ಮಾಳೇಟಿರ ಸೀತಮ್ಮ ವಿವೇಕ್-ಸರ್ವರೊಳಗಿರುವುದು ಮನಸಯ್ಯ

ಕಾವ್ಯ ಸಂಗಾತಿ

ಸರ್ವರೊಳಗಿರುವುದು ಮನಸಯ್ಯ

ಮಾಳೇಟಿರ ಸೀತಮ್ಮ ವಿವೇಕ್

ಮನಸು ಮಲಿನವಾದರೆ
ನರನು ಸುಖವ ಕಾಣನಯ್ಯ//
ಮನಸು ಮೃಗೀಯವಾದರೆ
ಯಾರ ನೋವು ಕಾಣದಯ್ಯ//

ಭೇದಭಾವ ಮಾಡುವ ಮನ
ಮೂಢತೆಗೆ ಸಿಲುಕಿದುದಯ್ಯ //
ಶಾಪ ತಾಪಗೈವ ಚಿಂತಾ ಮನ
ಹಟ ಛಟಗಳ ಅಡಿಯಾಳಯ್ಯ//

ಮನವ ಅರಿತು ಬಾಳಿದಾಗ
ರೋಗರುಜಿನ ದೂರವಯ್ಯ//
ಮನವ ತೀಡಿ ತಿದ್ದಿ ನಡೆದರಾಗ
ಧರೆಯೆ ಸ್ವರ್ಗ ಕಾಣಯ್ಯ//

ಗಂಡು ಹೆಣ್ಣು ಎಂಬುದಿರದೆ
ಸರ್ವರೊಳಗಿರುವುದು ಮನವಯ್ಯ//
ಮನಸೇ ತನುವಿಗೆ ಒಡೆಯ
ಜೀವ~ಜೀವನದ ಮೂಲವಯ್ಯ//

ಕಲ್ಯಾಣ ಕಾರ್ಯಗೈದವರೆಲ್ಲ
ಚಿತ್ತಭ್ಯುದಯಕೆ ಶ್ರಮಿಸಿದುದಯ್ಯ//
ಸತ್ಯ ವಾಸ್ತವಗಳನ್ನಪ್ಪಿದ ಮನವೇ ಜ್ಞಾನೋದಯ ಪಡೆದಿರುವುದಯ್ಯ//


Leave a Reply

Back To Top