ಸವಿತಾ ಇನಾಮದಾರ್ ಕವಿತೆ-ನಲ್ಲಾ…

ಕಾವ್ಯ ಸಂಗಾತಿ

ನಲ್ಲಾ…

ಸವಿತಾ ಇನಾಮದಾರ್

ನಿನ್ನ ಮನದ ಮಾತುಗಳನು ಕೇಳಲು ಕಾತರಿಸಿರುವೆ
ನಿನ್ನ ಮೌನಕ್ಕೆ ನಾಂದಿ ಹಾಕಲು ಕಾಯುತಿರುವೆ.
ಕರವ ಹಿಡಿದಾತನ ನೊಂದಿದ ಮನಕೆ
ಪ್ರೇಮ ಸಿಂಚನದಿ ತಂಪು ನೀಡ ಬಯಸುವೆ.

ಸಿರಿತನದ ಸುಖದಲ್ಲಿ ತೇಲಿಸಿದವನು ನೀನು
ಪ್ರೀತಿಯ ಹೊಳೆಯಲ್ಲಿ ಮೀಯಿಸಿದವನೂ ನೀನು
ಬದುಕಿನ ಸಂಘರ್ಷದಲ್ಲಿ ನಾ ಸಹಭಾಗಿಯಾಗುವೆ
ನಿನ್ನ ನೆರಳಿನಂತೆ ಸದಾ ಜೊತೆಗಿರಲು ಬಯಸುವೆ.


Leave a Reply

Back To Top