ಸು.ರಂ.ಎಕ್ಕುಂಡಿಯವರ ‘ಮಿಥಿಲೆ’ಯತೆಲುಗು ಅನುವಾದ ಸ.ರಘುನಾಥ ಸರ್ ಅವರಿಂದ

ಅನುವಾದ ಸಂಗಾತಿ

ಸು.ರಂ.ಎಕ್ಕುಂಡಿಯವರ ‘ಮಿಥಿಲೆ’ಯತೆಲುಗು ಅನುವಾದ

ಸ.ರಘುನಾಥ ಸರ್ ಅವರಿಂದ

ಕನ್ನಡ ಮೂಲ : ಸು. ರಂ. ಎಕ್ಕುಂಡಿ
ತೆಲುಗು ಅನುವಾದ : ಸ. ರಘುನಾಥ.

ಮಿಥಿಲೆ

ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ
ಬೀದಿಬೀದಿಯನಲೆದು ನೋಡಬೇಕು
ಅಲ್ಲಿ ಎಲ್ಲಾದರೂ ಮರದ ನೆರಳಲಿ ಕುಳಿತು
ರಾಮಭದ್ರನ ಮಹಿಮೆ ಹಾಡಬೇಕು

ಅಲ್ಲಿಹವು ಎತ್ತರದ ಮನೆಗಳು ಮಂದಿರವು
ಅಲ್ಲಿ ಬೇಕಾದಷ್ಟು ತುಳಸಿ ಹೂವು
ಹೆಜ್ಜೆ ಹೆಜ್ಜೆಗೆ ಅಲ್ಲಿ ಸಂಪಿಗೆಯ ಮರಗಳಿವೆ
ಗಿಳಿಗಳಿವೆ, ಇಲ್ಲ ಪಂಜರದ ನೋವು

ಅಲ್ಲಿ ಪುಷ್ಕರಣಿಗಳ ತುಂಬ ತಾವರೆಯಿಹವು
ಅಲ್ಲಿ ಬೀಸುವ ಗಾಳಿ ಚೈತ್ರಗಂಧ
ಅಲ್ಲಿ ಹಾರುವ ಹಂಸೆ, ಮೈಥಿಲಿಯ ಕನಸಿನೊಲು
ಬೆಡಗಿನಲಿ, ಗಿರಿಯೊಡೆದ ಹಿಗ್ಗಿನಿಂದ

ಅಲ್ಲಿ ವಿಶ್ವಾಮಿತ್ರ ಕುಳಿತಂಥ ಕಲ್ಲು ಇದೆ
ರಾಮಭದ್ರನು ನಿಂತ ಮರದ ನೆರಳು
ಇಂದಿಗೂ ನೆನೆಸುತಿದೆ ಮಣ್ಣ ಕಣಕಣ ಕೂಡ
ಶಿವನ ಬಿಲ್ಲಿನ ಹಗ್ಗವೆಳೆದ ಬೆರಳು

ಅಲ್ಲಿ ಮಣ್ಣೇ ಹಾಗೆ ಎಲ್ಲೆತ್ತಿಕೊಂಡರೂ
ರಾಮಭದ್ರನ ಕರುಣೆ ಸ್ಪಂದಿಸುವುದು
ಎಲ್ಲಿ ಹೊಲ ಉತ್ತರೂ ದೊರೆಯುವುದು ಹೆಣ್ಣು ಮಗು
ಜನಕರಾಯನ ಭಾಗ್ಯನಿಧಿಯ ತೆರೆದು

ಬಿಲ್ಲನೆತ್ತುವ ದಿವಸ ದೇಶವೇ ನೆರೆದಿತ್ತು
ರಾಮಭದ್ರು ತಮ್ಮನೊಡನೆ ಬರಲು
ದಾರಿಯುದ್ದಕು ಹೂವ ಸುರಿಸಿದವು ಹೆಮ್ಮರವು
ದಿವ್ಯ ಮಂಗಲವಾದ್ಯ ಮೊಳಗುತಿರಲು

