ಜಯಶ್ರೀ ಭ ಭಂಡಾರಿ–ಗಝಲ್.

ಕಾವ್ಯ ಸಂಗಾತಿ

ಗಜಲ್

ಜಯಶ್ರೀ ಭ ಭಂಡಾರಿ

ಬೀರುತ ಚೆಲುವ ಒಲವಲಿ ಸೆಳೆದುಬಿಡು ಸಖ.
ಕೋರುತ ಚಂದನದ ಪರಿಮಳದಿ ಎಳೆದುಬಿಡು ಸಖ

ಕಾಡುತ ಬಂಗಾರಿಯ ಕಷ್ಟ ಮರೆತರೆ ಹೇಗೆ ಹೇಳು
ಬೇಡುತ ಸಿಂಗಾರಿಯ ಮಾಟದ ದೃಷ್ಟಿ ಕಳೆದುಬಿಡು ಸಖ

ಹಾರುತ ಹಕ್ಕಿಯಾಗಿ ಹಗೆ ಮರೆತು ಬಿಟ್ಟೆಯಲ್ಲ ದೊರೆ.
ಜಾರುತ ಹನಿಗಳ ಧಗೆ ಕಪೋಲದಿ ತೊಳೆದುಬಿಡು ಸಖ 

ಮೀರುತ ಹಳೆಯ ನೆನಪುಗಳ ಹೊಸದು ಮಾಸದಿರಲಿ.
ಏರುತ ಕಳೆಯ ಒನಪಿನಲಿ ಬೆಸೆದು ಬೆಳೆದುಬಿಡು ಸಖ

ಸಾರುತ ಎದೆಯ ಭಾವದರಸಿ ಜಯಳೆಂದು ಮಿಡಿಯುತಿರು
ಬೀರುತ ಸುಧೆಯ ‌‌‌‌‌‌‌‌‌‌‌‌‌ಸೋಭನದ ವಿಜಯದಿ ಹೊಳೆದುಬಿಡು ಸಖ


Leave a Reply

Back To Top