ಅಕ್ಷತಾ ಜಗದೀಶ.ಕವಿತೆ-ಪಯಣ

ಕಾವ್ಯ ಸಂಗಾತಿ

ಪಯಣ

ಅಕ್ಷತಾ ಜಗದೀಶ

.

ಬದುಕೊಂದು ಸುಂದರ ಪಯಣ
ಸಾಗುವ ನಡುವೆ ಸಿಗುವ ಅನುಭವಗಳು
ಅವಿಸ್ಮರಣೀಯ…

ಎಲ್ಲೋ ಹುಟ್ಟಿ, ಎಲ್ಲೋ ಹರಿವ
ನದಿಯ ಹಾಗೆ …


ಮಾನವನ ಜೀವನ…
ಪಯಣಿಸುವ ದಾರಿಯುದ್ದಕ್ಕೂ
ಸಿಗುವರು ಅದೆಷ್ಟೋ… ಬಂಧು-ಮಿತ್ರರು….

ಸಂಧಿಸಿದಾಗ ಅದೇನೋ ಸಂತಸ
ನಿಲ್ದಾಣದಲಿ ಮರೆಯಾದಾಗ
ಅದೇನೋ ಸಂಕಟ…
ಮತ್ತೆ ಮುಂದಿನ ನಿಲ್ದಾಣದಲಿ
ಹೊಸ ಪರಿಚಯ ..

ಕೊನೆಯ ನಿಲ್ದಾಣ ಬರುವವರೆಗೂ
ಮತ್ತೆ ಸುಖ-ದು:ಖದ
ಸಮ್ಮಿಶ್ರಣ….

ಒಮ್ಮೊಮ್ಮೆ ಬೀಸುವ ತಂಗಾಳಿ
ಮುದ ನೀಡುವ ತಂಪಾದ ಗಾಳಿ..
ಮಗದೊಮ್ಮೆ ಬರುವ ಬೀರುಗಾಳಿ
ಪಯಣ ತಡೆಯುವುದೇನೋ ಎಂಬ
ಭ್ರಾಂತಿ..
.
ಪಯಣ ಎಂಬುದೇ ಹಾಗಲ್ಲವೇ?
ಏರಿಳಿತಗಳ ದಾರಿ…
ಸಾಗುತಲೇ ಇರಬೇಕು
ನಮ್ಮದೇ ಆದ ಸುಂದರ ಬದುಕ
ಏರಿ


3 thoughts on “ಅಕ್ಷತಾ ಜಗದೀಶ.ಕವಿತೆ-ಪಯಣ

Leave a Reply

Back To Top