ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲವರ ಲೇಖನಿಯಿಂದ

ದೇವರಮನಿ ಅವರ ಗಜಲ್ ಗಳಲ್ಲಿ ಹೃದಯಯಾನ..

ಗಜಲ್ ಪ್ರೀತಿಸುವ ಹೃದಯಗಳಿಗೆ ಮಲ್ಲಿಯ ದಿಲ್ ಸೆ ಆದಾಬ್ ಅರ್ಜ್ ಹೈ.. ‘ಗಜಲ್’ ಎನ್ನುವ ರಸಗಟ್ಟಿ ಸಹೃದಯಿಯ ಭಾವಾಂತರಗದಲ್ಲಿ ಹರಿಯುತ್ತಿರಲು ಹೃದಯದಲ್ಲೊಂದು ಅಪರಿಮಿತ ಕಂಪನ ಉಂಟಾಗುತ್ತದೆ. ಪ್ರತಿವಾರ ಒಬ್ಬೊಬ್ಬ ಸುಖನವರ್ ಕುರಿತು ಬರೆಯುತ್ತ ಗಜಲ್ ಕಾರವಾನ್ ನಲ್ಲಿ ಅಲೆದಾಡುತ್ತಿರುವೆ. ಆ ಕಾರವಾನ್ ನಲ್ಲಿ ಆಕರ್ಷಿಸಿದ ಗುಲ್ಶನ್ ನೊಂದಿಗೆ ನಿಮ್ಮ ಮುಂದೆ ಬರುತಿದ್ದೇನೆ, ನೀವು ನಿರೀಕ್ಷಿಸುತ್ತಿರುವ ಗಜಲ್ ಬೆಳದಿಂಗಳೊಂದಿಗೆ…

ದೂರು ಯಾವುದೇ ನದಿಯ ಹರಿವಿನ ಬಗ್ಗೆ ಇಲ್ಲ

ಸಂಬಂಧವು ನನ್ನದು ಬಾಯಾರಿಕೆ ನೀರಿನ ಬಗ್ಗೆ ಇಲ್ಲ”

