೧ (೨೦೦೦) ಸಂಪಾದಿತ ಕೃತಿಗಳು.

ನಾಯಕರ ಆತ್ಮ ಕಥನ “ಬಾಳು” (೨೦೧೫) ರಲ್ಲಿ ಪ್ರಕಡಗೊಂಡಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೧೯೯೦) ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೨೦೦೦) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೨೦೧೪) ಹಾಗು ಪಂಪ ಪ್ರಶಸ್ತಿ (೨೦೧೦) ನ್ನು ಒಳಗೊಂಡಂತೆ ಪ್ರತಿಷ್ಟಿತ ಪ್ರಶಸ್ತಿಗಳು ಇವರ ವಿಮರ್ಶನಾ ಕೃತಿಗಳಿಗೆ ಸಂದಿವೆ. ನಾಡಿನ ವಿಮರ್ಶನ ವಲಯ ಕನ್ನಡದ ಎಫ್. ಆರ್. ಲೆವಿಸ್ ಎಂದೇ ನಾಯಕರನ್ನು ಗುರುತಿಸುತ್ತದೆ.ಮೌಲ್ಯಮಾರ್ಗ ಎಂಬ ಶೀರ್ಷಿಕೆಯಲ್ಲಿ ಐದು ಸಂಪುಟಗಳಾಗಿ ಜಿ. ಎಚ್. ನಾಯಕರ ಸಮಗ್ರ ವಿಮರ್ಶೆಗಳು ಪ್ರಕಟವಾಗಿವೆ.

**

ಸ. ರಘುನಾಥ

ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಿವೃತ್ತರಾಗಿರುವ ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು.
1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ  – ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ನೀಡಿಕೆ. ಆಪ್ತ ಸಮಾಲೋಚನೆ:ಉಚಿತ ಸಲಹೆ, ಸಹಕಾರ. 2006ರಲ್ಲಿ ಹಸಿರುಹೊನ್ನು ಬಳಗ ಸ್ಥಾಪನೆ: ಗಿಡಮರ ಸಂರಕ್ಷಣೆ. ಗಿಡಮೂಲಿಕೆ  ಸಂಗ್ರಹ, ಗಿಡ ನೆಡುವುದು, ನೀರಾವರಿ ಹೋರಾಟ. ಅದರ ಸ್ಥಾಪಕ ಕಾರ್ಯದರ್ಶಿ. 2015 ರಲ್ಲಿ ಬೊಮ್ಮಲಾಟಪರುದ ತೊಗಲುಗೊಂಬೆ ಕಲಾವಿದರ ಸಂಘಟನೆ. ಶಿಳ್ಳೇಕ್ಯಾತ ಬಂಗಾರಕ್ಕ ತೊಗಲುಗೊಂಬೆ ಕಲಾ ಸಂಘ ಸ್ಥಾಪನೆ. ಅದರ ಅಧ್ಯಕ್ಷತೆ. 2017ರಲ್ಲಿ ಅಲೆಮಾರಿ ನಿರಾಶ್ರಿತರಾಗಿ ನಮ್ಮ ಮಕ್ಕಳು-ಹಸಿರು ಹೊನ್ನೂರು ಗ್ರಾಮ ನಿರ್ಮಾಣ. 22 ಮಂದಿಗೆ ವಸತಿ, ಶೀಕ್ಷಣ, ಉದ್ಯೋಗ ವ್ಯವಸ್ಥೆ. ಇವೆಲ್ಲೂ ಸ ರಘುನಾಥ ಅವರ ಸಮಾಜಮುಖಿ ಕಾರ್ಯಗಳಿಗೆ ಕೆಲವು ಉದಾಹರಣೆಗಳಷ್ಟೆ.
ಸ. ರಘುನಾಥ ಅವರು ಈ ವರೆಗೂ 8 ಕವನ ಸಂಕಲನಗಳು, 3 ಸಣ್ಣ ಕಥೆಗಳು,  9ಲೇಖನ/ವಿಮರ್ಶೆಗಳ ಕೃತಿ, 3ಮಕ್ಕಳ ಸಾಹಿತ್ಯ, 3ಜಾನಪದ ಸಂಗ್ರಹ ಕೃತಿ, 19 ಅನುವಾದಗಳು , 15ಸಂಪಾದನ ಕೃತಿಗಳನ್ನು ಪ್ರಕಟಿಸಿದ್ದಾರೆ.
ಅವರ ಸಮಗ್ರ ಕೃತಿಗಳು ಒಟ್ಟೂ ೮ ಸಂಪುಟಗಳಲ್ಲಿ ಪ್ರಕಟವಾಗಿವೆ.

****

Leave a Reply

Back To Top