ಅನಸೂಯ ಜಹಗೀರದಾರ-ಗಜಲ್

ಕಾವ್ಯ ಸಂಗಾತಿ

ಗಜಲ್

ಅನಸೂಯ ಜಹಗೀರದಾರ

ಅದೇಕೋ ನಿನ್ನ ತೊರೆಯಲು ಆಗುತ್ತಿಲ್ಲ
ಗೊತ್ತಿದೆ ನನಗೆ ನಿನ್ನ ತಲುಪಲು ಆಗುತ್ತಿಲ್ಲ

ಅದೇನು ಸೆಳೆತ ವರ್ತುಳದ ಈ ಬುವಿಗೆ
ನಿನ್ನ ತಾರತಮ್ಯವ ಮನ್ನಿಸಲು ಆಗುತ್ತಿಲ್ಲ

ಶತೃವನ್ನು ಪ್ರೀತಿಸಿದ್ದೂ ಇದೆ ಈ ನೆಲದಲಿ
ಒಡಲ ಬೆಂಕಿಯನು ನಂದಿಸಲು ಆಗುತ್ತಿಲ್ಲ

ಸಾವಿರ ಬಾರಿ ಹೇಳಿಕೊಳ್ಳುವೆ ಬಿಡಲು ನನಗೆ ನಾ
ಈ ಮಾಯೆಯಿಂದ ಹೊರಬರಲು ಆಗುತ್ತಿಲ್ಲ

ಒಮ್ಮೆಯೂ ತಿರುಗಿ ನೋಡದೆ ಇರಬೇಕೆನ್ನುವೆ
ಬೆಂಬತ್ತಿದ ಆ ಚಹರೆ ಅಲಕ್ಷಿಸಲು ಆಗುತ್ತಿಲ್ಲ

ಅಷ್ಟೊಂದು ಪ್ರೀತಿಯಿದೆಯೆ ನಿನ್ನ ದ್ವೇಷದಲಿ
ಧರಿಸಿದ ವೇಷ ತಿಳಿದಿದ ಒಪ್ಪಲು ಆಗುತ್ತಿಲ್ಲ

ನಿನ್ನ ಸುಳ್ಳು ಮೊಗ್ಗಿನ ಹಾರ ಧರಿಸಿಹಳು ಅನು
ಕೆರೆಹಾರವೆಂದು ತಿಳಿದೂ ಕಿತ್ತೆಸೆಯಲು ಆಗುತ್ತಿಲ್ಲ


ಅನಸೂಯ ಜಹಗೀರದಾರ

4 thoughts on “ಅನಸೂಯ ಜಹಗೀರದಾರ-ಗಜಲ್

Leave a Reply

Back To Top