ಕಾವ್ಯ ಸಂಗಾತಿ
ನನ್ನ ಪ್ರೀತಿಯ……
ಡಾ. ಶರಣಮ್ಮ ಗೊರೆಬಾಳ
ಮೋಹಕ ನಗೆಯ
ಸುಂದರ ಚಲುವೆ
ತುಸು ನಕ್ಕು ತುಸು ನಾಚಿ
ಮನ ಸೂರೆಗೊಂಡಿರುವೆ
ಹಚ್ಚ ಹಸಿರಿನ ನಡುವೆ
ಮೊಸರು ಚೆಲ್ಲಿದಂತೆ
ಅರಳಿ ನಗುತಿರುವೆ ಚೆಲುವೆ
ನಿನ್ನ ಸೊಗಸಿಗೆ ಬೆರಗಾದೆ
ಒಲವಿನ ಸಿರಿಯಾದೇ ಹೂವಿನ ರಾಣಿ
ಕಬ್ಬಿಗರ ಕಾವ್ಯದ ಕನ್ನಿಕೆ
ಎಲ್ಲೆಲ್ಲೂ ನಿನ್ನ ಪರಿಮಳದ ಛಾಯೇ ಸೋಪು ಸೆಂಟಿನಲ್ಲುಂಟು
ಊದಬತ್ತಿಯಲುಂಟು ದೇಶ ವಿದೇಶಕ್ಕೆ ನಿನ್ನ ಪರಿಮಳದ ನಂಟು
ನನ್ನ ಓಲೈಸಲು ನಲ್ಲ
ನಿನ್ನ ಹೊತ್ತು ತರುವನಲ್ಲ
ಮುತ್ತ ನೀಡಿ ಮುಡಿಸುವನು
ಮಾರುದ್ದ ನನ್ನ ಚೋಟುದ್ದ ಜಡೆಗೆ
ದೇವರ ಮುಡಿಗೆ
ಹೆಂಗಳೆಯರ ಜಡೆಗೆ
ಸೌಂದರ್ಯ ನಿನ್ನಿಂದ
ಸೌಬಾಗ್ಯ ನಿನ್ನಿಂದ ಪ್ರೇಮಾಂಕುರ ನಿನ್ನಿಂದಲೇ
ಯಾರೇ ಕತ್ತರಿಸಿ ಎಲ್ಲಿಯೇ
ನೆಟ್ಟರು ಬೆಳೆಯುವೆ ಸುಮ್ಮನೆ
ದುಃಖ ಮರೆಸುವ ಅರಳು ಮಲ್ಲಿಗೆ ಬರುವೆ ನಿನ್ನಲ್ಲಿಗೆ
ಸೋಜಿಗದ ಸೂಜಿ ಮಲ್ಲಿಗೆ
ದಂಡಿಯಾದ ದುಂಡು ಮಲ್ಲಿಗೆ
ನಿತ್ಯ ಕಟ್ಟುವೆ ನಿತ್ಯ ಮಲ್ಲಿಗೆ
ನನ್ನ ಪ್ರೀತಿಯ ಮೈಸೂರ ಮಲ್ಲಿಗೆ
ಸೊಗಸಾದ ಕವನ