ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಡಾ.ಸುರೇಖಾ ರಾಠೋಡ್

ಕ್ಯಾನ್ಸರ್ ತಜ್ಞೆ ಕಮಲ್ ರಣದೇವಿ (1917-2001)

ಕಮಲ್ ರಣದೇವಿಯವರು ಒಬ್ಬ ಭಾರತೀಯ ಬಯೋಮೆಡಿಕಲ್ ಸಂಶೋಧಕಿ. ಕ್ಯಾನ್ಸರ್ ಮತ್ತು ವೈರಸ್‍ಗಳ  ನಡುವಿನ ಸಂಬಂಧಗಳ ಕುರಿತು ಮಾಡಿದ ಸಂಶೋಧನೆಗಳಿಂದ ಹೆಸರುವಾಸಿಯಾದ್ದಾರೆ. ಭಾರತೀಯ ಮಹಿಳಾ ವಿಜ್ಞಾನಿಗಳ ಸಂಘದ ಸ್ಥಾಪಕ ಸದಸ್ಯರಾಗಿದ್ದರು.

ಕಮಲ್ ರಣದೇವಿ 8 ನವೆಂಬರ್ 1917ರಂದು ಪುಣೆಯಲ್ಲಿ ಜನಿಸಿದರು. ಈಕೆಯ ತಂದೆ ದಿನಾರ್ ದತ್ತಾತ್ರೇಯ ಸಮರ್ತ್. ತಾಯಿ ಶಾಂತಾಬಾಯಿ ದಿನಾರ್ ಸಮರ್ತ್. ಇವರ ತಂದೆ ಪುಣೆಯ ಫರ್ಗುಸ್ಸನ್ ಕಾಲೇಜಿನಲ್ಲಿ ಜೀವಶಾಸ್ತ್ರ ವಿಷಯವನ್ನು ಬೋಧಿಸುತ್ತಿದ್ದರು. ಇವರ ತಂದೆಯು ತನ್ನ ಎಲ್ಲಾ ಮಕ್ಕಳಿಗೆ ಚೆನ್ನಾಗಿ ಶಿಕ್ಷಣ ನೀಡಿದರು. ರಣದೇವಿ  ಶಾಲೆಯಲ್ಲಿ ತುಂಬಾ ಚುರುಕಾಗಿದ್ದರು. ಪ್ರಾಥಮಿಕ ಶಿಕ್ಷಣವನ್ನು ಹುಜುರಪಾಗಾ ಎಚ್‍ಎಚ್‍ಸಿಪಿ ಹೈಸ್ಕೂಲಿನಲ್ಲಿ ಕಲಿತರು. ಇವರ ತಂದೆಯು ಮಗಳು ವೈದ್ಯಳಾಗಬೇಕು ಮತ್ತು ವೈದ್ಯರನ್ನೆ ವಿವಾಹ ವಾಗಬೇಕು ಎಂದು ಬಯಸಿದ್ದರು. ಹಾಗಾಗಿ ಇವರು ವೈಧ್ಯಳಾಗಬೇಕೆಂದು ನಿರ್ಧರಿಸಿದ್ದರು. ಅದರಂತೆ ಇವರು ಪದವಿಯಲ್ಲಿ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯವನ್ನು ಆಯ್ಕೆ ಮಾಡಿಕೊಂಡು ಫುರ್ಗುಸ್ಸನ್ ಕಾಲೇಜಿನಲ್ಲಿ ಸೇರಿಕೊಂಡರು.

ರಣದೇವಿಯವರು 1934ರಲ್ಲಿ ತನ್ನ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದು ನಂತರ 1943ರಲ್ಲಿ ಪುಣೆಯ ಕೃಷಿ ಕಾಲೇಜಿನಲ್ಲಿ ತನ್ನ ಸ್ನಾತಕೋತರ ಪದವಿಯನ್ನು ಪಡೆದರು. ಮೇ 13, 1939ರಂದು ಗಣಿತಶಾಸ್ತ್ರಜ್ಞ ಜೆ.ಟಿ ರಾಣದಿವ್ ಅವರನ್ನು ವಿವಾಹವಾದರು. ನಂತರ ಬಾಂಬೆಗೆ ಸ್ಥಳಾಂತರಗೊಂಡರು. ಆಗ ಇವರಿಗೆ ಅನೀಲ್ ಜಯಸಿಂಗ್ ಎಂಬ ಮಗ ಜನಿಸಿದನು.

