ಕಾವ್ಯಸಂಗಾತಿ
ಅವಳು ಮಾತಾಡಲಿಲ್ಲ….?
ಶಂಕರಾನಂದ ಹೆಬ್ಬಾಳ
ಅವಳು ಮಾತಾಡಲಿಲ್ಲ,
ತುಟಿಗಳಲ್ಲಿ ನೀರವ ಮೌನ…!
ಒಳಗೊಳಗೆ ಚಡಪಡಿಕೆ,
ಮತ್ತೊಮ್ಮೆ ದ್ವಂದ್ವದಲ್ಲಿ
ಹೊಯ್ದಾಡುವ ಮನ…..!!
ವಾಂಛಲ್ಯಕೆ ಹಾತೊರೆದ ಜೀವ
ಜೇಡನ ಬಲೆಯೊಳಗೆ
ಸಿಲುಕಿ ಒದ್ದಾಡುತ್ತಿದೆ….!
ಬದುಕಿನ ಬೆಂಗಾಡಿನಲ್ಲಿ
ಅನಾಥ ಭಾವ
ಕಂಗೆಟ್ಟು ತಿರುಗುತ್ತಿದೆ
ಒಂಟಿ ಹೃದಯ
ಕಂಬನಿಯ ಧಾರೆಯಲ್ಲಿ….!
ನನ್ನ ಪ್ರೇಮಕ್ಕೆ ಇತಿಶ್ರೀ
ಹಾಡುವ ಮುನ್ನ…
ಮೌನದಲಿ ಶೋಕಗೀತೆ
ಗುನುಗಿ ಬಾಳಬಾಂದಳದಿ
ಬೀಳುವ ಉಲ್ಕೆಯಾದೆ….!
ನೀ ಬರುವ ಹಾದಿ ಕಾದುಕಾದು,
ಚಿತ್ತದ ಚಿತ್ರದಲ್ಲಿ ಮಾಸಿಹೋದೆ
ಮತ್ತೆ ಸಿಗುವಳಲ್ಲ, ಈ ರಾಧೆ…..!!
ಆರ್ದ್ರತೆಯ ಕಂಗಳಲಿ
ನೀರು ತೊಟ್ಟಿಕ್ಕುತ್ತಿದೆ,
ಬಾಹುಗಳು ಮಿಲನವನು
ಮತ್ತೆ ಮತ್ತೆ ನೆನೆಯುತ್ತಿವೆ….!
ಪ್ರಣಯ ತಲ್ಪದಲಿ ಕಂಡ
ಕನಸುಗಳು ಬಾಡಿದ ಹೂಗಳಾಗಿ
ತೊಟ್ಟಿ ಸೇರುತ್ತಿವೆ…!
ಇಷ್ಟಾದರೂ ಸುಮ್ಮನಿದ್ದೇನೆ,
ಅಹಲ್ಯೆಯಂತೆ,
ರಾಧೆಯಂತೆ,
ಸುಮ್ಮನಿದ್ದೇನೆ,,,,,!
ಕೊನೆಗೆ….?
ಒಮ್ಮೆಯೂ….
ಅವಳು ಮಾತಾಡಲೆ ಇಲ್ಲ…..!!
ಶಂಕರಾನಂದ ಹೆಬ್ಬಾಳ
ಚೆನ್ನಾಗಿದೆ ಕವಿತೆ. ಅಭಿನಂದನೆಗಳು.