ಶಹರಯಾರ್

         ಪ್ರಾನ್ಸ್ ನ ಬಹುಮುಖ ಬರಹಗಾರರಾದ ವೋಲ್ಟೇರ್ ರವರ “To hold a pen is to be at war” ಎಂಬ ಮಾತು ಬರಹದ ತೀವ್ರತೆಯನ್ನು ಸಾರುತ್ತದೆ. ನಿಜವಾಗಿಯೂ ಪೆನ್ನು ಹಿಡಿಯುವುದೆಂದರೆ ಯುದ್ಧದಲ್ಲಿ ತೊಡಗಿದಂತೆಯೆ ಸರಿ. ಇದು ಸಾಧ್ಯವಾಗಬೇಕಾದರೆ ಮೊದಲು ಪ್ರತಿ ಬರಹಗಾರರಿಗೆ ತಮ್ಮ ಬರಹದ ಮೇಲೆ ವಿಶ್ವಾಸ, ನಂಬಿಕೆ ಇರಬೇಕು. ಜೊತೆಯಲ್ಲಿ ತಮ್ಮ ಅನುಭವದಲ್ಲಿಯೂ ಖಚಿತತೆ ಇರಬೇಕು. ಇಲ್ಲಿ ಪೆನ್ ಎಂಬುದು ಕೇವಲ ಬರಹವನ್ನು ಪ್ರತಿನಿಧಿಸದೆ ಬರಹಗಾರರ ವ್ಯಕ್ತಿತ್ವವನ್ನೂ ಸುತ್ತುವರಿದಿರುತ್ತದೆ. ತಮ್ಮ ನಾಲಿಗೆಯಿಂದ ಮೋಸ ಮಾಡುವ ಸುಳ್ಳುಗಾರರು ತಮ್ಮ ಲೇಖನಿಯಿಂದ ಅದೇ ರೀತಿ ಮಾಡಲೂ ಹಿಂಜರಿಯಲಾರರು! ಅಂತೆಯೇ ಪುಸ್ತಕಗಳಲ್ಲಿ ಬರೆಯಲಾಗಿದೆ ಎಂಬ ಕಾರಣಕ್ಕಾಗಿ ಅದನ್ನು ಪುರಾವೆ ಎಂದು ಪರಿಗಣಿಸಲಾಗದು. ಈ ನೆಲೆಯಲ್ಲಿ ಬರಹ ಕೇವಲ ಸಮಕಾಲೀನತೆಗೆ ಸ್ಪಂದಿಸಿದರಷ್ಟೆ ಸಾಲದು, ಅದು ನಾಳೆಯ ಕನಸುಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡು ಅದನ್ನು ಓದುವ ಓದುಗರಿಗೆ ರವಾನಿಸಬೇಕು. ಈ ದಿಸೆಯಲ್ಲಿ ಗಮನಿಸಿದಾಗ ಭವಿಷ್ಯದ ಕನಸುಗಾರಿಕೆಯನ್ನು ಹೊಂದಿರದ ಬರಹಕ್ಕೆ ಸಾರ್ವಕಾಲಿಕ ಮಹತ್ವ ದೊರೆಯಲಾರದು. ಬರಹವೆಂದರೆ ಕೇವಲ ಮರ ಸುತ್ತುವ ಯುಗಳ ಗೀತೆಯಲ್ಲ, ಕಲ್ಪನೆಯ ಅಪ್ಪುಗೆಯೂ ಅಲ್ಲ, ರಾಗ-ದ್ವೇಷಗಳನ್ನು ಉಣಬಡಿಸುವ ರಸೋಯಿ ಘರ್ ಅಲ್ಲ; ವರದಿ ಬಿತ್ತರಿಸುವ ಪತ್ರಿಕೆಯಂತೂ ಅಲ್ಲವೇ ಅಲ್ಲ. ಬರಹಗಾರನ ಜೀವನಪ್ರೀತಿ, ದರ್ಶನ, ಕಾಳಜಿ, ದೂರದೃಷ್ಟಿ, ಕನಸು ಮತ್ತು ಉದ್ದೇಶದಿಂದ ಬರಹಕ್ಕೆ ಯೂನಿವರ್ಸಲ್ ಸ್ಥಾನ, ವಿಶ್ವಾತ್ಮಕತೆಯನ್ನು ಒದಗಿಸುತ್ತದೆ. ಈ ಮಾತು ಸಂಸಾರದ ಎಲ್ಲ ಸಾಹಿತ್ಯ ಪ್ರಕಾರಗಳಿಗೂ ಅನ್ವಯಿಸುತ್ತದೆ. ಇದರಿಂದ ಗಜಲ್ ಲೋಕವೂ ಹೊರತಾಗಿಲ್ಲ. ಇಂದು ಕನ್ನಡ ಸಾರಸ್ವತ ಲೋಕದಲ್ಲಿ ಗಜಲ್ ಝಂಝಂ ತುಂಬಾ ವಿಶಿಷ್ಟವಾಗಿ ಕಂಗೊಳಿಸುತಿದ್ದಾಳೆ. ಈ ಝಂಝಂ ನ ಹರಹುವಿನಲ್ಲಿ ಗಜಲ್ ಗೋ ಉಮರ್ ದೇವರಮನಿ ಕೂಡ ಒಬ್ಬರು. 

     ೧೯೮೪ ರ ಜುಲೈ ೩೧ ರಂದು ಜನಿಸಿರುವ ಶ್ರೀ ಉಮರ್ ದೇವರಮನಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನವರು. ಇತಿಹಾಸದಲ್ಲಿ ಎಂ.ಎ ಪದವೀಧರರಾದ ಇವರು ಮಾನ್ವಿಯ ಕಲ್ಮಠ ವಿದ್ಯಾಸಂಸ್ಥೆಯಲ್ಲಿ ಆಂಗ್ಲ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ತಮ್ಮ ವಿದ್ಯಾರ್ಥಿ ಜೀವನದ ದೆಸೆಯಿಂದಲೆ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಹೊಂದಿದ್ದು, ಕಾವ್ಯ, ಲೇಖನ, ಗಜಲ್ ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತಿದ್ದಾರೆ. ಹೊಸ ತಲೆಮಾರಿನ ಗಜಲ್ ಕಾರರ ಪೈಕಿ ವಿಭಿನ್ನವಾಗಿ ನಿಲ್ಲುವ ದೇವರಮನಿಯವರು ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯದಿಂದ ‘ರಾಗವಿಲ್ಲದಿದ್ದರೂ ಸರಿ’ ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಸದಾ ಅಧ್ಯಯನ, ಅಧ್ಯಾಪನದ ಜೊತೆಗೆ ಸಾಹಿತ್ಯದ ರಸಧಾರೆಯಲ್ಲೂ ಸಕ್ರಿಯರಾಗಿರುವ ಶ್ರೀಯುತರ ಹಲವಾರು ಕಾವ್ಯ, ಗಜಲ್, ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ತಾಲ್ಲೂಕು, ಜಿಲ್ಲಾ ಮಟ್ಟದ ಅನೇಕ ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯಿಕ ಪ್ರೀತಿಯನ್ನು ಸಾರಿದ್ದಾರೆ. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ದಸಾಪ ರಾಜ್ಯ ಘಟಕ, ಗದಗ ‘ಬೆಳ್ಳಿ ಸಂಭ್ರಮ ಗಜಲ್ ಕಾವ್ಯ ಪ್ರಶಸ್ತಿ’ ಪ್ರಮುಖವಾಗಿದೆ. 

