ಕಾವ್ಯ ಸಂಗಾತಿ
ಗಜಲ್
ಅಂಬಮ್ಮ ಪ್ರತಾಪ್ ಸಿಂಗ್
ಹೊಸ ಹಾದಿ ತೆರೆದಿದೆ ಒಲವ ಪಯಣಕೆ ಗೆಳತಿ
ಗತ ಕಹಿ ನೆನಪಿನ ಸುರುಳಿ ಮರೆಯೋಕೆ ಗೆಳತಿ
ನಾವು ಆಡಿದ ಪಿಸುಮಾತು ಗುಂಬಜ್ ತುಂಬಾ ಅನುರಣಿಸುತ್ತಿವೆ
ಪ್ರೀತಿಯ ತೇರನು ಎಳೆಯೋಣ ಚಂದ್ರನ ಅಂಗಳಕೆ ಗೆಳತಿ
ಅಳಿದುಳಿದ ಮಾತುಗಳನು ಹಾಗೆಯೇ ಉಳಿಸಿಕೊ ಸುಮ್ಮನೆ ಹೀಗೆ
ಕೈಹಿಡಿದು ಸುತ್ತಾಡಿ ಬರೋಣ ಒಮ್ಮೆ ಬ್ರಹ್ಮಾಂಡಕೆ ಗೆಳತಿ
ನಮ್ಮದೇ ಪ್ರೇಮ ಗೀತೆಯು ಕೇಳಿ ಬರುತ್ತಿದೆ ಹಂಪೆಯಲಿ
ಹೋಗೋಣ ಜೊತೆಯಾಗಿ ಪ್ರೀತಿಯ ಶಾಸನ ಕೆತ್ತೋಕೆ ಗೆಳತಿ
ಷಹಜಹಾನ್ ನಂತೆ ತಾಜ್ಮಹಲ್ ಕಟ್ಟಿಸುವುದಿಲ್ಲ ವನಿತಾ ನಿನಗಾಗಿ
ಇಬ್ಬರೂ ಒಂದಾಗಿ ತೆರಳೋಣ ಪ್ರಣಯ ಸೌಧಕೆ ಗೆಳತಿ