ಹೃದಯತಟ್ಟೆಗಳಲ್ಲಿ ಕಣ್ಣಿನಾರತಿ ಎತ್ತಿ
ಮಿಥಿಲೆ ಸಂಭ್ರಮದಿಂದ ಎದುರುಗೊಂಡು
ವೈದೇಹಿಯನು ಬಯಸಿ ಬಂದ ರಾಜರ ಆಸೆ
ಶಿವನ ಬಿಲ್ಲಿನ ಜೊತೆಗೆ ತುಂಡು ತುಂಡು

ಸುರಿದ ಮಂತ್ರಾಕ್ಷತೆಯ ಸುತ್ತ ಜಯಜಯಕಾರ
ರಾಮಭದ್ರಗೆ ಕಮಲಮಾಲೆ ಹಾಕಿ
ಬದಿಗೆ ನಿಂತಳು ಸೀತೆ, ಜನಕರಾಜನ ಭಾಗ್ಯ
ಲೋಕಗಳ ಹರ್ಷವೇ ಹರಿಯಿತುಕ್ಕಿ

ಮಗಳ ಮನೆತುಂಬಿಸುತ ಬೀಳ್ಕೊಡಲು ಜನಕನು
ಹನಿದುಂಬಿದವು ಮಿಥಿಲೆಯ ಹೃದಯ – ಕಣ್ಣು
“ಮಗಳೆ ಮಂಗಲವಿರಲಿ” ಎಂದು ಉಡುಗೊರೆಯಿತ್ತ
ಬಂಗಾರ ಕರಡಿಗೆಯ ತುಂಬ ಹೊಲದ ಮಣ್ಣು

ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ
ಬೀದಿಬೀದಿಯನಲೆದು ನೋಡಿ ಬರುವೆ
ರಾಮಭದ್ರನ ಕಥೆಯ ಹಾಡಿ ಕರಡಿಗೆಯಲ್ಲಿ
ಜನಕರಾಜನ ಹೊಲದ ಮಣ್ಣು ತರುವೆ

*****

ಸು.ರಂ.ಎಕ್ಕುಂಡಿ

ಮಿಥಿಲ

ಏದೋ ಒಕ ರೋಜು ನೇನು ಮಿಥಿಲ ಕೆಳ್ಳಿ
ವೀಧಿ ವೀಧಿ ದಿರಿಗಿ ಚೂಡಾಲಿ
ಆಡ ನೆಕ್ಕಡೈನ ಚೆಟ್ಟು ನೀಡನ ಕೊರ್ಚುಂಡಿ
ರಾಮಭದ್ರುನಿ ಮಹಿಮ ಪಾಡಾಲಿ

ಆಡ ಗಲವು ಎತ್ತೈನ ಮೇಡಲು ಮಂದಿರಾಲು
ಆಡ ಕಾವಲಿಸಿನ್ನನಿ ತುಲಸಿ ಸುಮಾಲು
ಆಡ ಅಡುಗು ಅಡುಗುನಾ ಕಲವು ಸಂಪೆಂಗ ಧ್ರುಮಾಲು
ಉನ್ನಾಯಿ ಚಿಲುಕಲು ಲೇವು ಪಂಜರಾಲು ಬಾಧಲು

ಆಡ ಕೊಲನುಲ ನಿಂಡಾ ಕಲವು ತಾಮೆರಲು
ಆಡ ವೀಚೇ ಗಾಲಿ ಚೈತ್ರ ಪರಿಮಳಾಲು
ಆಡ ನೆಗಿರೇ ಹಂಸ, ಮಿಥಲಾ ಕಲಲಾ
ಅಂದಾಲತೋ ರೆಕ್ಕಲಿಪ್ಪಿನ ಆನಂದಾಲತೋ

ಆಡ ವಿಶ್ವಾಮಿತ್ರುಡು ಕೊರ್ಚೊನ್ನ ರಾಯಿಗಲದು
ರಾಮಭದ್ರುಡು ನಿಲುಚುನ್ನ ಚೆಟ್ಟು ನೀಡ
ಈ ನಾಟಿಕೀ ತಲಚು ಮಟ್ಟಿ ಕಣಕಣಾಲು ಸೈತಂ
ಹರವಿಲ್ಲು ನೆಕ್ಕು ಪೆಟ್ಟಿನ ವೇಳ್ಳು