       ಕೋಪವು ಸಿಡಿಯುವ ಜ್ವಾಲೆಯಾದರೆ, ಮೃದುತ್ವವು ಸೌಮ್ಯವಾದ ಮಳೆಯಾಗಿದೆ. ಈ ಮೃದುತ್ವವು ಮನಸುಗಳಲ್ಲಿ ಶಾಂತಿಯ ಬೀಜವನ್ನು ಬಿತ್ತುತ್ತದೆ. ಸೌಮ್ಯತೆಯು ಪ್ರೀತಿಯ ತಂಬೆಲರಿನಿಂದ ಕೂಡಿದೆ. ಈ ದಿಸೆಯಲ್ಲಿ “ಸೌಮ್ಯಕ್ಕಿಂತ ಬಲವಾದದ್ದು ಜಗತ್ತಿನಲ್ಲಿ ಯಾವುದೂ ಇಲ್ಲ” ಎನ್ನುತ್ತಾರೆ ಚೀನಾದ ಬರಹಗಾರ ಹಾನ್ ಸುಯಿನ್. ಇಂಥಹ ಸೌಮ್ಯತೆ, ಮೃದುತ್ವವನ್ನು ಮೈಗೂಡಿಸಿಕೊಂಡಿರುವ ಗಜಲ್ ಸಾಹಿತ್ಯ ಪ್ರಕಾರವು ಹೃದಯವಂತಿಕೆಯ ದ್ಯೋತಕವಾಗಿ ಇಡೀ ಮನುಕುಲವನ್ನೆ ಆವರಿಸಿದೆ. ಅಂತೆಯೇ ಗಜಲ್ ಅನ್ನು ಕೋಮಲತೆಯ ಪ್ರತಿಬಿಂಬ ಹೆಣ್ಣಿಗೆ ಹೋಲಿಸಲಾಗಿದೆ. ಈ ಕೋಮಲತೆಯ ಜೊತೆಗೆ ಸೌಂದರ್ಯವೂ ಬೆರೆತಾಗ ಗಜಲ್ ಮುಕಮ್ಮಲ್ ಆಗುತ್ತದೆ. ಈ ದಿಸೆಯಲ್ಲಿ ಪ್ರೇಮದ ತುಡಿತ, ವಿರಹದ ಉರಿ, ಪ್ರಣಯದ ಮೆರಗು, ಆರ್ದ್ರತೆ, ವಿಷಾದ, ಭಾವತೀವ್ರತೆ, ಸಾಮಾಜಿಕ ಕಳಕಳಿ, ಧಾರ್ಮಿಕ ಎಡಬಿಡಂಗಿತನ, ರಾಜಕೀಯ ವ್ಯವಸ್ಥೆಯ ಅಧಃಪತನ, ಸಮಕಾಲೀನ ಸಂದರ್ಭದಲ್ಲಿ ಕಾಡುತ್ತಿರುವ ವಿವಿಧ ವಿಷಯಗಳು, ದುಗುಡಗೊಂಡ ಮನಸ್ಸಿನ ಉದ್ವೇಗವನ್ನು ಶಮನಗೊಳಿಸುವ ಆಪ್ತತೆ…. ಮುಂತಾದ ವಿಚಾರಧಾರೆಯನ್ನು ಶಾಯರ್ ಉಮರ್ ದೇವರಮನಿ ಅವರ ಗಜಲ್ ಗಳಲ್ಲಿ ಗಮನಿಸಬಹುದು.

