ಇಮಾಮ್ ಮದ್ಗಾರ-ಕನಸೇ ಬೇಡ ನಂಗೇ

ಕಾವ್ಯಸಂಗಾತಿ

ಕನಸೇ ಬೇಡ ನಂಗೇ

ಇಮಾಮ್ ಮದ್ಗಾರ

ನೆನ್ನೆ ಕನಸಲ್ಲಿ ನೀನೇಕೆ ದೂರಾಗುವ ಮಾತನಾಡಿದೆ ಕನಸು ನನಸಾದರೇ..?

ನನ್ನುಸಿರ ಕೊಳಲಿಗೆ ನೀನು ಧ್ವನಿಯಾಗಿ ನನ್ನುಸಿರತಿತ್ತಿಗಳು ಬಿರಿಯುವಂತೆ ಪ್ರೇಮರಾಗ ನುಡಿಸಿ
ನೀನು ಕ್ರಿಷ್ಣನಂತೆ ಸಂತೈಸಿದೆ ಮತ್ತೇಕೆ ದೂರಾಗುವ ಮಾತನಾಡಿದೆ

ನೆನಪುಗಳು ನುಜ್ಜುಗುಜ್ಜಾಗಿ ನೋವುಣ್ಣುತ್ತಿವೆ ಪ್ರತಿಕ್ಷಣ ನನ್ನದೆಯ ಕನ್ನಡಿಯಲ್ಲಿ
ನಿನ್ನ ಪ್ರತಿಬಿಂಬ ನೋಡಿ ಮನಸು ಮಾತೇಮರೆತಿದೆ
ನೀನೆಕೆ ದೂರಾಗುವ ಮಾತನಾಡಿದೆ

ಮೌನಮಾತನಾಡಿದೆ ಇಂದು ! ನೆನ್ನೆಯ ಕನಸಿನ ತಳಮಳದಲ್ಲಿ!
ಅನುರಾಗದ ಕೊಳಲಿನಲಿ ಅಪಸ್ವರದನಾದ ! ಮಿಡಿಯುವ ಹುೃದಯ ಮಿಡುಕುತಿದೆ ಭವಿತವ್ಯದ ಭಯದಲಿ
ನೀನೇಕೆ ದೂರಾಗುವ ಮಾತನಾಡಿದೆ

ಸೋಲು ಗೆಲುವು ಅಪಮಾನ ಅಪನಂಬಿಕೆ ಗಳಿಕೆ ಇಳಿಕೆ ದುಃಖದುಮ್ಮಾನ ಆಸೆ ಆಕಾಂಕ್ಷೆಗಳ ಮಧ್ಯೆಯೂ ನನ್ನ ಕೈಬಿಡುವದಿಲ್ಲ ಎಂದು ಅಭಯ ನೀಡಿದ್ದೆ ಮತ್ತೇಕೆ ದೂರಾಗುವ ಮಾತನಾಡಿದೆ

ನನ್ನೆದೆಯ ಗರ್ಭಗುಡಿಯಲ್ಲಿ
ನೆಲೆಗೊಂಡಿರುವ ದೈವನೀನು
ಘಮಘಮಿಸುವ ಮೊಗ್ಗನರಳಿಸುವ ಮನ್ಮಥ ನೀನು
ಕನಲಿ ಹೋಗಿದೆ ಮನಸು ನೆನ್ನೆಯ ಕನಸಿನಿಂದ
ಹೊಸಕನಸೇಬೇಡ ನಂಗೇ..
ನೀನಿದ್ದುಬಿಡು ದೂರಾಗುವ ಮಾತನಾಡದಂಗೇ….

———————-

Leave a Reply

Back To Top