ಬಾಂಬೆಯಲ್ಲಿ ಟಾಟಾ ಸ್ಮಾರಕ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಲೇ ತಮ್ಮ ಅಧ್ಯಯನವನ್ನು ಮುಂದುವರೆಸಿದರು. ಸೈಟಾಲಾಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯುವಾಗ ಪತಿ ತುಂಬಾ ಸಹಾಯ ಮಾಡಿದರು. ಇವರು ಬಾಂಬೆ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿಗಾಗಿ ಪ್ರವೇಶವನ್ನು ಪಡೆದರು. ಇವರ ಮಾರ್ಗದರ್ಶಕರು ಡಾ. ವಿ ಆರ್ ಖಾನೋಲ್ಕರ್ ಅವರು ಒಬ್ಬ ಪ್ರಸಿದ್ದ ವೈದ್ಯರಾಗಿದ್ದರು. ಅವರು ಭಾರತೀಯ ಕ್ಯಾನ್ಸರ್ ರಿಸರ್ಚ್ ಸೆಂಟರ್ (ಐಸಿಆರ್‍ಸಿ)ನ ಸಂಸ್ಥಾಪಕರಾಗಿದ್ದರು. ಇವರ ಮಾರ್ಗದರ್ಶನದಲ್ಲಿ ಪಿಎಚ್‍ಡಿ ಪದವಿಯನ್ನು 1949ರಲ್ಲಿ ಪಡೆದರು. ನಂತರ ಇವರ ಮಾರ್ಗದರ್ಶಕರು ಅಮೇರಿಕಾದ ವಿಶ್ವವಿದ್ಯಾಲಯದ ಫೆಲೋಶಿಫ್ ಪಡೆಯಲು ಪ್ರೋತ್ಸಾಹಿಸಿದರು. ಬಾಲ್ಟಿಮೋರ್‍ನ ಜಾನ್ಸ್ ಹಾಪ್ಕಿನ್ಸ್ ಯುನಿವರ್ಸಿಟಿಯಲ್ಲಿ ಟಿಶೂ ಕಲ್ಚರ್ ವಿಷಯಕ್ಕಾಗಿ ಪೊಸ್ಟ್ ಡಾಕ್ಟರಲ್ ಸಂಶೋಧನೆ ಸಿಕ್ಕಿತ್ತು.

ಕಮಲ್ ಭಾರತಕ್ಕೆ ಮರಳಿದ ನಂತರ ಮತ್ತೆ ಹಿರಿಯ ಸಂಶೋಧನಾ ಅಧಿಕಾರಿಯಾಗಿ ಐಸಿಆರ್‍ಗೆ ಸೇರಿಕೊಂಡು ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಬಾಂಬೆಯಲ್ಲಿ ಜೀವಶಾಸ್ತ್ರ ಪ್ರಯೋಗಾಲಯ ಮತ್ತು ಅಂಗಾಂಶ ಸಂಸ್ಕೃತಿ ಪ್ರಯೋಗಾಲಯವನ್ನು ಸ್ಥಾಪಿಸುವಲ್ಲಿ ಇವರು ಪ್ರಮುಖವಾದ ಪಾತ್ರ ವಹಿಸಿದರು. 1966 ರಿಂದ 1970ರ ವರೆಗೆ ಕಮಲ್ ಅವರು ಭಾರತೀಯ ಕ್ಯಾನ್ಸರ್ ಸಂಶೋಧನಾ ಕೆಂದ್ರದ ನಿರ್ದೇಶಕರಾಗಿದ್ದರು. ಕಮಲ್ ಅವರು ತಮ್ಮ ಸಹಾಯಕರೊಂದಿಗೆ ಸೇರಿಕೊಂಡು ಟಿಶಿವ್ ಕಲ್ಚರ್ ಮಿಡಿಯಾ ಮತ್ತು ಅದಕ್ಕೆ ಸಂಬಂಧಿಸಿದ ಬಯೋಲಾಜಿ ಮತ್ತು ಕೆಮೇಸ್ಟ್ರೀಯನ್ನು ಅಭಿವೃದ್ಧಿ ಪಡಿಸಿದರು. ಹಾಗೇಯೆ ಕಮಲರವರು ಕಾರ್ಸಿನೋಜೆನೆಸಿಸ್, ಸಲ್ ಬಯಾಲಾಜಿ ಮತ್ತು ಇಮ್ಯುನೊಲಾಜಿಯಲ್ಲಿ ಹೊಸ ಘಟಕವನ್ನು ಸ್ಥಾಪಿಸುವ ಜವಾಬ್ದಾರಿಯನ್ನು ಸಹ ಹೊಂದಿದ್ದರು. ಕಮಲರವರು ವೃತ್ತಿ ಜೀವನದಲ್ಲಿ ಕ್ಯಾನ್ಸರ್ ರೋಗಶಾಸ್ತ್ರದ ಕುರಿತು ಪ್ರಾಣಿಗಳ ಮೇಲೆ ಪ್ರಯೋಗ ಮಾಡುವ ಸಂಶೋಧನೆಯು ಕೂಡ ಸೇರಿಕೊಂಡಿತ್ತು. ಈ ಸಂಶೋಧನೆಯು ಸ್ತನ ಕ್ಯಾನ್ಸರ್, ರಕ್ತದ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್‍ನಂತಹ ಕಾಯಿಲೆಗಳ ಕುರಿತಾಗಿರುವುದರಿಂದ ಮತ್ತಷ್ಟು ಮೆಚ್ಚುಗೆಗೆ ಕಾರಣವಾಯಿತು.