ಅಕ್ಕಡಿ ಮಟ್ಟೇ ಅಲಾ ಎಕ್ಕಡ ನೆತ್ತುಕುನ್ನಾ
ಸ್ಪಂದಿಂಚುನು ರಾಮಭದ್ರುನಿ ಕರುಣಾ
ಎಕ್ಕಡ ಚೇನು ದುನ್ನಿನಾ ದೊರಕುನು ಆಡಕೂನ
ಜನಕರಾಜು ಭಾಗ್ಯನಿಧಿನಿ ತೆರಚಿ

ವಿಲ್ಲು ನೆತ್ತೇ ರೋಜು ದೇಶಮೇ ಕದಲಿ ವಚ್ಚಿಂದಿ
ರಾಮಭದ್ರುಡು ತಮ್ಮುಡಿತೋ ರಾಗಾ
ದೋವ ಪೊಡುವುನಾ ಪೆನುಮಾನುಲು ಕುರಿಪಿಂಚಾಯಿ ಪೂಲಜಲ್ಲು
ಮ್ರೋಗುಚುಂಡಗಾ ದಿವ್ಯ ಮಂಗಲ ವಾದ್ಯಾಲು

ಹೃದಿ ಪಳ್ಳೆಮುಲೋ ಕಂಟಿ ಹಾರತುಲೆತ್ತಿ
ಮಿಥಿಲ ಸಂಬರಾಲತೋ ಎದುರುಗೊನಿ
ವೈದೇಹಿನಿ ಕೋರಿ ವಚ್ಚಿನ ರಾಜುಲು ಕೋರಿಕ
ಶಿವುನಿ ವಿಲ್ಲುತೋ ವಿರಿಗಿಪೋಯಿಂದಿ

ವೇಸಿನ ಮಂತ್ರಾಕ್ಷತಲು ಚುಟ್ಟೂ ಜಯಜಯಕಾರಾಲು
ರಾಮಭದ್ರುಡಿಕಿ ಕಮಲಮಾಲ ವೇಸಿ
ಸರಸನ ನಿಲದಿಂಚಿ ಸೀತ, ಜನಕರಾಜು ಭಾಗ್ಯಂ
ಲೋಕಾಲ ಆನಂದಮೇ ಪೊಂಗಿಪೊರಲಿಂದಿ

ಕೂತುರಿನಿ ಅಪ್ಪಗಿಂಚಿ ಸಾಗನಂಪಗ ಜನಕುಡು
ನೀಳ್ಳು ನಿಂಡುಕುನ್ನಾಯಿ ಮಿಥಿಲಾ ಗುಂಡೆ – ಕಳ್ಳು
“ಕೂತುರಾ ಮಂಗಲಮು ಕಲಗನೀ” ಅನಿ ಕಾನುಕನಿಚ್ಚೆ
ಬಂಗಾರು ಭರಣಿ ನಿಂಡ ಚೇನಿಮಟ್ಟಿ

ಏದೋ ಒಕ‌ ರೋಜು ನೇನು ಮಿಥಿಲ ಕೆಳ್ಳಿ
ವೀಧಿ ವೀಧೀ ದಿರಿಗಿ ಚೂಸಿ ವಸ್ತಾನು
ರಾಮಭದ್ರುನಿ ಕಥನು ಪಾಡಿ ಭರಣೆಲೋ
ಜನಕರಾಜುನಿ ಚೇನಿ ಮಟ್ಟಿನಿ ತೆಸ್ತಾನು


