ಕಾವ್ಯಸಂಕ್ರಾಂತಿ
ಸಂಕ್ರಾಂತಿ ಹಬ್ಬ
ಕಮಲಾ ರಾಜೇಶ್
ಸಾಹಸದಿ ದುಡಿಯುವರು ದೇಶದೇಳಿಗೆ ಬಯಸಿ
ಸಾಹಸಿಗ ರೈತ ಉನ್ನತಿಕೆ ಪಡೆವ
ಸ್ನೇಹ ಬಂಧದ ಬೆಸುಗೆ ಸಂಕ್ರಾಂತಿ ಹಬ್ಬದಲಿ
ಸ್ನೇಹ ಸಂಜೀವಿನಿಯು ಕಮಲಾತ್ಮವೆ
ದೇವಾದಿದೇವರನು ಆರಾಧಿಸುವ ಹಬ್ಬ
ಗೋವುಗಳ ಶೃಂಗರಿಸಿ ನಲಿವ ಹಬ್ಬ
ನೋವುನಲಿವನು ಸರಿಸಿ ನರ್ತಿಸುವ ಹಬ್ಬದಲಿ
ಮಾವು ತೋರಣ ಕಟ್ಟಿ ಕಮಲಾತ್ಮವೆ
ಜನರೆಲ್ಲ ಸಂಕ್ರಾಂತಿಯಲಿ ಒಂದೆಡೆಗೆ ಸೇರಿ
ವಿನಯದಲಿ ನುಡಿದು ಹೋಳಿಗೆಯ ಸವಿದು
ಜನರೊಡನೆ ಬೆರೆತಾಗ ಮೈಮನವು ಪುಳಕದಲಿ
ಕನಸು ನನಸಾಗಿಸಿತು ಕಮಲಾತ್ಮವೆ
ಧನಧಾನ್ಯ ಲಕ್ಷ್ಮಿ ಮನೆಗಾಗಮಿಸುತಿಹ ಹಬ್ಬ
ದಿನಕರನು ಪಥವ ಬದಲಿಸುವ ಹಬ್ಬ
ಜನಮನದ ನೆನಪಿನಲಿ ಅಚ್ಚಳಿಯದಂತಿರುವ
ವಿನಯ ತುಂಬಿದ ಹಬ್ಬ ಕಮಲಾತ್ಮವೆ
ಹೊಸ ಕನಸು ನನಸಾಗಿಸುವ ಹಬ್ಬ ಸಂಕ್ರಾಂತಿ
ಹಸಿರು ತೋರಣ ಕಟ್ಟಿ ಶೃಂಗರಿಸುವ
ಮುಸುಕಿರುವ ಕತ್ತಲೆಯ ಸರಿಸುತ್ತ ಜೀವನದಿ
ಹಸುಗಳನು ತೊಳೆಯೋಣ ಕಮಲಾತ್ಮವೆ
ಕಮಲಾ ಅವರ ಸಂಕ್ರಾಂತಿ ಕವಿತೆ ಉತ್ತಮ ಪ್ರಯತ್ನ