ಕಮಲ್ ಅವರ ಸಾಧನೆಗಳಲ್ಲಿ ಇನ್ನೊಂದು ಗಮನಾರ್ಹವಾದ ಸಾಧನೆವೆಂದರೆ ಹಾರ್ಮೋನಗಳ ಮತ್ತು ಗಡ್ಡೆಗಳ ವೈರಸ್ ನಡುವಿನ ಸಂಬಂಧದವನ್ನು ಕಲ್ಪಿಸಿದರು. ಕಮಲರವರು ಭಾರತೀಯ ಮಹಿಳಾ ವಿಜ್ಞಾನಿಗಳಿಗೆ ಪ್ರಮುಖ ವೈದ್ಯರಾಗಿರುವರು. ಕ್ಯಾನ್ಸರ್ ವಿಷಯದಲ್ಲಿ ಸಂಶೋಧನೆ ಮಾಡಲು ಅದರಲ್ಲಿ ಮಹಿಳೆಯರು ಮತ್ತು ಮಕ್ಕಳಲ್ಲಿ ಬರುವ ಕ್ಯಾನ್ಸರ್ ವಿಷಯದ ಕುರಿತು ಅಧ್ಯಯನ ಮಾಡಲು ಉತ್ತಮ ಉದಾಹರಣೆಯಾಗಿದ್ದಾರೆ.

ಕಮಲ್‍ರವರು ಬಾಂಬೆ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯ ಪ್ಯಾಥಾಲಾಜಿ ವಿಭಾಗದಲ್ಲಿ ಕೆಲಸ ಮಾಡಿದರು. ಇಲ್ಲಿ ಕಾರ್ಯನಿರ್ವಸುವಾಗ ನಾಲ್ಕು ಇಲಿಗಳ ತಳಿಗಳ ಮೇಲೆ ಪ್ರಯೋಗಿಸಿ, ಸಾಮಾನ್ಯವಾಗಿ ಸಸ್ತನಿ ಗ್ರಂಥಿಗಳು ಸ್ತನ ಕ್ಯಾನ್ಸರ್‍ಗೆ ಒಳಗಾಗುವ ಸಾಧ್ಯತೆಯ ಕುರಿತು ವರದಿ ಮಾಡಿದರು. ವಿಶೇಷವಾಗಿ ಸ್ತನ ಕ್ಯಾನ್ಸರ್ ಅಧ್ಯಯನಗಳ ಬಗ್ಗೆ ಹೆಚ್ಚಿನ ಗಮನ ವಹಿಸಿದರು. ಈ ರೋಗಕ್ಕೆ ಕಾರಣಗಳನ್ನು ಅನುವಂಶೀಯತೆ, ಮಕ್ಕಳನ್ನು ಹೆರುವುದು, ಹೆಸ್ಟೋಲಾಜಿಕಲ್ ರಚನೆ ಮತ್ತು ಇತರೆ ಅಂಶಗಳೊಂದಿಗೆ ಪರಸ್ಪರ ಸಂಬಂಧವನ್ನು ಕಲ್ಪಿಸಲು ಪ್ರಯತ್ನಿಸಿದ ಇವರ ಪ್ರಯತ್ನ ಗಮನಾರ್ಹವಾಗಿದೆ.

