ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರಭಾವಿತ ಮಹಿಳೆ

Shallow Focus Photograph of Woman Blowing Pink Powder

ಸಿಂಧು ಭಾರ್ಗವ್

ಕಷ್ಟಗಳ ಎದುರಿಸುತ
ನಿಷ್ಠೆಯಲಿ ಜೀವನವ ಕಳೆಯುವ
ಹೆತ್ತವ್ವ ನನಗೆ ಪ್ರಭಾವ ಬೀರಿದಳು

ಹಿಡಿದ ಗುರಿಯ ಸಾಧಿಸಲು
ಹಟದಿಂದ ಸಾಧನೆ ಮಾಡಿದ
ಹಿರಿಯಕ್ಕ ನನಗೆ ಪ್ರಭಾವ ಬೀರಿದಳು

ಗುರುಗಳ ಮಾರ್ಗದರ್ಶನದಲ್ಲಿ
ವಿನಯದಿಂದ ವಿದ್ಯೆ ಕಲಿತು
ಹಿರಿಯರ ಮೆಚ್ಚುಗೆ ಪಡೆದ
ತಂಗಿ ನನಗೆ ಪ್ರಭಾವ ಬೀರಿದಳು

ಇನ್ಫೋಸಿಸ್ ಸಂಸ್ಥೆಯ ಹುಟ್ಟುಹಾಕಿ
ಸರಳ ಸಜ್ಜನಿಕೆಯಿಂದ
ಸಂಸ್ಕೃತಿ, ಸೇವೆಯಲೇ ಬಾಳುವ
ಸುಧಾ ಅಮ್ಮ ನನಗೆ ಪ್ರಭಾವ ಬೀರಿದರು

ಹೆಣ್ಣು ಜಗಕೆ ಕಣ್ಣಾಗುವಳು
ಒಳ ಕಂಗಳಿಂದ ನೋಡಿರಣ್ಣ
ಅಹಂ ಇರುವ ಹೆಣ್ಣು ಎಂದಿಗೂ
ಬೆಳಕಾಗಳಣ್ಣ,
ಬಾಳು ಹೈರಾಣಾಗಿಸಲು ಹೆಣ್ಣೇ ಕಾರಣ
ಬದುಕು ಬೆಳಗಿಸಲು ಅವಳೇ ಭೂಷಣ

ತ್ಯಾಗ ಸಹನೆ ಹೊಳೆಯೋ ಎರಡು ಮುತ್ತುಗಳು
ಅವಳ ಮನದ ಮುಕುಟದಲ್ಲಿ ಅರಳಿ ನಿಲ್ಲುತಿರುವುವು
ಹೆಣ್ಣು ಮಗುವ ಹೊನ್ನಿನಂತೆ ಜೋಪಾನ ಮಾಡಿರಿ
ತನ್ನತನವ ಮೆರೆದು ಬದುಕೋ ಅವಳಿಗೆ ಕೈಯ ಮುಗಿಯಿರಿ!!

*****

About The Author

Leave a Reply

You cannot copy content of this page

Scroll to Top