ಅರುಣಾ ಶ್ರೀನಿವಾಸ ಕವಿತೆ-ಅಮ್ಮ

ಕಾವ್ಯ ಸಂಗಾತಿ

ಅಮ್ಮ

ಅರುಣಾ ಶ್ರೀನಿವಾಸ

ಬಣ್ಣ ಬಣ್ಣದ ಯಾರೋ ತರುವ ಬಟ್ಟೆಗಳೆಲ್ಲಾ
ಅಮ್ಮನ ಬೆವರು ಹನಿ ಸವರಿದ
ಸೂಜಿ ನೂಲುಗಳ ಜತೆ ಸೇರಿ
ಸುಂದರ ಅಂಗಿಗಳಾಗುತ್ತಿದ್ದವು.

ಪ್ರತಿಯಾಗಿ ಅವಳಿಗೆ ಸಿಗುತ್ತಿದ್ದ
ಗರಿ ಗರಿ ನೋಟುಗಳು
ತರಕಾರಿ, ದಿನಸಿ ಅಂಗಡಿಗಳಲ್ಲಿ
ಮತ್ತು ಶಾಲೆಯ ಫೀಸುಗಳಲ್ಲಿ
ಬಿಕರಿಯಾಗುತ್ತಿದ್ದವು….

ಕಾವ್ಯ ಸಂಗಾತಿ

ಅಮ್ಮ

ಅರುಣಾ ಶ್ರೀನಿವಾಸ

ಅಮ್ಮನಿಗೂ ಅವಳದ್ದೇ ಆದ
ಕನಸುಗಳಿದ್ದವು…
ಅವಳ ನನಸಾಗದ ಕನಸುಗಳ ಬಗ್ಗೆ..
ನೋಟಿನಲ್ಲಿ ಅಂಟಿಕೊಂಡ
ಬೆವರು ಹನಿಗಳಿಗೂ ಕೊರಗುಗಳಿದ್ದವು..

ಬಹುಶಃ ಬೆಳೆದು ಹೆಮ್ಮರವಾದ
ಅವಳ ಕನಸುಗಳು
ಸೋರಿ ಹೋಗಿರಬೇಕು
ಅವಳು ಹೊಲಿಯುತ್ತಿದ್ದ
ಬಣ್ಣ ಬಣ್ಣದ ಬಟ್ಟೆಗಳ ನಡುವೆ…
ಮತ್ತೆ ಇನ್ನೊಂದಿಷ್ಟು..
ಅವಳ ಬಸಿರು ಸೀಳಿ ಬಂದ
ಮಕ್ಕಳ ನಡುವೆ…

ಇಲ್ಲವಾದರೆ..
ಅವಳು ಹೊಲಿದ ಅಂಗಿಗಳು
ಹೇಗೆ ಅಷ್ಟು ಸುಂದರವಾಗಿರುತ್ತಿದ್ದವು..?
ಮತ್ತು ಬೆಳೆದ ಅವಳ ಮಕ್ಕಳು
ಹೇಗೆ ಒಳ್ಳೆಯ ಬದುಕು
ಕಟ್ಟಿಕೊಳ್ಳುತ್ತಿದ್ದರು..?


ಮೌನಜೀವಿ
ಅರುಣಾ ಶ್ರೀನಿವಾಸ

Leave a Reply

Back To Top