ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಉದುರಿದ ಕಂಬನಿ ಮುತ್ತುಗಳ ಪೋಣಿಸಲು ಬರುವೆಯಾ
ಚದುರಿದ ಮುಂಗುರುಳ ಭೃಂಗಗಳ ಕೂಡಿಸಲು ಬರುವೆಯಾ
ಒಡೆದ ಎದೆಯ ಚೂರುಗಳನು ಏನು ಮಾಡಲಿ
ಕವಿದ ಹತಾಶೆಯ ಪರದೆ ಸರಿಸಲು ಬರುವೆಯಾ
ಬಾನ ತಾರೆಗಳು ಮಂಕಾಗಿವೆ ಬಿಕ್ಕುತ ನೋಡು
ಬಾಡಿದ ಮಲ್ಲಿಗೆಯ ಮತ್ತೆ ಅರಳಿಸಲು ಬರುವೆಯಾ
ಮಾಗಿಯ ಚಳಿಯೂ ಸುಡುತಿದೆ ಮೈ ಮನವನಾವರಿಸಿ
ಆರಿದ ಒಲವ ಹಣತೆಯನು ಬೆಳಗಿಸಲು ಬರುವೆಯಾ
ಬಿಚ್ಚಿ ನಲುಗಿ ಮರುಗಿದೆ ಕಾಲಂದುಗೆಯ ಗೆಜ್ಜೆ
ಬೇಗಂಳ ಬೆಂದ ಇರುಳನು ತಣಿಸಲು ಬರುವೆಯಾ
ಸುಂದರ ಗಜ಼ಲ್
ಶುಕ್ರಿಯಾ ಸಖಿ.
ಚೆಂದದ ಗ಼ಜ಼ಲ್ ಮೇಡಂ
ಶುಕ್ರಿಯಾ ಭಯ್ಯಾಜೀ ಮೆಚ್ಚುಗೆಗೆ.
ಸುಂದರ ಘಜಲ್ ನೀಡಿ ಸಂಕ್ರಾಂತಿಯ ಸಂಭ್ರಮ ಹೆಚ್ಚಿಸಿದೆ ಸಮೀರಾ ಬೇಗಂರಿಗೆ ಧನ್ಯವಾದಗಳು.
ಕವಿತೆಯ ಭಾವ ಮತ್ತು ಭಾಷೆ ಎರಡೂ ಇಷ್ಟವಾಯಿತು.
ಓದಿ ಮೆಚ್ಚುಗೆ ವ್ಯಕ್ತ ಪಡಿಸಿದ ತಮಗೆ ಧನ್ಯವಾದಗಳು ಸರ್.
ಆಹಾ…..ಸುಕುಮಾರ ಭಾವದ ಗಝಲ್ …. ಸೂಪರ್ ಮೇಡಂ
ತುಂಬಾ ಭಾವಾತ್ಮಕವಾದ ಚಂದದ ಗಝಲ್