ಕಾವ್ಯ ಸಂಗಾತಿ
ನಮ್ಮ ಸಂವಿಧಾನ
ಸುರೇಶ ತಂಗೋಡ
ಭವ್ಯ ಭಾರತದ ಭವಿಷ್ಯತ್ತಿಗೆ
ಅಡಿಪಾಯವಾಗಿರುವ
ಸ್ವಾಸ್ಥ್ಯ,ಸಾಮರಸ್ಯದ ಬದುಕಿಗೆ
ಬೆಳಕಾಗಿರುವ
ನಮ್ಮ ಸಂವಿಧಾನ ಇದು ಭಾರತ ಸಂವಿಧಾನ.
ಜನರಿಂದ ಜನರಿಗಾಗಿ
ಜನರಿಗೋಸ್ಕರ ಇರುವುದು
ಸರ್ವರೂ ಸಮಾನರೆಂದು
ಕಾಣುವ ತತ್ತವನ್ನು ಹೊಂದಿರುವುದು
ನಮ್ಮ ಸಂವಿಧಾನ ಇದು ಭಾರತ ಸಂವಿಧಾನ.
ಜಾತಿ-ಮತಗಳ ಬೇಧವಿಲ್ಲದೆ
ರೂಪಗೊಂಡಿಹುದು
ಭಾಷೆ-ಸಂಸ್ಕೃತಿಗಳ
ಮಹಾ ಸಂಗಮವಾಗಿಹುದು
ನಮ್ಮ ಸಂವಿಧಾನ ಇದು ಭಾರತ ಸಂವಿಧಾನ.
ಸರ್ವಕಾಲಕೂ ಸಲ್ಲುವ
ಹೊತ್ತಿಗೆ
ಜಗವೇ ಭಾಗಿದಿದರ
ಗತ್ತಿಗೆ
ನಮ್ಮ ಸಂವಿಧಾನ ಇದು ಭಾರತ ಸಂವಿಧಾನ.
ಅಂಬೇಡ್ಕರರ ಪರಿಶ್ರಮದ ಕೂಸು
ನಮ್ಮ ಸಂವಿಧಾನ
ರಚಿಸದಿದ್ದರೆ ನಡೆಸಬಹುದಿತ್ತೆ
ಈ ತರದ ಆಡಳಿತವನ್ನ
ನಮ್ಮ ಸಂವಿಧಾನ ಹೆಮ್ಮೆಯ ಸಂವಿಧಾನ.
ತುಂಬಾ ಚೆನ್ನಾಗಿದೆ ಧನ್ಯವಾದಗಳು