ಸ.ರಘುನಾಥ

ಕವಿ ಪರಿಚಯ

ಸು.ರಂ.ಎಕ್ಕುಂಡಿ

ಕನ್ನಡದ ಅತ್ಯಂತ ಶ್ರೇಷ್ಠ ಕಥನ ಕವನಗಳ ಕವಿ ಮತ್ತು ಸಾಹಿತಿ.ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ. ಇವರು ಹುಟ್ಟಿದ್ದು ೧೯೨೩ ಜನವರಿ ೨೦ರಂದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ. ೧೯೪೪ರಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದ ಎಕ್ಕುಂಡಿಯವರು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕರಾದರು. ೩೫ ವರ್ಷಗಳ ಸೇವೆಯ ನಂತರ ಅಲ್ಲಿಯೆ ಮುಖ್ಯಾಧ್ಯಾಪಕರಾದರು. ಇವರ ಕೃತಿಗಳು ಕವನ ಸಂಕಲನ: ಶ್ರೀ ಆನಂದ ತೀರ್ಥರು , ಸಂತಾನ, ಹಾವಾಡಿಗರ ಹುಡುಗ ನೆರಳು, ಮುಂತಾದವು. ಶ್ರೀಯುತರು ೧೯೯೫ ರಲ್ಲಿ ನಿಧನರಾದರು [೧][೨][೩]
ಸು. ರಂ. ಎಕ್ಕುಂಡಿ ಜನನ ೧೯೨೩
ರಾಣೆಬೆನ್ನೂರು, ಹಾವೇರಿ ಜಿಲ್ಲೆ, ಕರ್ನಾಟಕ ಮರಣ ೧೯೯೫
ಬೆಂಗಳೂರು ವೃತ್ತಿ ಕವಿ ಮತ್ತು ಶಿಕ್ಷಕರಾಷ್ಟ್ರೀಯತೆಭಾರತಪ್ರಕಾರ/ಶೈಲಿಕವಿತೆಪ್ರಮುಖ ಪ್ರಶಸ್ತಿ(ಗಳು)ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
ನ್ಯಾಶನಲ್ ಅವಾರ್ಡ್ ಫಾರ್ ಟೀಚರ್ಸ್s,
ಸೋವಿಯತ್ ಲ್ಯಾಂಡ್ ಅವಾರ್ಡ್.

ಕಾವ್ಯ

ಶ್ರೀ ಆನಂದತೀರ್ಥರು
ಸಂತಾನ
ಹಾವಾಡಿಗರ ಹುಡುಗ
ಮತ್ಸ್ಯಗಂಧಿ
ಬೆಳ್ಳಕ್ಕಿಗಳು
ಬಳುಕದ ಹೂಗಳು
ಪಾರಿವಾಳ

ಕಥಾಸಂಕಲನ

ನೆರಳು

ಕಾದಂಬರಿ

ಪ್ರತಿಬಿಂಬಗಳು

ಪರಿಚಯ

ಶ್ರೀ ಪು.ತಿ.ನರಸಿಂಹಾಚಾರ್ಯರು

ಅನುವಾದ

ಎರಡು ರಶಿಯನ್ ಕಾದಂಬರಿಗಳು.

ಪುರಸ್ಕಾರಗಳು

“ಲೆನಿನ್ನರ ನೆನಪಿಗೆ” ಎನ್ನುವ ಕೃತಿಗೆ ೧೯೭೦ರಲ್ಲಿ ಸೋವಿಯತ್ ಲ್ಯಾಂಡಿನ ನೆಹರು ಪುರಸ್ಕಾರ ದೊರೆತಿದೆ.

“ಮತ್ಸ್ಯಗಂಧಿ” ಕವನ ಸಂಕಲನಕ್ಕೆ ೧೯೭೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.

“ಬೆಳ್ಳಕ್ಕಿಗಳು” ಹಸ್ತಪ್ರತಿಗೆ ೧೯೮೨ರಲ್ಲಿ ಮುದ್ದಣ ಸ್ಮಾರಕ ಕಾವ್ಯ ಬಹುಮಾನ ದೊರೆತಿದೆ.

“ಬಳುಕದ ಹೂವುಗಳು” ಎಂಬ ಕೃತಿಗೆ ೧೯೯೨ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.

