ಕಾವ್ಯ ಸಂಗಾತಿ
ಮನುಷ್ಯನಾಗಬಹುದೇ..?
ನಾಗರತ್ನ ಎಂ ಜಿ
ವರುಷವೇನೋ ಹೊಸದು
ಹೊಸದಾಗಬಹುದೇ ಮನಸು?
ಮೃಗತ್ವ ತೊರೆದು
ಮಾನವ ಮತ್ತೆ
ಮನುಷ್ಯನಾಗಬಹುದೇ?
ಹದಿನಾರು ಗುಣ ಹೊಂದಿಸಿ
ಮದುವೆಯಾಗುವ ಕಾಲವದು
ಮದುವೆಯಾಗದೇ ಸಂಗಾತಿಯ
ಮೂವತ್ತಾರು ಚೂರಾಗಿಸಿದ ಪಾಪಿ
ಮನುಷ್ಯನಾಗಬಹುದೇ?
ಅಧಿಕಾರದ ಆಮಿಷದಲಿ
ಕೆಸರೆರೆಚಾಟ ಬಿಟ್ಟು
ದೇಶಕ್ಕಾಗಿ ದುಡಿಯುವ
ನಿಜ ನಾಯಕನಾಗಬಹುದೇ
ಜನರ ಹಿತ ಕಾಯುವ
ಮನುಷ್ಯ ನಾಗಬಹುದೇ?
ದುಡ್ಡೇ ಜೀವನ
ಎಂದು ಅಕ್ರಮ ಮಾಡುವುದ
ಬಿಟ್ಟು
ಜೀವನಕ್ಕಾಗಿಯಷ್ಟೇ ದುಡ್ಡು
ಮಾಡುವ
ಮನುಷ್ಯನಾಗಬಹುದೇ?
ಹೆಣ್ಣು ಹೆಣ್ಣೆಂದು
ಇನ್ನೂ ಜರೆಯುವ
ಸಮಾಜದಲಿ
ಹೆಣ್ಣನು ಗೌರವಿಸುವ
ಮನುಷ್ಯನಾಗಬಹುದೇ?
ಹೊಸದೇನನ್ನೋ ಹುಡುಕುವ
ಭರದಲ್ಲಿ
ಹಳೆಯ ಮೌಲ್ಯ ಮರೆಯದ
ಮನುಷ್ಯನಾಗಬಹುದೇ?
ಹೊಸ ವರುಷದಲ್ಲಿ
ಹೊಸದಾಗಿ ನಾವೆಲ್ಲರೂ
ಮತ್ತೆ ಮನುಷ್ಯರಾಗಬಹುದೇ ???
..
ನಾಗರತ್ನ ಎಂ ಜಿ
ಸದಾಶಯದ ಕವಿತೆ.
Very nice!!!
ಚೆನ್ನಾಗಿದೆ
ತುಂಬಾ ಚೆನ್ನಾಗಿದೆ ನಾಗರತ್ನ
ತುಂಬ ಚೆನ್ನಾಗಿದೆ