       ಮೂಲಭೂತವಾಗಿ ‘ಮನಸು’ ಎನ್ನುವುದು ಬೆಣ್ಣೆಗಿಂತಲೂ ಮೃದು. ಆದರೆ ಜಾಗತೀಕರಣದ ಜಾಲದಲ್ಲಿ, ಭೋಗ ಸಂಸ್ಕೃತಿಯ ಒಡಲಲ್ಲಿ ಮನಸ್ಸುಗಳು ಕಲ್ಲಿನ ರೂಪ ಪಡೆಯುತ್ತಿವೆ, ನಾಜೂಕು ಕನ್ನಡಿಯಾಗುತ್ತಿವೆ. ಒಡೆದ ಕನ್ನಡಿಗಳಲ್ಲಿ ಮನುಷ್ಯನ ಮುಖ ವಿಕಾರವಾಗಿ ಕಾಣುತ್ತಿರುವುದನ್ನು ಸುಖನವರ್ ದೇವರಮನಿ ಅವರು ತಮ್ಮ ಈ ಷೇರ್ ನಲ್ಲಿ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ವ್ಯಕ್ತಿಯ ಮನಸ್ಸಿನ ದುಗುಡ, ದುಮ್ಮಾನಗಳನ್ನು ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. 

ಪೂರ್ಣ ಮುಖವನ್ನೊಮ್ಮೆ ನೋಡಬೇಕು ಒಡೆದ ಕನ್ನಡಿ ಚೂರುಗಳ ಸಂಗ್ರಹಿಸಬೇಕು

ಜೋಡಿಸುವ ಕಾಯಕೆ ಯಾರನ್ನು ಕರೆಯುವುದು ನಾನು ಯಾರಿಗೂ ಭಾರವಾಗದಿರಲಿ

      ಈ ದುನಿಯಾದಲ್ಲಿ ಎಲ್ಲರೂ ಬಯಸುವ, ಬಯಸುತ್ತಿರುವ ಅಮೃತವೆಂದರೆ ಪ್ರೀತಿಯ ಸಿಂಚನ. ಪ್ರೀತಿಗಾಗಿ ಹೃದಯ ಸದಾ ಕನವರಿಸುತ್ತಲೆ ಇರುತ್ತದೆ. ಹಾಗಂತ ಪ್ರೀತಿ ಎಲ್ಲರಿಗೂ ಕೈಗೆಟುಕುವುದಿಲ್ಲ. ಆದರೆ ಪ್ರೀತಿಯ ಆಲಿಂಗನ ಮಾತ್ರ ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ದಸ್ತಕ್ ಬಡಿಯುತ್ತಿರುತ್ತದೆ. ಇಂಥಹ ಪ್ರೀತಿಯಲ್ಲಿ ವಿರಹದೆ ಪಾರುಪತ್ಯ. ವಿರಹದ ಹೊರತಾಗಿ ಪ್ರೀತಿಯನ್ನು ಊಹಿಸಲೂ ಸಾಧ್ಯವಿಲ್ಲ. ಈ ದಿಸೆಯಲ್ಲಿ ಗಜಲ್ ಗೋ ಉಮರ್ ದೇವರಮನಿ ಅವರ ಈ ಷೇರ್ ಸಾರ್ವಕಾಲಿಕ ಸತ್ಯವಾಗಿದೆ.

