ಡಾ.ಮಮತ (ಕಾವ್ಯಬುದ್ಧ)-ಗಜಲ್

ಕಾವ್ಯಸಂಗಾತಿ

ಗಜಲ್

ಡಾ.ಮಮತ (ಕಾವ್ಯಬುದ್ಧ)

ಸೂರ್ಯನ ರಶ್ಮಿಯು ಹಣೆಯ ಮೇಲೆ ಬೀಳುವಂತಿದೆ ನಿನ್ನ ಮೊಗದ ಮಾಂತ್ರಿಕ ನಗು
ನನ್ನ ಹೃದಯದ ಗೂಡಿನಲ್ಲಿ ಅಚ್ಚಳಿದಿದೆ ನಿನ್ನಯ ಮೊಗದ ಮಾಂತ್ರಿಕ ನಗು..

ಸುಂದರ ಹೂತೋಟದಲ್ಲಿ ಅರಳುವ ಹೂಗಳಂತೆ
ಜೀವನದ ಹೊಸ ಹುರುಪು ಹೊತ್ತು ತಂದಂತಿದೆ ನಿನ್ನಯ ಮೊಗದ ಮಾಂತ್ರಿಕ ನಗು..

ಮರುಭೂಮಿಯಲ್ಲಿನ ಓಯಸಿಸ್ ನಂತಹ ನಿನ್ನ ನಗೆಗೆ ನಾ ಬಂಧಿಯಾಗಿ ,
ಚಿಲುಮೆಯಂತೆ ಚೈತನ್ಯ ಮೂಡಿಸಿದಂತಿದೆ ನಿನ್ನಯ ಮೊಗದ ಮಾಂತ್ರಿಕ ನಗು..

ಸಾಗರದಿ ಉದ್ಭವಿಸಿದ ಸಾಗರ ಕನ್ಯೆಯಂತೆ
ನೋವು ಸರಿಸುವಂತಿದೆ ನಿನ್ನಯ ಮೊಗದ ಮಾಂತ್ರಿಕ ನಗು.

ತಾರೆಗಳಿಗೂ ಮಮತೆಯ ಹೊಳಪು ನೀಡಿ ಹುಣ್ಣಿಮೆಯ ಚಂದ್ರನು ನಾಚುವಂತೆ
ನನ್ನ ಕೀರ್ತಿ ಉತ್ತುಂಗಕ್ಕೆರುವಂತಿದೆ ನಿನ್ನಯ ಮೊಗದ ಮಾಂತ್ರಿಕ ನಗು


One thought on “ಡಾ.ಮಮತ (ಕಾವ್ಯಬುದ್ಧ)-ಗಜಲ್

Leave a Reply

Back To Top