ಮಲಯಾಳಂ ಕವಿತೆ-ಮನುಷ್ಯರ ಕಥೆ…! ರಫೀಕ್ ಬದರಿಯಾ.

ಅನುವಾದ ಸಂಗಾತಿ

ಮನುಷ್ಯರ ಕಥೆ

ಮಲಯಾಳಂ ಮೂಲ: ರಫೀಕ್ ಬದರಿಯಾ.


ಕನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ

ಕೆಲ ‘ಮನುಷ್ಯರು ‘
ಒಂದು ‘ಮಳೆ’ ಕಾಲದಲ್ಲಿ
ನಮ್ಮ ಬಳಿಗೆ
ಓಡಿ ಬರುತ್ತಾರೆ…!

ಕೆಲ ಮಂದಿ….
ಭೀಕರ ‘ಬಿರುಗಾಳಿ’
ಬೀಸುವ ಕಾಲದಲ್ಲಿ
ಗಟ್ಟಿಯಾಗಿ ಹಿಡಿದು ನಿಲ್ಲಲ್ಲು
ನಮ್ಮನ್ನು ಒರಗಿ ನಿಲ್ಲುತ್ತಾರೆ…!

ಕೆಲ ಮಂದಿ….
ರೋಧಿಸುವ ಹೃದಯವಾಗಿ
ನಮ್ಮ ಬಳಿಯೇ
ಕುಳಿತು ಬಿಡುತ್ತಾರೆ…!

ಮಳೆ ಕಡಿಮೆಯಾಗುತ್ತದೆ….!
ಬಿರುಗಾಳಿಯ ಶಕ್ತಿ ಕಳೆದುಕೊಳ್ಳುತ್ತದೆ…!
ಹೃದಯದ ನೋವು ಒಣಗುತ್ತದೆ…!

ನಮ್ಮ ಬಳಿಗೆ ಬಂದ
ಮಂದಿ ಎಲ್ಲಾ ಮರಳಿ
ಹೋಗುತ್ತಾರೆ….!!!

ಒರ್ವ ಮನುಷ್ಯನು
ಪೂಣ೯ವಾಗಿ ಯಾವ
ಮಂದಿಯ ಜೊತೆಯೂ
ಇರುವುದೇ ಇಲ್ಲ…!!!


ಮಲಯಾಳಂ ಮೂಲ: ರಫೀಕ್ ಬದರಿಯಾ.
ಕನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ

Leave a Reply

Back To Top