ಪ್ರೊ ರಾಜನಂದಾ ಘಾರ್ಗಿ-ಮೂರು ಪದಗಳ ಉಕ್ತಿ

ಕಾವ್ಯ ಸಂಗಾತಿ

ಮೂರು ಪದಗಳ ಉಕ್ತಿ

ಪ್ರೊ ರಾಜನಂದಾ ಘಾರ್ಗಿ

ನಸುಕಿನ ಜಾವ
ಸನ್ಮೋಹಕ ಭಾವ
ಕನಸಿನ ಮಂಪರ
ಹಕ್ಕಿಗಳ ಇಂಚರ
ಬಾನಿನಲ್ಲಿ ಕೇಸರ
ಕಾಯುತಿದೆ ಚರಾಚರ
ನೇಸರನ ಉದಯ
ನೆನೆದಿದೆ ಹೃದಯ
ಶುಭೋದಯ ಶೃತಿ
ಮಿಡಿದಿದೆ ಮತಿ
ಭಾವಗಳ ಮಿಡಿತ
ಕಿವಿಗಳಲಿ ಸೆಳೆತ
ನುಡಿದ ಮಾಂತ್ರಿಕ ಶಕ್ತಿ
ಮೂರು ಪದಗಳ ಉಕ್ತಿ
ತುಂಬಿದೆ ನವಚೇತನ
ತನು ಮನಗಳ ಸಿಂಚನ


Leave a Reply

Back To Top