ರಾಜನಂದಾ ಘಾರ್ಗಿ-ಗಜಲ್

ಕಾವ್ಯ ಸಂಗಾತಿ

ಗಜಲ್

ರಾಜನಂದಾ ಘಾರ್ಗಿ

ಹುಟ್ಟಿನೊಂದಿಗೆ ಬೆನ್ನಿಗೆ ಅಂಟಿದ ಕರಾಳ ಸತ್ಯ ನೀನು
ನೆನಪಿಸುವೆ ಜೀವನದ ನಶ್ವರತೆಯನ್ನು ನಿತ್ಯ ನೀನು

ಮೋಜಿನಲಿ ಮೈಮರೆತ ಮನುಜ ಮರೆತಾಗ ನಿನ್ನನು
ತೋರುವೆ ರುದ್ರ ಭೀಕರ ತಾಂಡವ ನೃತ್ಯ ನೀನು

ಶಾಂತಸಾಗರದಂತೆ ನಿನ್ನ ಆಳವ ಅಡಗಿಸಿಡುವೆ
ಅಪ್ಪಿಕೊಳ್ಳುವೆ ಕೆಲವರನು ಮಾತೆಯಂತೆ ಸ್ತುತ್ಯ ನೀನು

ಮಾಯಾವಿಯಂತೆ ಕಾಡುವೆ ಕೆಲ ನೃತದೃಷ್ಟರನ್ನು
ಹಾಸಿಗೆಯಲ್ಲಿ ನರಳುತಿರುವವರಿಗೆ ಅಸತ್ಯ ನೀನು

ಜೀವನದ ಜೊತೆ ಮರಣವ ಒಪ್ಪಿಕೊಂಡಿಹಳು ರಾಜಿ
ಬಿಗಿದಪ್ಪಿ ಮಮತೆಯಲಿ ನಿರ್ವಹಿಸು ನಿನ್ನ ಕೃತ್ಯ ನೀನು


2 thoughts on “ರಾಜನಂದಾ ಘಾರ್ಗಿ-ಗಜಲ್

Leave a Reply

Back To Top