ವಾಣಿ ಭಂಡಾರಿ -ಗಜ಼ಲ್

ಕಾವ್ಯಸಂಗಾತಿ

ಗಜಲ್

ವಾಣಿ ಭಂಡಾರಿ

ನಿನ್ನ ಮುನಿಸಲ್ಲೆ ನನ್ನ ಭಾವ ಕೊಲ್ಲುವುದಾದರೆ ಕೊಂದುಬಿಡು ತಡವೇಕೆ
ನಿನ್ನ ಮೌನದಲ್ಲೆ ನನ್ನ ಜೀವ ಇರಿಯುವುದಾದರೆ ಇರಿದುಬಿಡು ತಡವೇಕೆ.

ನಿನ್ನ ಪ್ರೀತಿ ಗಾಳಿಗೋಪುರ ಅಲ್ಲವೆಂಬ ನಂಬಿಕೆಗೆ ಸುಡುನೀರು ಚೆಲ್ಲಿದೆ
ನಿನ್ನ ಭಾವದಲ್ಲೆ ನನ್ನ‌ ಕನಸು ಹಿಚುಕುವುದಾದರೆ ಹಿಸುಕಿಬಿಡು ತಡವೇಕೆ.

ಮುಗಿಲಿನ ಕಣ್ಣೀರು ಕಂಬನಿಯನ್ನೆ ಹೊತ್ತು ಜಲಪಾತವಾಗಿದೆ
ನಿನ್ನ ಕೋಪದಲ್ಲೇ ನನ್ನ ಬಾಳು ಸುಡುವುದಾದರೆ ಸುಟ್ಟುಬಿಡು ತಡವೇಕೆ

ಸುಟ್ಟಮನ ಗಟ್ಟಿ ಆಗದೆ ತೇಲುತಿದೆ ಗಾಳಿಯಲಿ ನಿನ್ನ ಹೆಸರ ನೆನೆದು
ನಿನ್ನ ಬದುಕಿನಲ್ಲೆ ನನ್ನ ನೆನಪು ಅಳಿಸುವುದಾದರೆ ಅಳಿಸಿಬಿಡು ತಡವೇಕೆ.

ಮೊಹಬತ್ ನ ಮಹಲ್ ಕುಸಿದ ಭಯಕ್ಕೆ ಬೀದಿ ಬಣ್ಣ ಕಳೆದು ಮಲಗಿದೆ
ನಿನ್ನ ಆತ್ಮದಲ್ಲೆ ನನ್ನ ವಾಣಿಗೆ ಗೋರಿಕಟ್ಟುವುದಾದರೆ ಕಟ್ಟಿಬಿಡು ತಡವೇಕೆ


6 thoughts on “ವಾಣಿ ಭಂಡಾರಿ -ಗಜ಼ಲ್

  1. ಸುಂದರವಾದ ಗಜಲ್‌
    ಇನಿಯಳ ಪ್ರೀತಿಯ ನೊಂದ ನುಡಿಯಂತಿದೆ,ಒಲವಿನ ಬೇಡಿಕೆಯಿದೆ, ಪ್ರೀತಿಯ ತುಡಿತವಿದೆ ಓದುಗನ ಮನಸ್ಸನ್ನ ಹಿಡಿದಿಡುತ್ತೆ, ತುಂಬಾ ಉತ್ತಮವಾದ ಗಜಲ್‌.

Leave a Reply

Back To Top