ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಆಸೆ

ಇಮಾಮ್ ಮದ್ಗಾರ್

ಸಾರ್ಥಕ ಬದುಕಿಗೊಬ್ಬ ಸಂಗಾತಿಬೇಕು ಬದುಕು ಮತ್ತಷ್ಟು ಸಾರ್ಥಕವಾಗಿಸಲು
ಹೆಜ್ಜೆಯೊಡನೆ ಹೆಜ್ಜೆಯನಿಟ್ಟು ಜೊತೆ ಜೊತೆಯಲಿ ಸಾಗಲು

ಸಾವಿರೊತ್ತಡಗಳ ನಡುವೆಯೂ
ಎದೆಗಪ್ಪಿ ಸಂಕಟಗಳ ಸಂತೈಸಿ ಪ್ರೀತಿಯಲ್ಲಿಯೇ ಅವಿತಿಡಲು
ಕಣ್ಣುಕಂಡ ಕನಸುಗಳ ನೊಯಿಸದೇ
ಕಣ್ಣು ಕನಸು ಕಾಣಲಾದರೂ ಇಷ್ಟೇ ಇಷ್ಟು ನೆಮ್ಮದಿಯ ನೀಡಲು

ಬರಬಿಸಿಲಿನಲಿ ಬರಸೆಳೆದು ಬಿಗಿದಪ್ಪಿ ಒಲವು ತಣ್ಣಗಿರುವಂತೆ ಕನಸುಗಳ ಕಾಯಿಗೆ ಕಾಪಿಡಲು
ಸಿರಿತನವೇನೂ ಬೇಕಿಲ್ಲೆನಗೆ ಬೆವರ ಹನಿಯಾರದಂತೆ ಶ್ರಮಿಸಿಯಾದರೂ ಭಾವಗಳು ಬೆದರಿ ಹೆದರದಂತೆ ಕಾವಲು ಕಾಯಲು

ಮೆಚ್ಚಿದೊಲವು ಪ್ರೇಮಗೀತೆ ನುಡಿಸಿದಾಗ ಅವನ ಪ್ರೀತಿಯ ಹಾಡಿಗೆ ಎದೆಯಾಳವೂ ಕಂಪಿಸಿ ವಿರಹವನ್ನು ಮಂಜಿನಂತೆ ಕರಗಿ ನೀರಾಗಿಸಲು

ಬದುಕು ಬರಡಾಗದಂತೆ
ಬಯಕೆ ಬಸವಳಿಯದಂತೆ
ಹಗಲಿರುಳೂ ಬೇಸರಿಸದಂತೆ ಮುನಿಸಿಗಳಿಗೂ ಮರೆವಾವರಿಸುವಂತೆ
ಕೇವಲ ನನ್ನೊಡನೆ ಮಾತ್ರ ಪಿಸುಗುಡುವ ಸಂಗಾತಿ ಬೇಕೆನಗೆ ಬದುಕು ಸಾರ್ಥಕವಾಗಲು ಸಂಗಾತಿ ಬೇಕೆನಗೆ


About The Author

Leave a Reply

You cannot copy content of this page

Scroll to Top