ಡಾ ದಾನಮ್ಮ ಝಳಕಿ-ಮುಸುಕು ಹರಿಯಲಿ

ಕಾವ್ಯ ಸಂಗಾತಿ

ಮುಸುಕು ಹರಿಯಲಿ

ಡಾ ದಾನಮ್ಮ ಝಳಕಿ

ಮುಸುಕು ಹರಿಯಲಿ
ಬಾಳು ಬೆಳಗಲಿ
ಸೋಲು ಗೆಲುವಿನ ಬಾಳಲಿ
ಕಷ್ಟ ಮೆಟ್ಟುತಾ ಮಟ್ಟ ಹಾಕುತಾ
ಬದುಕು ಚೈತನ್ಯದ ಸಿರಿಯಲಿ

ಮುಸುಕು ಹರಿಯಲಿ
ಪರದೆ ಸರಿಯಲಿ
ಮಾನವೀಯತೆ ಬೆಳಕಲಿ
ಜಾತಿಭೇಧವ ಅಳಿಸಿ ಹಾಕುತಾ
ವಿಶ್ವಪಥದಲಿ ನಡೆಯಲಿ

ಮುಸುಕು ಹರಿಯಲಿ
ಮನದ ಕಳೆ ಕೀಳಲಿ
ಅಂಧಕಾರವ ಕಳೆಯಲಿ
ಶರಣರಂತೆ ನಾವು ನಡೆಯುತಾ
ಬಾಳ ಹಸನವಾಗಲಿ

ಮುಸುಕು ಹರಿಯಲಿ
ಭಾವ ಮೂಡಲಿ
ಸ್ನೇಹ ಮಧುರ ನೆಲೆಯಲಿ
ಮೌಢ್ಯ ಕಳೆಯುತಾ
ಜಗದಿ ನಾವು ಬೆಳಗಲಿ


Leave a Reply

Back To Top