ಸಂಕ್ರಾಂತಿ ಸಂಗಾತಿ
ಮಕರ ಸಂಕ್ರಾಂತಿಯ ಆಚರಣೆಯ ಮಹತ್ವ
ಸವಿತಾ ಮುದ್ಗಲ್
ಸಂಕ್ರಾಂತಿ ಅಂದರೆ ಸುಗ್ಗಿಯ ಹಬ್ಬ.ರೈತರ ಫಸಲು ಮನೆಗೆ ಬಂದಿರುತ್ತೆ. ರಾಶಿ ಮಾಡಿ ಎಲ್ಲವನ್ನು ತಂದು ಪೂಜೆ ಮಾಡಿರುತ್ತಾರೆ. ಈ ಮೊದಲ ಸುಗ್ಗಿ ಹಬ್ಬ ರೈತರಿಗೆ ಸಂಭ್ರಮದ ಹಬ್ಬವಾಗಿರುತ್ತೆ.
ನಮ್ಮ ಕಡೆ ಸಂಕ್ರಾಂತಿಯನ್ನು ಬೋಗಿ ಮತ್ತು ಸಂಕ್ರಾಂತಿ ಎರಡು ದಿನ ಆಚರಿಸುತ್ತಿರುವ ಹಬ್ಬವಾಗಿದೆ.
ಸಂಕ್ರಾಂತಿ ಆಚರಣೆ ಮಹತ್ವವೇನೆಂದರೆ ನಾಡಿನ ರೈತರು ತಮ್ಮ ಪಸಲು ಬಂದು ಮನೆಯಲ್ಲಿ ಸ್ವಲ್ಪ ದಿನದವರೆಗೆ ಅಂದ್ರೆ ಏಪ್ರಿಲ್ ವರಿಗೂ ಅಂದ್ರೆ ರೋಣಿ ಮಳೆ ಬರುವವರೆಗೂ ರಜೆಯಲ್ಲಿ ಇರುತ್ತಾರೆ.ನಂತರ ಬಿತ್ತನೆ ಶುರುವಾಗುತ್ತದೆ.
ನಮ್ಮ ಉತ್ತರ ಕರ್ನಾಟಕದ ರೈತರು ಸಂಕ್ರಾಂತಿ ಹಬ್ಬವನ್ನು ಇದ್ಕಕಿಂತ ಮುಂಚೆ ಎಳ್ಳು ಅಮಾವಾಸ್ಯದಂದು ಹೋಳಿಗೆ, ಹಬ್ಬದ ಅಡಿಗೆ ಮಾಡಿಕೊಂಡು ಹೊಲದಲ್ಲಿ ಚರಗ ಚೆಲ್ಲಿರುತ್ತಾರೆ. ಅಮಾವಾಸ್ಯೆ ಎಂದು ಮಾಡದೆ ಇರುವವರು ಈ ಸಂಕ್ರಾಂತಿಗೆ ಪುನಃ ಹೋಳಿಗೆ ಸಿಹಿ ಅಡಿಗೆಗಳನ್ನು ಮಾಡಿಕೊಂಡು ಹೊಲಕ್ಕೆ ಹೋಗಿ ಬನ್ನಿ ಗಿಡದ ಕೆಳಗೆ ಐದು ಕಲ್ಲುಗಳ ನೆಟ್ಟು ಪಾಂಡವರ ಸ್ವರೂಪವಾಗಿ ಅವುಗಳಿಗೆ ಪೂಜೆ ಮಾಡಿ ನಂತರ ಎತ್ತುಗಳಿಗೆ ಬಣ್ಣವನ್ನು ಹಚ್ಚಿ ಹಾಗೂ ಕೊoಬುಗಳಿಗೆ ಬಣ್ಣ ಅಥವಾ ಹೊಳ್ಳೆಣ್ಣೆ ಹಚ್ಚುತ್ತಾರೆ. ಮರುದಿನ ಕರಿ ಹಬ್ಬ ಆಚರಣೆ ಮಾಡುವರು.
ಸಂಕ್ರಾಂತಿ ಹಬ್ಬದಂದು ಮನೆಯಲ್ಲಿ ನಾವೆಲ್ಲರೂ ಸ್ನಾನ ಮಾಡುವುದು ಹೊರಗಡೆ ಹೋಗೋದು ಕಡಿಮೆ. ಎಳ್ಳನ್ನು ಕುಟ್ಟಿ ಅದಕ್ಕೆ ಅರಿಸಿನ ಕಲಿಸಿ ತಲೆಯಿಂದ ದೇಹದ ತುಂಬೆಲ್ಲ ಹಚ್ಚಿಕೊಂಡು ಸ್ನಾನ ಮಾಡುವ ಪದ್ಧತಿ ಇದೆ. ಎಳ್ಳಿನ ಎಣ್ಣೆ ಅಂಶ ದೇಹಕೆ ಕಾಂತಿ ತಂದ್ರೆ ಅರಿಸಿನ ಸೌಂದರ್ಯ ತರುತ್ತೆ.
