ಮಕ್ಕಳ ದಿನಾಚರಣೆ ವಿಶೇಷ-” ಸಹಕಾರ”

ವಿಶೇಷ

ಮಕ್ಕಳ ದಿನಾಚರಣೆ ವಿಶೇಷ

” ಸಹಕಾರ”

ಪುಷ್ಪ ಮುರಗೋಡ

ಪಕ್ಕದ ಮನೆಯ ಸರೋಜಕ್ಕ
ಇಕ್ಕಿದಳು ಹಕ್ಕಿಗೆ ಅಕ್ಕಿ,
ಹಾರಿ ಬಂದ ಹಕ್ಕಿ,
ಮುಕ್ಕುತಲಿತ್ತು ಅಕ್ಕಿ,
ಏನೋ ವಾಸನೆ ಎನುತ
ಹಾರಿತು ಹಕ್ಕಿ ಪಕ್ಕ ಬಿಚ್ಚಿ.

ಹಾರುತ ಬಂದವು ಗುಬ್ಬಚ್ಚಿ,
ಮುಕ್ಕುತಲಿದ್ದವು ಅಕ್ಕಿ,
ಪಕ್ಕದ ಮನೆಯ ಬೆಕ್ಕಣ್ಣ
ಹಿಡಿದೇ ಬಿಟ್ಟ ಗುಬ್ಬಚ್ಚಿ,
ಪಕ್ಕ ಬಿಚ್ಚಿ ಹಾರಿದ ಹಕ್ಕಿ
ಕುಕ್ಕಿತು ಬೆಕ್ಕಿಗೆ ಜೋರಾಗಿ,
ಹಾರಿತು ಗುಬ್ಬಚ್ಚಿಯ
ಜೊತೆಯಾಗಿ.

ನೋಡುತ್ತ ನಿಂತ ಸರೋಜಕ್ಕ
ನೋಡಿ ಕಮಲಕ್ಕ, ಹಕ್ಕಿಯ
ಬುದ್ಧಿ ನಮಗಿಲ್ಲ.
ಬದುಕಿನಲಿ ಜಗಳ ಬಿಟ್ಟಿಲ್ಲ,
ಶಾಂತಿ ನೆಮ್ಮದಿ ನಮಗಿಲ್ಲ,
ಜೊತೆಯಾಗಿ ಬಾಳುವ ಮನಸ್ಸಿಲ್ಲ,
ತುಳಿದು ಬಾಳುವದಕ್ಕಿಂತ
ತಿಳಿದು ಬಾಳಬೇಕೆಂದರು.


Leave a Reply

Back To Top