ಪಾ.ಶ್ರೀ. ನಾಯ್ಡು.ಕವಿತೆ-ನಿಶೆಯ ಕವಿತೆ

ಕಾವ್ಯ ಸಂಗಾತಿ

ನಿಶೆಯ ಕವಿತೆ

ಪಾ.ಶ್ರೀ. ನಾಯ್ಡು

ಖಾಲಿ ಗಿಲಾಸಿನ
ಮುಂದೆ ನಿನ್ನದೇ
ಪ್ರತಿಬಿಂಬ
ಒಳಗಿಳಿದಿರುವುದು
ನಿನ್ನದೇ ಒಲವು

ಸುತ್ತ ತುಂಬಿರುವ
ಗೌಜು ಗದ್ದಲಗಳ
ನಡುವೆ
ಆವರಿಸಿರುವುದು
ನಿನ್ನದೇ ಪ್ರೇಮ

ಚಳಿಯ ನಡುವೆ
ಮೈ ಸವರುವ
ಥಂಡಿಯೊಳಗೆ
ತುಂಬಿರುವುದು
ನಿನ್ನದೇ ನೆನಪು

ಮನದ ಖಾಲಿ
ಹಾಳೆಗಳ
ತುಂಬೆಲ್ಲ
ಮೂಡಿರುವುದು
ನಿನ್ನದೇ ಚೆಲುವು

ರಾಶಿ ಬಿದ್ದಿರುವ
ಕೆಲಸಗಳ
ಅಡಿಯಲ್ಲಿ
ಬೆಳಕಾಗಿರುವುದು
ನಿನ್ನದೇ ಗೆಳೆತನ


3 thoughts on “ಪಾ.ಶ್ರೀ. ನಾಯ್ಡು.ಕವಿತೆ-ನಿಶೆಯ ಕವಿತೆ

Leave a Reply

Back To Top