ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ ಕವಿತೆ
ವಾಸ್ತವ
ಪ್ರತಿ ಕ್ಷಣ ಕಾಡುವ
ನೆನಪುಗಳಿಂದ
ಬಚ್ಚಿಟ್ಟುಕೊಳ್ಳುವುದು ಹೇಗೆ
ಅರೆಗಳಿಗೆಯೂ ಬಿಟ್ಟಿರದ
ದಿನಗಳಿಗಾಗಿ ತಡಕಾದಡಿದೆ
ಭಾವನೆಗಳಿಗೆ ಜೀವ ತುಂಬಿ
ಕೈ ಸಡಿಲಿಸಿದೆ ಏಕೆ
ಸುಖವಾಗಿ ಬಾಳಲು
ಬಿಡದ ಸಮಯ ನೆನಪಿಸಿತ್ತಿರುವೆ ಕಹಿ ಘಟನೆ
ನಿನ್ನ ಮರೆಯಲೆಂದು
ನಟನೆಯ ಜಗತ್ತಿನಲ್ಲಿ
ಮೊಸಳೆ ಕಣ್ಣೀರು ನೋಡುತ್ತಾ
ಬದುಕಬೇಕಾಗಿದೆ
ಜೀವಂತಿಕೆ ಇಲ್ಲದೆ
ಸಿಗದ ಜೀವಕ್ಕೆ….
ಹುಡುಕಾಟ ವ್ಯರ್ಥ
ಅರಿತಿದೆ ಮನ