ಸುಜಾತಾ ರವೀಶ್ -ಗಜಲ್

ಕಾವ್ಯ ಸಂಗಾತಿ

ಸುಜಾತಾ ರವೀಶ್

ಗಜಲ್

ಮಾಡುವ ಕಾರ್ಯದಲ್ಲಿ ಪರಿಪೂರ್ಣತೆ ತೋರುವ ಬದ್ಧತೆ ಇರಲಿ ಗೆಳತಿ 
ಆಡುವ ಮಾತಿನಲ್ಲಿ ಪರಿಪಕ್ವತೆ ಸಾರುವ ಬಾಧ್ಯತೆ ಇರಲಿ ಗೆಳತಿ 

ಕಾಯಾ ವಾಚಾ ಮನಸಾ ತೊಡಗಿಸಿ ಕೊಂಡರೆ ಸಫಲತೆ ಸಿಗದಿರುವುದೇ 
ಭಯ ನಿವಾರಣೆಯ ಪರಿಕರಣೆ ನೀಡುವ ಕ್ಷಮತೆ ಇರಲಿ ಗೆಳತಿ 

ಜೀವನ ಮೂರು ದಿನದ ಆಟವೆಂದು ತಿಳಿಯುತಿರು ನೀನು ಸದಾಕಾಲ 
ಭಾವನೆ ತೊಡಕುಗಳ ಪರಾಮರಿಕೆ ಗೈಯ್ಯುವ ಮಗ್ನತೆ ಇರಲಿ ಗೆಳತಿ 

ಅಂಟಿಯೂ ಅಂಟದಂತ ಕಮಲಪತ್ರದ ಮೇಲಣ ಜಲಬಿಂದುವಾಗು 
ನಂಟುಗಳ ಗಂಟುಗಳ ಪರಿಗಣಿಸಿ ನುಡಿವ ಸೂಕ್ಷ್ಮತೆ ಇರಲಿ ಗೆಳತಿ 

ಸುಜಿಯ ಅಂತರಂಗದ ಆಲಾಪಗಳ ಕೇಳುವವಳು ನೀನೊಬ್ಬಳೇ 
ಗೌಜಿಯ ಗದ್ದಲದಲೂ ಪರಿಶೀಲಿಸಿ ನಡೆವ ಮಾನ್ಯತೆ ಇರಲಿ ಗೆಳತಿ


Leave a Reply

Back To Top