ಕಾವ್ಯ ಸಂಗಾತಿ
ಡೋ ನಾ ವೆಂಕಟೇಶ್
ಕೊಣಾರ್ಕದ ವೈಭವ

ಭುವನೇಶ್ವರಿಯ ಪುತ್ರ
ನಾ
ಭುವನೇಶ್ವರಕೆ ಬಂದಾಗ
ಕಂಡದ್ದು ಗತ ಕಾಲದ
ಉತ್ಕಲದ
ಕಲೋನ್ನತಿ! ಶಿಲ್ಪಕಲಾ ಪ್ರಾವೀಣ್ಯತೆಯ ಪರಾಕಾಷ್ಠೆ.
ಕೋಣಾರ್ಕದ ಗಂಗ ನರಸಿಂಗ ದೇವ, ಮತ್ತವರ ಪೂರ್ವಿಕರ ಜಗನ್ನಾಥ ಭಕ್ತಿ! ಪುರಿ ಮಂದಿರದ ಶಕ್ತಿ

ಮುಗಿಲೆತ್ತರದ ಸೂರ್ಯ ರಥ
ಆಳೆತ್ತರ ಮೀರಿದ ಸೂರ್ಯ ರಥ ಚಕ್ರ !
ಸಪ್ತಾಶ್ವಗಳ ಸುಲಲಿತ ವೇಗದ
ಬೃಹತ್ ಕೆತ್ತನೆಯ ಜೊತೆಗೇ
ಗಂಧರ್ವ ಯಕ್ಷ ಕಿನ್ನರರ ಗಾಯನ ಮತ್ತವರ
ಮಿಥುನ ಶಿಲ್ಪಕಲೆಯ ಬಲೆ
ನಿಬ್ಬೆರಗಾಗಿಸುವ ಪ್ರಾವೀಣ್ಯತೆ
ನಿರ್ಮೋಹ ಕಲೋನ್ನತಿ
ಸೂರ್ಯದೇವನ ಕೋನ
ಕೋಣಾರ್ಕದ ಈ ಸ್ಥಾನ
ಎಂದೇ
ಹೋಗೋದ್ರೊಳ್ಗೆ ಒಮ್ಮೆ
ಕಾಣು ಸೂರ್ಯನ್ ಬಂಡಿ
——————————-
Thanq
Nice writing anna

Thanq sheelamma
beautiful Pappa
Gudds thanks