ಕಾವ್ಯ ಸಂಕ್ರಾಂತಿ
ಸುಗ್ಗಿ ಸಿರಿ
ಅರುಣಾ ರಾವ್
ಎಳ್ಳಿನ ಒಂದು ಕಾಳು ಬೆಲ್ಲದ ಒಂದು ಹೋಳು
ಸಾಕಲ್ಲವೇ ಒಡೆದ ಮನ ಬೆಸೆಯಲು||
ಕಡಲೆ ಅವರೆಕಾಯಿಗಳ ಮಾಲೆ ಧರಿಸಿ
ಸಿಂಗಾರಗೊಂಡ ಜಾನುವಾರು ಜಾತ್ರೆ
ಕಿವಿಗಡಚುವ ತಮಟೆ ಸದ್ದಿನೊಂದಿಗೆ
ಕಿಚ್ಚು ಹಾಸಿನ ರಂಗು ರಂಗಿನ ಯಾತ್ರೆ
ಮನೆಯಂಗಳದಿ ರಂಗು ರಂಗವಲ್ಲಿ
ಹಚ್ಚ ಹಸಿರಿನ ತಳಿರು ತೋರಣ
ಭಗವಂತನ ಆರೋಗಣೆಗೆ ಸಿದ್ಧ
ಘಮಘಮಿಸುವ ಹುಗ್ಗಿ ಹೂರಣ
ಝಗಮಗಿಸುವ ಉಡುಗೆ ತೊಡುಗೆ
ಧರಿಸಿ ಕಂಗೊಳಿಸುವ ಸುಖೀ ಜನ
ಬೆಲ್ಲದೊಡನೆ ಎಳ್ಳು ಜಗಿದಾಗ
ಹರುಷಗೊಳದೆ ಎಮ್ಮ ಜಿಹ್ವೆ ಮೈಮನ
ಅರುಣಾ ರಾವ್
What a beautiful way of expressing the joy of Sankranti! Too good