ಕಾವ್ಯ ಸಂಗಾತಿ
ಮೊಳಕೆ
ಡಾ. ನಿರ್ಮಲ ಬಟ್ಟಲ
ನೆಂದ ಕಾಳನೆಲ್ಲ ರಾತ್ರಿ
ಮರೆಯದೆ
ಅರಿವೆಯ ಗಂಟಲಿ ಕಟ್ಟಿ
ಪಾತ್ರೆಯಲಿ ಮುಚ್ಚಿಟ್ಟರೆ
ಬೆಳಿಗ್ಗೆ ಮೊಳಕೆಯೊಡೆಯಬಹುದೆಂಬ
ಬರವಸೆ
ಬೆಳಗಿನ ಉಪಹಾರ
ಉಸುಳಿ,ಸಾಂಬರ, ಸಲಾಡ್
ತಟ್ಟೆಗೆ ಅಲಂಕಾರ
ಪೌಷ್ಟಿಕ ಆಹಾರ
ಮೊಳಕೆಗೊಂದು
ಮುಕ್ತಿ….!!
ಭೂಮ್ಯಾಕಾಶದ ಮೇಲೆ
ಅಘಾದ ನಂಬಿಕೆಯಿಟ್ಟು
ಮಣ್ಣಿನೆದೆಗೆ
ಧಾನ್ಯವವನೆಟ್ಟು
ವಾಯುವರುಣ
ನೇಸರ,ಊರದೇವಿಗೆ
ಹರಕೆಯ ಕಟ್ಟಿ
ಕಾಯುವವನ ಭರವಸೆಗೆ
ಭೂಮಿ ಎದೆಯಮೊಳಕೆಗೆ
ಕಾಳಿಗೊಂದು ತೆನೆ
ಜೀವಕುಲಕೆ ದಾಸೋಹ
ಹಲವು ಬಗೆಯ ಮುಕ್ತಿ….!!
ನನ್ನ ಕನಸಿನ ಕಾಳಿಗೂ
ಮೊಳಕೆಯೊಡೆವ ತವಕ
ತಟ್ಟೆಯಿಂದ ಜಾರಿ
ಭೂಮಿಯೆದೆಯ ಸೇರಿ
ಚಿಗುರಿ ಚಿಮ್ಮ ಬೇಕಿದೆ
ಒಲವ ಹೂಬಳ್ಳಿ
ಮೊಳಕೆಗೆ
ಮುಕ್ತಿಯು ಬಯಕೆ ….!!
ಅಘಾದ ಅನ್ನಬೇಡಿ ಅಗಾಧ ಎನ್ನಿ ,ಚೆನ್ನಾಗಿರುತ್ತೆ.
ಭರವಸೆಯ ಕವನ ಸೊಗಸಾಗಿದೆ