ಕಾವ್ಯ ಸಂಗಾತಿ
ಮಲ್ಲಿಗೆ
ದೀಪಿಕಾ ಚಾಟೆ
ತರುಲತೆಯೊಡನೆ
ಅರಳಿದೆ ಮಲ್ಲಿಗೆ
ಸುವಾಸನೆ ಪಸರಿಸುತ
ಹರಡಿದೆ ಮೆಲ್ಲಗೆ
ಶುಭ್ರಬಿಳಿಯಲಿ
ಕಂಪು ಎದೆಯಲಿ
ಸುಮೂಹರ್ತಕೆ
ಬೇಕು ಎಲ್ಲೆಡೆಯಲಿ
ಮೊಗ್ಗಿನಾ ತೆರದಲಿ
ಮನಸು ಮುದುಡಿದೆ
ಭಾವ ಹದುಳದಲಿ
ಮಲ್ಲಿಗೆಯಂತೆ ಅರಳಿದೆ
ಕವಿಕಾವ್ಯಕೆ ಕರ್ಷಣೆಯು
ಮೈಸೂರು ಮಲ್ಲಿಗೆ ಸೊಬಗು
ಅರಸಿ ಮುಗುದೆಯ ಕೇಶಕೆ
ಶೃಂಗಾರದಿ ಅಲಂಕಾರದ ಬೆಡಗು
ಸುಂದರ ಕವಿತೆ