ಕಾವ್ಯ ಸಂಗಾತಿ
ಪದ್ಯಪಾನಿ
ತಮ್ಮ ಹೆಸರು ಮತ್ತು ಭಾವಚತ್ರಗಳನ್ನು ಪ್ರಕಟಿಸದಂತೆ ಕೋರಿಕೊಂಡ ಪದ್ಯಪಾನಿಯವರು ನಮಗೂ ತಮ್ಮ ಗುರುತುಬಿಟ್ಟು ಕೊಡದೆ ಮಿಂಚಂಚೆಯ ಮೂಲಕ ತಮ್ಮ ಕವಿತೆ ಕಳಿಸುತ್ತಿದ್ದಾರೆ
ಪದ್ಯಪಾನಿಯವರ ಹೊಸ ಕವಿತೆ-
ಕಾದ ಹಂಚಿನ ಮನೆಯಲ್ಲಿ ನಿನ್ನ ನೆನಪು
ಈಗ ದೇಹವೆಲ್ಲ ಕಾದ ಹಂಚಾಗಿದೆ
ಗೆಳತಿ
ಒಮ್ಮೆ ತಿರುಗಿ ನೋಡು
ಇಲ್ಲಿ ಹಂಚುಗಳೆಲ್ಲ ಸೀಳುತ್ತಿವೆ !
ಒಳಗಿನ ರಕ್ತನಿರಂತರ ಘನವಾಗಿ
ದೇಹ ಜಡ್ಡುಗಟ್ಟುವ ಕ್ಷಣ
ಬಂದಾಗಿದೆ
ಮಾಡಿನ ಗಳಗಳ ತುಂಬ
ತುಂಬಿ ಮೊರೆವ ತುಂಬಿಯೊಂದರ ಆರ್ತನಾದ ಹಾಯುತ್ತಿದೆ
ಎಡೆ ಬಿಡದಂತೆ
ಸಂಸಾರಕ್ಕೂ
ಸನ್ಯಾಸಕ್ಕೂ
ಸಕಾರಣ ಬಂಧದ ಸಂಬಂಧ
ಅರ್ಥವಾದರೆ ಸಾಕು
ಈ ಸರಿರಾತ್ರಿಯಲಿ ಮನೆಯ ಮಾಡಿನ ಹಂಚು
ಒಡೆಯುವುದು
ನಿಲ್ಲುತ್ತದೆ
ಪದ್ಯಪಾನಿ