*****

ಸ.ರಘುನಾಥ

ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಿವೃತ್ತರಾಗಿರುವ ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು.
1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ  – ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ನೀಡಿಕೆ. ಆಪ್ತ ಸಮಾಲೋಚನೆ:ಉಚಿತ ಸಲಹೆ, ಸಹಕಾರ. 2006ರಲ್ಲಿ ಹಸಿರುಹೊನ್ನು ಬಳಗ ಸ್ಥಾಪನೆ: ಗಿಡಮರ ಸಂರಕ್ಷಣೆ. ಗಿಡಮೂಲಿಕೆ  ಸಂಗ್ರಹ, ಗಿಡ ನೆಡುವುದು, ನೀರಾವರಿ ಹೋರಾಟ. ಅದರ ಸ್ಥಾಪಕ ಕಾರ್ಯದರ್ಶಿ. 2015 ರಲ್ಲಿ ಬೊಮ್ಮಲಾಟಪರುದ ತೊಗಲುಗೊಂಬೆ ಕಲಾವಿದರ ಸಂಘಟನೆ. ಶಿಳ್ಳೇಕ್ಯಾತ ಬಂಗಾರಕ್ಕ ತೊಗಲುಗೊಂಬೆ ಕಲಾ ಸಂಘ ಸ್ಥಾಪನೆ. ಅದರ ಅಧ್ಯಕ್ಷತೆ. 2017ರಲ್ಲಿ ಅಲೆಮಾರಿ ನಿರಾಶ್ರಿತರಾಗಿ ನಮ್ಮ ಮಕ್ಕಳು-ಹಸಿರು ಹೊನ್ನೂರು ಗ್ರಾಮ ನಿರ್ಮಾಣ. 22 ಮಂದಿಗೆ ವಸತಿ, ಶೀಕ್ಷಣ, ಉದ್ಯೋಗ ವ್ಯವಸ್ಥೆ. ಇವೆಲ್ಲೂ ಸ ರಘುನಾಥ ಅವರ ಸಮಾಜಮುಖಿ ಕಾರ್ಯಗಳಿಗೆ ಕೆಲವು ಉದಾಹರಣೆಗಳಷ್ಟೆ.
ಸ. ರಘುನಾಥ ಅವರು ಈ ವರೆಗೂ 8 ಕವನ ಸಂಕಲನಗಳು, 3 ಸಣ್ಣ ಕಥೆಗಳು,  9ಲೇಖನ/ವಿಮರ್ಶೆಗಳ ಕೃತಿ, 3ಮಕ್ಕಳ ಸಾಹಿತ್ಯ, 3ಜಾನಪದ ಸಂಗ್ರಹ ಕೃತಿ, 19 ಅನುವಾದಗಳು , 15ಸಂಪಾದನ ಕೃತಿಗಳನ್ನು ಪ್ರಕಟಿಸಿದ್ದಾರೆ.
ಅವರ ಸಮಗ್ರ ಕೃತಿಗಳು ಒಟ್ಟೂ ೮ ಸಂಪುಟಗಳಲ್ಲಿ ಪ್ರಕಟವಾಗಿವೆ.


2 thoughts on “ಸು.ರಂ.ಎಕ್ಕುಂಡಿಯವರ ‘ಮಿಥಿಲೆ’ಯತೆಲುಗು ಅನುವಾದ ಸ.ರಘುನಾಥ ಸರ್ ಅವರಿಂದ

  1. ತುಂಬಾ ಒಳ್ಳೆಯ ಅನುವಾದ ಅನಿಸುತ್ತೆ. ನನಗೆ ತೆಲುಗು ಗೊತ್ತಿಲ್ಲ. ಆದರೆ ಅದರ ಲಯ ನೋಡಿದರೆ, ಮೂಲದ ಸೊಗಸು ಭಾಷಾಂತರದಲ್ಲೂ ಬಂದಿದೆ ಎನಿಸುತ್ತದೆ. ಸ.ರಘುನಾಥ್ ಸರ್ ಅವರಿಗೆ ಅಭಿನಂದನೆಗಳು.

Leave a Reply

Back To Top