ಟಿ.ದಾದಾಪೀರ್ ತರೀಕೆರೆ-ಹಳೇ ವಷ೯ವ ಮರೆಯಲಿ ಹೇಗೆ

ಕಾವ್ಯ ಸಂಗಾತಿ

ಹಳೇ ವಷ೯ವ ಮರೆಯಲಿ ಹೇಗೆ

ಟಿ.ದಾದಾಪೀರ್ ತರೀಕೆರೆ

ಹೊಸ ವಷ೯ ಬಂತೆಂದು
ಕ್ಯಾಲೆಂಡರ್ ಬದಲಾಯಿಸೋದು
ಅಂದ್ರೆ ಸ್ವಲ್ಪ ನೋವೆ

‘ಬದಲಾಯಿಸೋದು
ನಮಗೆ ಒಗ್ಗಲ್ಲ’

ಹೊಸ ವಷ೯ವ ಸ್ವಾಗತಿಸಲು
ಪಾಟಿ೯, ಸೆಲೆಬ್ರೇಶನ್ ಗಳಿಂದ
ಸ್ವಲ್ಪ ದೂರನೆ

ಹೊಸದು ಬಂತೆಂದು
ಹಳೇದ ಮರೆತು
ಕುಣಿಯೋಕೆ ಆಗಲ್ಲ ನಮ್ಗೆ

“ಹೊಸ ವರುಷ
ತರಲಿ ಹರುಷ
ಇರಲಿ ನೂರು ವರುಷ…!”

ಅಯ್ಯೋ ಇವೆಲ್ಲ ಗ್ರೀಟಿಂಗ್ಸ್ ಗೆ
ಹಾಕಲು ಹುಟ್ಟಿದ
ತ್ರಾಸ ಪ್ರಾಸದ ಪದಗಳಷ್ಟೆ

ಹಾರೈಸುವುದು ಎಂದರೆ
ಆಮೇಲೆ
ಕಣ್ಣಂಚಿನ ನೀರಾಗೋದು ಅಲ್ಲ
ಕಣ್ಣ ಬೆಳಕಾಗೋದು

ಹಳೇ ವಷ೯ವ ಬೀಳ್ಕೊಡೊಕೆ
ಮನಸಾಗದು
ಬಿಟ್ಟು ಇರೋ ಗುಣ ನಮಗಿಲ್ಲ

ಹಳೇ ವಷ೯ದ ಜೊತೆಗೆ
ಹೊಸ ವಷ೯ಕೆ ಕಾಲಿಟ್ಟಿದ್ದೆನೆ

ಅಲ್ಲಿ ಎದೆ ಹೊಡೆದಂತ ಸುಖವಿತ್ತು
ಬಿಕ್ಕಿ ಅತ್ತ ಕಣ್ಣಿರ ಹನಿಗಳಿವೆ
ಭರವಸೆ ಮೂಡಿಸಿದ ದಿನಗಳಿವೆ
ಹೇಗೆ ಮರೆಯಲಿ
ಹೊಸತು ಬಂತೆಂದು ಹಳೆಯ ವಷ೯ವ


ಟಿ.ದಾದಾಪೀರ್ ತರೀಕೆರೆ

Leave a Reply

Back To Top