ಎಲ್ಲರೂ ತಲೆದೂಗುತಿದ್ದಾರೆ ವಿರಹಗೀತೆ ಕೇಳಿ

ನೋವುಂಡ ಗಾಯ ಪ್ರೀತಿಯನು ಬೇಡುತಿದೆ”

ಪ್ರೇಮಿಗಳಿಗೆ ಸಂಗೀತ ಯಾವಾಗಲೂ ಮುದ ನೀಡುವ ಔಷಧಿ. ಯುಗಳಗೀತೆಗಿಂತಲೂ ಮನಸು ಪದೇ ಪದೇ ವಿರಹದ ಬೇಗೆಯಲ್ಲೆ ಬೇಯುತ್ತ ಪ್ರೀತಿಗಾಗಿ ಹಂಬಲಿಸುತ್ತಿರುತ್ತದೆ ಎಂಬುದು ಈ ಷೇರ್ ಪ್ರಚುರಪಡಿಸುತ್ತದೆ. ನೋವೆ ಸಾಹಿತ್ಯದ ಹೃದಯದ ಬಡಿತ ಎಂಬಂತೆ ಕಂಬನಿಯ ಹನಿಗಳೆ ಸಹೃದಯ ಓದುಗರ ಮನವನ್ನು ಕಾಡುತ್ತವೆ.

     ಗಜಲ್ ಎನ್ನುವ ಹಾಡುಗಬ್ಬ ಇಂದು ಐಚ್ಛಿಕ ರೂಪವನ್ನು ಪಡೆದುಕೊಂಡು ಸಹೃದಯಿಗಳ ಹೃದಯವನ್ನು ಸೆಳೆಯುತ್ತ ಮುಂದೆ ಸಾಗುತ್ತಿದೆ. ಆದರೆ ಈ ಓಲಾಟದ ಭರದಲ್ಲಿ ಪದಪುಂಜಗಳು ಕಠಿಣವಾಗದಿರಲಿ, ರೂಡ್ ಆಗದಿರಲಿ; ಮನವನ್ನು ಬೇಧಿಸುವ ಈಟಿಯಾಗದಿರಲಿ. ಈ ದಿಸೆಯಲ್ಲಿ ಎಲ್ಲ ಗಜಲ್ ಕಾರರು ಇಸಂ, ಹಿಡನ್ ಅಜೆಂಡಾಗಳನ್ನು ಬದಿಗೊತ್ತಿ ಜೊತೆ ಜೊತೆಗೆ ಹೆಜ್ಜೆ ಹಾಕಬೇಕಿದೆ. ಗಜಲ್ ಗೋ ಉಮರ್ ದೇವರಮನಿ ಅವರಿಂದ ಗಜಲ್ ಲೋಕ ಮತ್ತಷ್ಟು, ಮೊಗೆದಷ್ಟೂ ಶ್ರೀಮಂತವಾಗಲಿ ಎಂದು ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ.

ಸಮಾಧಿಯಲ್ಲಿ ಶಾಂತಯುತವಾಗಿ ಮಲಗಿದ್ದೆ ಪ್ರಳಯದ ಭಯವಿಲ್ಲದೆ

ಓ ದೈವಾಂಶವೆ ನಿಮ್ಮ ಅಸಮಾಧಾನದಿಂದ ನಾವು ದೂರವಿರುತ್ತೇವೆ”

ಭಾರತೇಂದು ಹರಿಶ್ಚಂದ್ರ 

ಮನುಷ್ಯನ ಮನಸು ತಳಮಳಗಳ ಗೋದಾಮು. ಶಾಂತಿ, ನೆಮ್ಮದಿ ನಮ್ಮನ್ನು ಆವರಿಸಬೇಕಾದರೆ ಗಜಲ್ ನ ಪಾತ್ರ ಅನನ್ಯ. ಇಂಥಹ ಗಜಲ್ ನಾಕದಲ್ಲಿ ವಿಹರಿಸುತ್ತಿರಬೇಕಾದರೆ ಹಲವು ಬಾರಿ ಸಮಯವನ್ನೂ ಶಪಿಸಿದ್ದೇನೆ. ಆದರೂ ಸಮಯದ ಮುಂದೆ ಮಂಡಿಯೂರಲೆ ಬೇಕಲ್ಲವೇ.. ಅನಿವಾರ್ಯವಾಗಿ ಇಂದು ನನಗೆ ಇಲ್ಲಿಂದ ನಿರ್ಗಮಿಸಲೆಬೇಕಿದೆ, ಮತ್ತೆ ಮುಂದಿನ ಗುರುವಾರ‌ ತಮ್ಮ ಮುಂದೆ ಹಾಜರಾಗುವೆ..ಹೋಗಿ ಬರುವೆ, ಅಲ್ವಿದಾ….

ರತ್ನರಾಯಮಲ್ಲ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

One thought on “

Leave a Reply

Back To Top