ನಯನ. ಜಿ. ಎಸ್ ಕಾಫಿಯಾನ ಗಜಲ್

ಕಾವ್ಯ ಸಂಗಾತಿ

ನಯನ. ಜಿ. ಎಸ್ ಕಾಫಿಯಾನ ಗಜಲ್

ಹೃದಯ ಗೊಣಗಿದರೂ ಆಸೆ ತಣಿಯುತ್ತಿಲ್ಲ
ಇರವು ಇಂಗಿದರೂ ಹುಡುಕಾಟ ನಿಲ್ಲುತ್ತಿಲ್ಲ

ಸ್ವಪ್ನ ಲಹರಿಯಲಿ ವಿಹರಿಸಬೇಕಿದೆ ಮತ್ಮತ್ತೆ
ದಫನ್ ಆದ ಆಕಾಂಕ್ಷೆಗಳ ಬಣ್ಣ ಮಾಸುತ್ತಿಲ್ಲ

ಪಿಸುಮಾತೇ ಹಿತವಾಗಿದೆ ಹೃನ್ಮನವ ಸೇರಲು
ರಿಂಗಣದ ರೋದನ ಆಕ್ರಮಣವ ನಿಲ್ಲಿಸುತ್ತಿಲ್ಲ

ಬಾಳ್ವೆಯ ಮತದಲಿ ಸಾಗಿಬಿಡಬೇಕು ನಿಲ್ಲದೇ
ಮೆಚ್ಚಿದ ನುಚ್ಚಿಗೆ ವಿದಾಯಗೀತೆ ಹೇಳಲಾಗುತ್ತಿಲ್ಲ

ನಿರ್ಲಿಪ್ತ ನಯನಗಳಿಗೆ ನವ್ಯತೆಯ ಕಾಣುವಾಸೆ
ಭಾವ ವಲ್ಲರಿಗೆ ಸಹಜತೆಯಲಿ ಹಬ್ಬಲಾಗುತ್ತಿಲ್ಲ


Leave a Reply

Back To Top