ಕಮಲ್ ಅವರು ಭಾರತೀಯ ಮಹಿಳಾ ಸಂಘಗಳ ಮೂಲಕ ರಾಜ್‍ಪುರ ಮತ್ತು ಅಹ್ಮದ್‍ನಗರದ ಸಮೀಪಯಿರುವ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಆರೋಗ್ಯ ಮತ್ತು ವೈದ್ಯಕೀಯ ಆರೈಕೆ ಕುರಿತು ಸಲಹೆಗಳನ್ನು ನೀಡುತ್ತಿದ್ದರು.

ಕಮಲ ಅವರಿಗೆ 1982ರಲ್ಲಿ ಮೆಡಿಶನ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ ಭಾರತ ಸರ್ಕಾರವು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.

1964ರಲ್ಲಿ ಭಾರತೀಯ ವೈದ್ಯಕೀಯ ಮಂಡಳಿಯು ಮೊದಲ ಸಿಲ್ವರ್ ಜುಬಲಿ ಸಂಶೋಧನಾ ಪ್ರಶಸ್ತಿ ನೀಡಿತು. ಈ ಪ್ರಶಸ್ತಿ ಒಂದು ಚಿನ್ನದ ಪದಕ ಮತ್ತು 15000 ಸಾವಿರ ನಗದನ್ನು ಒಳಗೊಂಡಿತು.

1964ರಲ್ಲಿ ಸೂಕ್ಮ ಜೀವವಿಜ್ಞಾನದಲ್ಲಿ ಜಿಜೆ ವಾಟುಮುಲ್ ಫೌಂಡೇಶನ್ ಪ್ರಶಸ್ತಿಯನ್ನು ನೀಡಿತು. ಕಮಲ ಅವರು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್)ನ ಎಮೆರಿಟಸ್ ಮೆಡಿಕಲ್ ಸೈಂಟಿಸ್ಟ್ ಕೂಡ ಆಗಿದ್ದರು.

2001 ರಲ್ಲಿ ಮರಣಹೊಂದಿದ ಕಮಲ ಅವರು ಕ್ಯಾನ್ಸರ್ ಮತ್ತು ಕುಷ್ಟರೋಗದ ಬಗ್ಗೆ 200 ಕ್ಕೂ ಹೆಚ್ಚು ವೈಜ್ಞಾನಿಕ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರುವರು. ಅದರಲ್ಲಿ ಕೆಲವು: 1. ಬೆಟೆಲ್ ಕ್ಷಿಡ್ ಚೂಯಿಂಗ್ ಆಂಡ್ ಒರಲ್ ಕ್ಯಾನ್ಸರ್: ಎಕ್ಸಪಿರಿಮೆಂಟಲ್ ಸ್ಟಡಿಸ್ ಆನ್ ಹ್ಯಾಮಸ್ಟರ್. 2. ಎಫಕ್ಟ್ ಆಫ್ ಯುರೆಥಾನ್ ಆನ ನ್ಯೂಕ್ಲಿಕ್ ಆ್ಯಸಿಡ್. 3. ಕ್ಯಾರ್ಟೆಕ್ಟರೆಜಿಶನ್ ಆಫ್ ಮಮ್ಮರಿ ಟ್ಯೂಮರ್ ವೈರಸ್ ಆಫ್ ಐಸಿಆರ್‍ಸಿ ಮೌಸ್.

.————————————————-

ಡಾ.ಸುರೇಖಾ ರಾಠೋಡ್

ಡಾ.ಸುರೇಖಾ ರಾಠೋಡ್

ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ

Leave a Reply

Back To Top