ಮನೆಯ ಮುಂದೆ ಸಗಣಿ ನೀರಿನಲ್ಲಿ ಅಂಗಳದ ತುಂಬೆಲ್ಲ ಹಾಕಿ ಬಣ್ಣದ ರಂಗೋಲಿ ಹಾಕಿ, ಹಸಿರು ಮಾವಿನ ತೋರಣ ಕಟ್ಟುತ್ತೇವೆ.
ಹೊಸ ಬಟ್ಟೆಗಳನ್ನು ಮಕ್ಕಳು ನಾವೆಲ್ಲರೂ ಧರಿಸಿ ಮನೆಯ ಸಮೀಪ ಇರುವ ದೇವಸ್ಥಾನಕ್ಕೆ ಹೋಗಿ ನೈವೇದ್ಯವನ್ನು ಸಲ್ಲಿಸಿ ಮನೆಮಂದಿಯೆಲ್ಲಾ ಸೇರಿ ಊಟವನ್ನು ಮಾಡುತ್ತೇವೆ.
ನಂತರ ಊಟವಾದ ಮೇಲೆ ಎಲೆ ಅಡಿಕೆ ತಿನ್ನುವುದು ವಾಡಿಕೆ.
ಎಳ್ಳು ಬೆಲ್ಲ ತಿಂದು ಚಂದವಾಗಿ ಮಾತಾಡಿ ಅನ್ನೋದು ನಮ್ಮ ಹಿರಿಯರು ಹೇಳಿದ್ದನ್ನು ನಾವು ಈಗಲು ಅದನ್ನು ಹೇಳಿಕೊಂಡು ಆಚರಿಸುತ್ತಿದ್ದೇವೆ.
ಶಾಲಾ ಮಕ್ಕಳಿಗೆ ಒಂದು ಬಟ್ಟಲಿನಲ್ಲಿ ಎಳ್ಳು ಸಕ್ಕರೆಯನ್ನು ಮಿಕ್ಸ್ ಮಾಡಿ ಕಳಿಸಿರುತ್ತೇವೆ ಅದನ್ನು ಎಲ್ಲರಿಗೂ ಹಂಚಿ ಬಂದಿರುತ್ತಾರೆ.
ಹೀಗೆ ಸಂಕ್ರಾಂತಿ ಹಬ್ಬವನ್ನು ನಮ್ಮ ಕಡೆ ಆಚರಿಸುತ್ತೇವೆ ಹೀಗೆಲ್ಲಾ ಸಂಕ್ರಾಂತಿ ಮಹತ್ವ ಪಡೆದಿದೆ.
ನಮ್ಮ ಶಾಲಾ ದಿನಗಳಲ್ಲಿ ಶಿಕ್ಷಕರಿಗಾಗಿ ನಾವು ಒಂದು ಡಬ್ಬಿಯಲ್ಲಿ ಮನೆಯಲ್ಲಿ ಎಳ್ಳು ಸಕ್ಕರೆಯನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಅದರಲ್ಲಿ ನಮ್ಮ ಗೆಳತಿಯರು ಕುಸುರೆಳ್ಳು ಬೆಲ್ಲ ಕೊಬ್ಬರಿ ಬಿಳಿ ಎಳ್ಳು ಬಣ್ಣದ ಕುಸಿರೆಳ್ಳುಗಳನ್ನು ಕೂಡಿಸಿ ತರುತ್ತಿದ್ದರು. ಇದನ್ನು ನೋಡಿ ನನ್ನ ಬಳಿ ಕೇವಲ ಎಳ್ಳು ಬೆಲ್ಲ ಮಾತ್ರ ಇದೆಯಲ್ಲ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದೆ. ನಂತರ ಅವರ ಬಳಿ ಇದ್ದ ಸ್ವಲ್ಪ ಎಕ್ಸ್ಚೇಂಜ್ ಮಾಡಿಕೊಳ್ಳುತ್ತಿದ್ದೆವು.
ನಾಲ್ಕೈದು ಜನ ಫ್ರೆಂಡ್ಸ್ ಸೇರಿಕೊಂಡು ಪ್ರತಿ ಶಾಲಾ ರೂಮುಗಳಿಗೆ ಹೋಗಿ ನಮ್ಮ ಶಿಕ್ಷಕರಿಂದ ಟೇಬಲ್ ಮೇಲೆ ಒಂದು ಸ್ಪೂನ್ನಿಂದ ಅವರ ಮುಂದೆ ಹಾಕಿ ಬರುತ್ತಿದ್ದೆವು. ಮನೆಗೆ ಬರುವ ಹೊತ್ತಿಗೆ ಅದೆಲ್ಲಾ ಖಾಲಿಯಾಗಿರ್ತಿತ್ತು.
ಒಮ್ಮೆ ಶಿಕ್ಷಕರಿಗೆ ಸಂಕ್ರಾಂತಿ ಶುಭಾಶಯಗಳು ತಿಳಿಸಿ ಅವರ ಕಡೆಯಿಂದ ಪುನ್ಹ ಪಡೆದು ತಿನ್ನುತ್ತಿದ್ದೆವು.
ಹೀಗೆಲ್ಲ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಿದ್ದೆವು.
ಸವಿತಾ ಮುದ್ಗಲ್
ಧನ್ಯವಾದಗಳು ಸರ್