ಸಂಕ್ರಾಂತಿ ವಿಶೇಷ-ಸಂಕ್ರಾಂತಿ ಕಾಣಿಕೆ

ಕಾವ್ಯ ಸಂಕ್ರಾಂತಿ

ಸಂಕ್ರಾಂತಿ ಕಾಣಿಕೆ

ಮಮತ (ಕಾವ್ಯ ಬುದ್ಧ)

ಸುಗ್ಗಿ ಹಬ್ಬ ಸಂಕ್ರಾಂತಿ
ಸುಖ ಸಮೃದ್ಧಿಯ ಸಂಕೇತ
ಸಾಮಾಜಿಕ ಸಾಮರಸ್ಯದ
ಬುನಾದಿಯ ಮೆರಗು
ಮಾನವ ಕುಲಕ್ಕೆ ನವಚೇತನ ಹಳಬರು ಬಿಟ್ಟು ಹೋದ
ದೊಡ್ಡವರ ಕಾಣಿಕೆಯೇ
ಈ ಸಂಕ್ರಾಂತಿ

ಮೂರು ದಿನಗಳ ಹಬ್ಬ ಸಂಕ್ರಾಂತಿ ಮೊದಲನೇ ದಿನ ‘ಭೋಗಿ’ ಮುತ್ತೈದೆಯರಿಗೆ ಮರದಲ್ಲಿ
ಬಾಗಿನ ನೀಡುತ ಸುಮಂಗಲಿಯಾಗಲೆಂದು ಹರಸಿ
ಸಂಭ್ರಮದ ಕೂಟ ನಡೆಸುವರು ಭೋಗಿಯ, ಮರುದಿನ ಸಂಕ್ರಾಂತಿ ವಸುಕಲಿ ಎದ್ದು , ಮೈಗೆಣ್ಣೆ ಹಚ್ಚಿ ತ್ರಿವೇಣಿ ಸಂಗಮದಲ್ಲಿ
ಮಜ್ಜನ ಮಾಡಿ
ದೇವರ ದರ್ಶನ ಮಾಡಿ
ಮಂಗಳ ಕೋರುವ ಹಬ್ಬ
ದೊಡ್ಡವರ ಕಾಣಿಕೆಯೇ
ಈ ಸಂಕ್ರಾಂತಿ

ಸಿಹಿಯೆಂಬ ಬೆಲ್ಲಕ್ಕೆ ಹೆಚ್ಚಿಸಿ
ಎಳ್ಳೆಂಬ ನೋವನು ಕಡಿಮೆ
ಮಾಗಿಯ ಚಳಿಯಲಿ
ಮನಸ್ಥಾಪ, ಅಸೂಯೆ
ಕೋಪ, ಕ್ರೋಧಗಳನ್ನೂ
ಬದಿಗಿಟ್ಟು, ಪ್ರೀತಿಯೆಂಬ ರಸಪಾನದೊಂದಿಗೆ
ಕೇರಿಯ ಜನರಿಗೆ ವಿನಿಮಯ ಮಾಡಿ
ಒಬ್ಬರಿಗೊಬ್ಬರು ಶುಭಾಶಯಿಸುವ
ಸಂಭ್ರಮದ ಹಬ್ಬ
ದೊಡ್ಡವರ ಕಾಣಿಕೆಯೇ
ಈ ಸಂಕ್ರಾಂತಿ

ದನಗಳ ಹಬ್ಬ ಸಂಕ್ರಾಂತಿಯದು
ದನಗಳಿಗೆಲ್ಲ ಮೈಯನ್ನು ತೊಳೆದು ಮೇವನ್ನು ತಿಳಿಸಿ ಅಲಂಕಾರಗಳಿಂದ ಸಿಂಗರಿಸಿ ಬಣ್ಣಗಳನ್ನು ಹಚ್ಚಿ ಕೊಂಬುಗಳಿಗೆ ಚಿತ್ರಿಸಿ ಸದಗರಗಳಿಂದ ಮಾಡುವ ಹಬ್ಬ ದೊಡ್ಡವರ ಕಾಣಿಕೆಯೇ
ಈ ಸಂಕ್ರಾಂತಿ


ಮಮತ (ಕಾವ್ಯ ಬುದ್ಧ)

Leave a Reply

Back To Top