ಡಾ ಡೋ ನಾ ವೆಂಕಟೇಶ-ಕನಸುಗಳು

ಕಾವ್ಯಸಂಗಾತಿ

ಕನಸುಗಳು

ಡಾ ಡೋ ನಾ ವೆಂಕಟೇಶ

ನೂರೆಂಟು ಕನಸುಗಳು
ಹೊಟ್ಟೆಗೆ ಹಿಟ್ಟಿಂದ
ಜುಟ್ಟಿಗೆ ಮಲ್ಲಿಗೆಯ ತನಕ

ಕನಸುಗಳ ಮತ್ತೆ ಮತ್ತೆ ಆವಕ
ಪುನರಾವರ್ತನ
ಹುಟ್ಟಿಂದ ಶುರುವಾದ
ವಾಕ್ಯ ಮುಗಿಯುವ ಮುನ್ನ
ನೂರೆಂಟು
ಕಾಮ ಸೆಮಿ ಕೋಲನ್
ಅಫಾಸ್ಟ್ರ್ರಸಿ ಗಳ ಮೇಳ!
ಆಶ್ಚರ್ಯ ಸೂಚಕದ ಮುಂದೆ
ಬರೆ ಪ್ರಶ್ನಾರ್ಥಕ ನೋಟ!!

ವಾಕ್ಯ ರಚನೆ ಮಾಡುವ ಮುನ್ನ
ಬೇರೆ ಬೇರೆ
ಸಂಯೋಜಕಗಳ ಕಾಟ
ಬರೆಯ ಹೊರಟ ಕಥೆ ಮುಗಿಯುವ ಮುನ್ನ
ಕಾಲು ಮಡಿಸುಕೊಳ್ಳವ ವ್ಯಥೆ.

ಮಡದಿ ಮಕ್ಕಳ
ಹಿತೈಷಿಗಳ ಹಿತ ಶತೃಗಳ
ಹಾಡು ಹಸೆ
ಪೂರ್ಣ ವಿರಾಮ ಹಾಕುವ
ಮುನ್ನ
ರಾಗ ತಾಳ ಹಿಮ್ಮೇಳ ಮುಮ್ಮೇಳಗಳ
ಸ್ವರಾಂಜಲಿ

ಈಗ ಹೇಳು
ಬದುಕಿದ್ದು ನಿಜವಾ
ಕನಸಿದ್ದು ನಿಜವಾ

ಭ್ರಮಿಸಿದ್ದ ಭುವಿಯಲ್ಲಿ
ಪೂರ್ಣ ಕುಂಭವೋ
ಪೂರ್ಣ ವಿರಾಮವೋ

ನಾನು ನಾನೋ ಅಥವಾ
ನೀನೇ ನಾನೋ !!!

ಕನಸುಗಳ ನನಸುಗಳು


14 thoughts on “ಡಾ ಡೋ ನಾ ವೆಂಕಟೇಶ-ಕನಸುಗಳು

  1. ಬರೆದ ಕಥೆ ಮುಗಿಸುವ ಮುನ್ನ ಇನ್ನೊಂದು ಕಥೆಯ ಜಾಡು ಹಿಡಿಯವ ವೆಂಕಣ್ಣ.. ನಿಮಗಿದೋ ನನ್ನ ಮನದಾಳದಿಂದ ವಂದನೆ.

  2. “ಕನಸುಗಳು” ಅತಿ ಸಂದರವಾದ ಕವಿತೆ ವೆಂಕಣ್ಣಾ.
    ಓಳ್ಳೆ ಕನಸುಗಳು ಬರುವುದು ದೇವರದಯೆಯಿಂದ.
    ನಿಮ್ಮ ಕನಸುಗಳು ನನಸಾಗಲೆಂದು ನಮ್ಮೇಲ್ಲರ ಇಚ್ಚೆ.

Leave a Reply

Back To Top