ರತ್ನರಾಯಮಲ್ಲ-ಗಜಲ್

ಕಾವ್ಯ ಸಂಗಾತಿ

ಗಜಲ್

ರತ್ನರಾಯಮಲ್ಲ

ಅಧರಗಳು ಅದುರುತಿವೆ ನಿನ್ನಧರಗಳ ಕನವರಿಕೆಯಲಿ
ಬಾಹುಗಳು ನಿಶ್ಚಲವಾಗಿವೆ ಆಲಿಂಗನದ ನಿರೀಕ್ಷೆಯಲಿ

ಮುತ್ತಿನ ಮತ್ತು ಆವರಿಸುತಿದೆ ಮೈಮನಗಳ ತುಂಬೆಲ್ಲ
ಕಂಗಳು ಕಾಯುತಿವೆ ನಿನ್ನ ಲಜ್ಜೆಯ ರಂಗೋಲಿಯಲಿ

ಚೆಲುವಿನ ರಸದೌತಣ ಉಣಿಸುತಿರುವೆ ಪ್ರಣಯಾಂಗಿನಿ
ಬೆರಳುಗಳು ನಿಮಿರಿವೆ ಅವಯವದ ಅನುಕರಣೆಯಲಿ

ಮುಗುಳ್ನಗೆಯ ಹೋದೋಟದಲಿ ಮಾಲಿಯಾಗಿರುವೆ
ಕೈಗಳು ಕೆಣಕುತಿವೆ ಅನುದಿನ ನಡುವಿನ ಅಳತೆಯಲಿ

ಪೊರೆ ಕಳಚಲು ಮಲ್ಲಿ ಮೆಲ್ಲಮೆಲ್ಲನೆ ಧಾವಿಸಿರುವನು
ಸಾಂಗತ್ಯವು ಬಿಕ್ಕಳಿಸುತಿದೆ ಅಮೃತದ ರಸಗಟ್ಟಿಯಲಿ


Leave a Reply

Back To Top