ನಾನು ಪ್ರಕೃತಿ ನೀನು ಪುರುಷ
ನನಗೆ ನೀನು
ನಿನಗೆ ನಾನು
ಬದುಕೆಲ್ಲಾ ಹಾಲು-ಜೇನು
ನಮ್ಮೀ ಬೆಸುಗೆಯೇ
ವಸುಂಧರೆಯೆದೆಗೆ ಅರುಣರಾಗವು

 ನನ್ನ ಅಂದಕೆ 
 ನೀನು ಬೇಕು
 ನಿನ್ನ ಶುಭ್ರಕೆ
 ಜಗವೇ ಬೆಳಕು
 ಬೆಳಕಿನೊಳಗಣ ಅರಿವು
 ಪಯಣದ ಹಾದಿಗೆ ಬುತ್ತಿಯು

 ಅರಳಿ ನಿಂತರೂ
 ನೀ ಕಾಣದಾದೆ
 ನಿನ್ನ ಒನಪಿಗೆ
 ಬಿರಿದು ಒಲಿದೆ
 ನಿನ್ನೆದೆ ಗೂಡಿನ ಹೂವಾದೆ
 ಸದಾ ಅನುರಾಗದ ಹಾಡಾದೆ

 ನಿನ್ನೊಲವೇ
 ನನಗೆ ಬೇಕು
 ನನಗದೇ ಗೆಲವು
ನಿನ್ನಿಂದಲೇ ಬೆಳಕು
ಬದುಕಿನ ಚೆಲುವು
ಜಗವ ಬೆಳಗಿದೆ ಇಬ್ಬರ ಒಲವು

ನನ್ನ ಮನದಲಿ
ನಿನ್ನ ಹೆಸರಿದೆ
ನಿನ್ನ ಹೆಸರಲಿ
ನನ್ನ ಉಸಿರಿದೆ
ಉಸಿರು ಉಸಿರಿನ ಕಂಪಿನಲಿ
ಸೃಷ್ಟಿಯ ಚೇತನವಿದೆ

ನಾನು ಪ್ರಕೃತಿ ನೀನು ಪುರುಷ
ನನಗೆ ನೀನು
ನಿನಗೆ ನಾನು
ಬದುಕೆಲ್ಲಾ ಹಾಲು-ಜೇನು
ನಮ್ಮೀ ಬೆಸುಗೆಯೇ

Leave a Reply

Back To Top