ಕನಸುಗಳು…ಹಮೀದಾ ಬೇಗಂ ದೇಸಾಯಿ ಕವಿತೆ-

ಕಾವ್ಯಸಂಗಾತಿ

ಕನಸುಗಳು

ಹಮೀದಾ ಬೇಗಂ ದೇಸಾಯಿ

ಏಸೊಂದು ಕನಸುಗಳು
ನೀ ಬರುವೆಯೆಂದು
ನಿನ್ನ ನೆನಪಲಿ ರಂಗಾಗಿ
ಮರಳಿ ನರಳಿ ಮಾಸುತಿವೆ..

ಭಾವಬಿಂದಿಗೆಯಲಿ
ಜೇನೊಲವು ತುಂಬಿ
ಕಾಯುತಲಿ ನಿನ್ನ ದಾರಿ
ಕೊರಗಿ ಹನಿಯಾಗಿ ಸೋರುತಿವೆ

ನೆಟ್ಟ ದಿಟ್ಟಿಯಲಿ
ಕಂಗಳೆರಡು ಕಾತರಿಸಿ
ಎವೆ ಮುಚ್ಚದೆ ನಿರುಕಿಸುತ
ದಣಿದು ಸೋತು ಬಳಲುತಿವೆ..

ಕನಸುಗಳೆಲ್ಲ ಮಂಜಿನೊಲು
ಇರುಳ ಕತ್ತಲೆಯಲಿ ಮೆಲ್ಲನೆ
ಕರಗಿ ಹೋಗುತಿವೆ ನೀ ಬಾರದೆ
ತಾರೆಗಳು ನನ್ನ ನೋಡಿ ನಗುತಲಿವೆ ಇನಿಯಾ…


Leave a Reply

Back To Top