ಕಾವ್ಯಸಂಗಾತಿ
ನೆಮ್ಮದಿಯ ಹೋಮ
ಸಂತೋಷಕುಮಾರ ಅತ್ತಿವೇರಿ
ಕಣ್ಣುರಿಸುವ ಹೊಗೆ-ಬೆಂಕಿ ಮನೆಯಲ್ಲಿ
ಸುರುಕು-ಸುರ್ವಾಗಳ ಎಡೆಬಿಡದ ಏರಿಳಿತ ಅರ್ಘ್ಯಾದಿ ಐವತ್ನಾಲ್ಕು ಸಂಯುಕ್ತಗಳು ಅಗ್ನಿ ಪಾಲು,
ಸುರುಕುಗಳ ಲೆಕ್ಕಕ್ಕೆ ಪ್ರತಿಯಾಗಿ ಮನೋವಾಂಛೆಗಳನೆಲ್ಲ ವರವಾಗಿಸುವ ದ್ವಿಪಕ್ಷ ಒಪ್ಪಂದ ದೇವರೊಡನೆ…
ಅಗ್ನಿದೇವನ ಪ್ರೀತ್ಯರ್ಥ
ಹವಿಸ್ಸುಗಳ ಪ್ರದಾನ ಮನೆಯಲ್ಲಿ
ಅನಿಷ್ಟಗಳ ಕಳೆಯಲು, ಮನದಲ್ಲಲ್ಲ..!ಮನೆಯಲ್ಲಿ ನೆಮ್ಮದಿ ಮನೆ ಮಾಡಲು..!
ಈ ಸದ್ದು ಗದ್ದಲದ ನಡುವೆ ಫೋನು ರಿಂಗಣಿಸಿತು ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು….
ಅರೇ ಹಿತವಾಗಿದೆ ದನಿ ; ಭಾವ ಕೂಡ ; ಧರ್ಮ-ದೇಶ-ಕಾಲಾತೀತ ದೃಷ್ಟಿ. ಆದರೇನು? ಅದರದೇನು ಮಹತ್ವ? ಏಕೆಂದರೆ ಅದು ತಿಳಿಯುವಂತಿದೆ, ಗೊಂದಲಗಳಿಲ್ಲದೆ ಮನ ಮುಟ್ಟುವಂತಿದೆ..
ನಮಗೋ ತಿಳಿಯದ ಗೊಂದಲದಲ್ಲೇ ಸುಖ,
ಶೋ ಆಫುಗಳಿಗಷ್ಟೇ ಲೆಕ್ಕ.
ತುಂಬಾ ಆಳದ ಅನುಭವಿಕ ಕವಿತೆ….
ಶುಭಾಶಯಗಳು
ತುಂಬಾ ಆಳದ ಅನುಭವಿಕ ಕವಿತೆ……
ಓದಿನ ಆಳದಿಂದ, ಅನುಭವದಿಂದ ಮೇಳೈಸಿದ ಕವಿತೆ….
ಶುಭಾಶಯಗಳು… ಶುಭವಾಗಲಿ….
ಧನ್ಯವಾದ
ಗಟ್ಟಿ ಕಾಳು ಕವಿತೆ…….ಅಭಿನಂದನೆಗಳು.
ಧನ್ಯವಾದ..
ಕಾವ್ಯವು ಕೈಮಾಡಿ ಕರೆಯುವುದು ಹಲವರನ್ನಾದರೂ …
ಕೆಲವರ ಕೈಹಿಡಿದು ನಡೆಯುವುದು ಅವಳ ಗಾಂಭೀರ್ಯ, ಗುಣ, ಸೌಂದರ್ಯ ಸೊಬಗಿಗೆ ಸಾಕ್ಷಿ… ಅಂತಹ ಕಾವ್ಯ ದೇವತೆ ನಿನ್ನ ಕೈಹಿಡಿದು ನಡೆಸುತ್ತಿರುವುದು ನಿನ್ನ ಭಾವಮಿಡಿತಜೀವನಕ್ಕೆ ಸಾಕ್ಷಿ ಈ ನಡೆ ಇನ್ನೂ ಕೆಲವೇ ದಿನಗಳಲ್ಲಿ ರಾಜಬೀದಿ, ರಥಬೀದಿಯಲಿ ಸರಾಗವಾಗಿ ಸಾಗುವಂತಾಗಲಿ…
ಧನ್ಯವಾದ