ಪದ್ಯಪಾನಿಯವರ ಕವಿತೆ-ಸುದೀರ್ಘ ಮೌನದ ಅರ್ಥ

ಕಾವ್ಯ ಸಂಗಾತಿ

ಸುದೀರ್ಘ ಮೌನದ ಅರ್ಥ

ಪದ್ಯಪಾನಿ

ತಮ್ಮ ಹೆಸರು ಮತ್ತು ಭಾವಚತ್ರಗಳನ್ನು ಪ್ರಕಟಿಸದಂತೆ ಕೋರಿಕೊಂಡ ಪದ್ಯಪಾನಿಯವರು ನಮಗೂ ತಮ್ಮ ಗುರುತುಬಿಟ್ಟು ಕೊಡದೆ ಮಿಂಚಂಚೆಯ ಮೂಲಕ ತಮ್ಮ ಕವಿತೆ ಕಳಿಸುತ್ತಿದ್ದಾರೆ

ಹೇಗೆ ಸಾಧ್ಯ ಹೇಳು
ತಿರುಗಿ ನೋಡಿ ನಕ್ಕು ಕೈ ಹಿಡಿದು
ಕೊನೆಗೆ
ಸುದೀರ್ಘ ಮೌನವನೇ ಕೊಟ್ಟು
ಇಪ್ಪತ್ತು ವಸಂತಗಳು ಕಳೆದರೂ
ಉದಿಸದಂತೆ ಚೈತ್ರ !
ಮಾಡಿ ಈ ಬಿಗುವಿನಲಿ
ಮಾತೆಂದರೆ ಏನು ?

ಇಲ್ಲಿಯೇ ಇದ್ದು ಇಲ್ಲದ್ದು
ಅಥವಾ
ಏನೂ ಇಲ್ಲದ್ದು
ಈ ಸುದೀರ್ಘ ಮೌನ
ಧ್ಯಾನವಂತೂ
ಅಲ್ಲ ತೆಗೆ !


Leave a Reply

Back To Top